ಐಪಿಎಲ್ ಫೈನಲ್ ಪಂದ್ಯದ ದಿನಾಂಕ, ಸ್ಥಳ ಬಹಿರಂಗಪಡಿಸಿದ ಬಿಸಿಸಿಐ

ಹೊಸದಿಲ್ಲಿ, ಎ.21: ಕೊನೆಗೂ ಎಲ್ಲ ಊಹಾಪೋಹಗಳಿಗೆ ಶುಕ್ರವಾರ ತೆರೆ ಎಳೆದಿರುವ ಬಿಸಿಸಿಐ, ಐಪಿಎಲ್-2023ರ ನಾಕೌಟ್ ಹಂತದ ವೇಳಾಪಟ್ಟಿ ಹಾಗೂ ಸ್ಥಳಗಳ ವಿವರವನ್ನು ಪ್ರಕಟಿಸಿದೆ.
ನಿರೀಕ್ಷೆಯಂತೆಯೇ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್ ಕ್ರಮವಾಗಿ ಮೇ 26 ಹಾಗೂ ಮೇ 28ರಂದು ಐಪಿಎಲ್ ಕ್ವಾಲಿಫೈಯರ್-2 ಹಾಗೂ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಲಿದೆ.
ಕ್ವಾಲಿಫೈಯರ್-1 ಹಾಗೂ ಎಲಿಮಿನೇಟರ್ ಸುತ್ತು ಚೆನ್ನೈನಲ್ಲಿ ಕ್ರಮವಾಗಿ ಮೇ 23 ಹಾಗೂ 24ರಂದು ನಡೆಯಲಿದೆ ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಗುಜರಾತ್ ಟೈಟಾನ್ಸ್‌ನ ತವರು ಮೈದಾನವಾಗಿರುವ ಅಹಮದಾಬಾದ್ 1,32,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಕಳೆದ ವರ್ಷ ಕೂಡ ಫೈನಲ್ ಆತಿಥ್ಯವಹಿಸಿತ್ತು. ಮಾ.31ರಂದು ಆರಂಭವಾಗಿರುವ ಐಪಿಎಲ್‌ನ ಲೀಗ್ ಹಂತವು ಮೇ 21ರಂದು ಮುಕ್ತಾಯವಾಗಲಿದೆ.
Next Story





