Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸತತ...

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ ಕಾಯ್ದುಕೊಂಡ ದ.ಕ.ಜಿಲ್ಲೆ

21 April 2023 8:59 PM IST
share
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ ಕಾಯ್ದುಕೊಂಡ ದ.ಕ.ಜಿಲ್ಲೆ

ಮಂಗಳೂರು : ಪ್ರಸಕ್ತ (2022-23) ಸಾಲಿಗೆ ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶವು ಶುಕ್ರವಾರ ಪ್ರಕಟಗೊಂಡಿದ್ದು, ದ.ಕ.ಜಿಲ್ಲೆಯು ಸತತ ನಾಲ್ಕನೇ ಬಾರಿಗೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿವೆ.

ದ.ಕ.ಜಿಲ್ಲೆಯು ಕಳೆದ ಬಾರಿ ಶೇ.88.02ನೊಂದಿಗೆ ಪ್ರಥಮ ಸ್ಥಾನಿಯಾಗಿದ್ದರೆ, ಈ ಬಾರಿ ಶೇ.95.33 ಫಲಿತಾಂಶ ದಾಖಲಿಸಿ ಪ್ರಥಮ ಸ್ಥಾನದಲ್ಲೇ ಗುರುತಿಸಿಕೊಂಡಿವೆ. ಜಿಲ್ಲೆಯ 34,069 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 31,501 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 15,340 ಬಾಲಕರು ಮತ್ತು 16,161 ಬಾಲಕಿಯರಿದ್ದಾರೆ.

ಜಿಲ್ಲೆಯ ವಿಜ್ಞಾನ ವಿಭಾಗದಲ್ಲಿ ಇಬ್ಬರು ತೃತೀಯ, ವಾಣಿಜ್ಯ ವಿಭಾಗದ ಒಬ್ಬರು ಪ್ರಥಮ ಹಾಗೂ ಮೂವರು ದ್ವಿತೀಯ ಮತ್ತು ಇಬ್ಬರು ತೃತೀಯ, ಕಲಾ ವಿಭಾಗದ ಒಬ್ಬರು ತೃತೀಯ ಸ್ಥಾನ ಪಡೆಯುವುದರೊಂದಿಗೆ 9 ಮಂದಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

*ವಿಜ್ಞಾನ ವಿಭಾಗ: ಬಂಟ್ವಾಳ ತಾಲೂಕಿನ ಅಳಿಕೆಯ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ಯೋಗೀಶ್ ತುಕರಾಮ್ ಬಡಾಚಿ ಮತ್ತು ಮೂಡುಬಿದಿರೆಯ ಆಳ್ವಾಸ್ ಪಪೂ ಕಾಲೇಜಿನ ಪ್ರಚಿತಾ ಎಂ. ತಲಾ 594 ಅಂಕ ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

*ವಾಣಿಜ್ಯ ವಿಭಾಗ: ಮೂಡುಬಿದಿರೆಯ ಆಳ್ವಾಸ್ ಪಪೂ ಕಾಲೇಜಿನ ಅನನ್ಯ ಕೆ.ಎ. 600ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಮತ್ತು ಮೂಡುಬಿದಿರೆಯ ಎಕ್ಸಲೆಂಟ್ ಪಪೂ ಕಾಲೇಜಿನ ಕುಶಿ ಬಾಗಲಕೋಟ್, ನಗರದ ಮೇರಿಹಿಲ್‌ನ ವಿಕಾಸ್ ಪಪೂ ಕಾಲೇಜಿನ ಸ್ವಾತಿ ಎಸ್. ಪೈ, ಮೂಡುಬಿದಿರೆಯ ಆಳ್ವಾಸ್ ಪಪೂ ಕಾಲೇಜಿನ ಕೆ. ದಿಶಾ ರಾವ್ ತಲಾ 596 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಕೋಡಿಯಾಲ್‌ಬೈಲ್‌ನ ಕೆನರಾ ಪಪೂ ಕಾಲೇಜಿನ ಎನ್. ಪ್ರತೀಕ್ ಮಲ್ಯ, ಪುತ್ತೂರು ವಿವೇಕಾನಂದ ಪಪೂ ಕಾಲೇಜಿನ ಆದಿತ್ಯ ನಾರಾಯಣ ಪಿಎಸ್ ತಲಾ 595 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.

*ಕಲಾ ವಿಭಾಗ: ಪುತ್ತೂರು ವಿವೇಕಾನಂದ ಪಪೂ ಕಾಲೇಜಿನ ಮಂಜುಶ್ರೀ 591 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿದ್ದಾರೆ.

*ಕಳೆದ ಐದು ವರ್ಷದ ಸಾಧನೆ

2017-18-ಶೇ.91.49 (ಪ್ರಥಮ)
2018-19-ಶೇ. 90.91 (ದ್ವಿತೀಯ)
2019-20-ಶೇ. 90.71 (ಪ್ರಥಮ)
2020-21-ಶೇ.100 (ಪ್ರಥಮ)
2021-22-ಶೇ. 88.02 (ಪ್ರಥಮ)
 
*ಶೇ.100 ಫಲಿತಾಂಶ ದಾಖಲಿಸಿದ ಪಪೂ ಕಾಲೇಜುಗಳು
1. ಪಂಜ ಸರಕಾರಿ ಪಪೂ ಕಾಲೇಜು (43 ವಿದ್ಯಾರ್ಥಿಗಳು)
2. ಅಡ್ಯನಡ್ಕ (ಅನುದಾನಿತ) ಜನತಾ ಪಪೂ ಕಾಲೇಜು (81 ವಿದ್ಯಾರ್ಥಿಗಳು)
3. ಸುಳ್ಯದ (ಅನುದಾನಿತ) ಶಾರದಾ ಪಪೂ ಕಾಲೇಜು (90 ವಿದ್ಯಾರ್ಥಿಗಳು)
4. ಅಳಕೆ (ಅನುದಾನಿತ) ಸತ್ಯಸಾಯಿ ಪಪೂ ಕಾಲೇಜು (208 ವಿದ್ಯಾರ್ಥಿಗಳು)
5. ಮೂಡುಬಿದಿರೆ (ಅನುದಾನಿತ) ಮಹಾವೀರ ಪಪೂ ಕಾಲೇಜು (100 ವಿದ್ಯಾರ್ಥಿಗಳು)
6. ನಂತೂರು (ಅನುದಾನರಹಿತ) ಶ್ರೀಭಾರತಿ ಪಪೂ ಕಾಲೇಜು (16 ವಿದ್ಯಾರ್ಥಿಗಳು)
7. ಸುಳ್ಯ ನಿಂತಿಕಲ್ಲು (ಅನುದಾನರಹಿತ) ಕೆಎಸ್ ಗೌಡ ಪಪೂ ಕಾಲೇಜು (25 ವಿದ್ಯಾರ್ಥಿಗಳು)
8. ತಲಪಾಡಿಯ (ಅನುದಾನರಹಿತ) ಫಲಾಹ್ ಪಪೂ ಕಾಲೇಜು (23 ವಿದ್ಯಾರ್ಥಿಗಳು)
9. ಆತೂರಿನ (ಅನುದಾನರಹಿತ) ಆಯಿಶಾ ಪಪೂ ಕಾಲೇಜು (19 ವಿದ್ಯಾರ್ಥಿಗಳು)
10. ಕಾಟಿಪಳ್ಳ (ಅನುದಾನರಹಿತ) ಹಸನಬ್ಬ ಮಾಸ್ಟರ್ ಪಪೂ ಕಾಲೇಜು (27 ವಿದ್ಯಾರ್ಥಿಗಳು)
11. ದೇರಳಕಟ್ಟೆಯ (ಅನುದಾನರಹಿತ) ಕಣಚೂರು ಪಪೂ ಕಾಲೇಜು (121 ವಿದ್ಯಾರ್ಥಿಗಳು)
12. ಅತ್ತಾವರ (ಅನುದಾನರಹಿತ) ಎಸ್.ಎಂ. ಕುಶೆ ಪಪೂ ಕಾಲೇಜು (60 ವಿದ್ಯಾರ್ಥಿಗಳು)
13. ಮಂಗಳೂರು (ಅನುದಾನರಹಿತ) ಸಂತ ಆ್ಯನ್ಸ್ ಪಪೂ ಕಾಲೇಜು (114 ವಿದ್ಯಾರ್ಥಿಗಳು)
14. ತಲಪಾಡಿ (ಅನುದಾನರಹಿತ) ಶಾರದಾ ನಿಕೇತನ ಪಪೂ ಕಾಲೇಜು (88 ವಿದ್ಯಾರ್ಥಿಗಳು)
15. ವೇಣೂರು (ಅನುದಾನರಹಿತ) ಕುಂಭಶ್ರೀ ಪಪೂ ಕಾಲೇಜು (34 ವಿದ್ಯಾರ್ಥಿಗಳು)
16. ಕುಂಬ್ರ (ಅನುದಾನರಹಿತ) ಮರ್ಕಝುಲ್ ಪಪೂ ಕಾಲೇಜು (77 ವಿದ್ಯಾರ್ಥಿಗಳು)
17. ಉಳ್ಳಾಲ (ಅನುದಾನರಹಿತ) ಹಝ್ರತ್ ಪಪೂ ಕಾಲೇಜು (40 ವಿದ್ಯಾರ್ಥಿಗಳು)
18. ಕೊಟ್ಟಾರ ಕ್ರಾಸ್ (ಅನುದಾನರಹಿತ) ದಿ ಲರ್ನಿಂಗ್ ಸೆಂಟರ್ ಪಪೂ ಕಾಲೇಜು (227 ವಿದ್ಯಾರ್ಥಿಗಳು)
19. ಉಜಿರೆ (ಅನುದಾನರಹಿತ) ಅನುಗ್ರಹ ಪಪೂ ಕಾಲೇಜು (47 ವಿದ್ಯಾರ್ಥಿಗಳು)
20. ಬಪ್ಪಳಿಗೆ (ಅನುದಾನರಹಿತ) ಅಂಬಿಕಾ ಪಪೂ ಕಾಲೇಜು (222 ವಿದ್ಯಾರ್ಥಿಗಳು)
21. ಉಳ್ಳಾಲ (ಅನುದಾನರಹಿತ) ಇಸ್ಲಾಹಿ ಪಪೂ ಕಾಲೇಜು (20 ವಿದ್ಯಾರ್ಥಿಗಳು)
 
600ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿರುವ ಮೂಡುಬಿದಿರೆಯ ಆಳ್ವಾಸ್ ಪಪೂ ಕಾಲೇಜಿನ ವಾಣಿಜ್ಯ ವಿಭಾಗದ ಅನನ್ಯ ಕೆ.ಎ. ಕುಶಾಲನಗರದ ಅಶೋಕ್ ಕೆ.ಎ.-ನಳಿನಿ ಜಿ. ದಂಪತಿಯ ಪುತ್ರಿ. ತಂದೆ ನಿವೃತ್ತ ಸೈನಿಕ. ತಾಯಿ ಶಿಕ್ಷಕಿ.

ತಂದೆ ಮತ್ತು ತಾಯಿಯ ಪ್ರೋತ್ಸಾಹ, ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಕಷ್ಟ ಪಟ್ಟು ದಿನನಿತ್ಯ ಓದಿದ್ದೆ. ಉನ್ನತ ಸ್ಥಾನದ ನಿರೀಕ್ಷೆಯಲ್ಲಿದ್ದೆ. ಆದರೆ 600ರಲ್ಲಿ 600 ಅಂಕ ಸಿಕ್ಕಿರುವುದರಿಂದ ಖುಷಿಯಾಗಿದೆ. ಮುಂದೆ ಕಂಪೆನಿ ಸೆಕ್ರೆಟರಿಯಾಗಬೇಕು ಎಂಬ ಗುರಿ ಹಾಕಿಕೊಂಡಿರುವೆ ಎಂದು ಅನನ್ಯ ಕೆ.ಎ. ಸಂತಸ ಹಂಚಿಕೊಂಡಿದ್ದಾರೆ.

*ಓದು, ಓದು ಅಂತ ಯಾರೂ ನನ್ನ ಮೇಲೆ ಒತ್ತಡ ಹಾಕುತ್ತಿರಲಿಲ್ಲ. ಮನೆಯವರು ಮತ್ತು ಸ್ನೇಹಿತರ ಜೊತೆಯೂ ಬೆರೆಯುತ್ತಿದ್ದೆ. ಅದರ ಮಧ್ಯೆ ದಿನನಿತ್ಯ ಸಮಯ ನಿಗದಿಪಡಿಸಿ ಓದುತ್ತಿದ್ದೆ, ಹೀಗಾಗಿ ಅಂಕ ಗಳಿಸಲು ಸುಲಭ ವಾಗಿದೆ ಎನ್ನುತ್ತಾರೆ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ತಂದುಕೊಟ್ಟ ಮಂಗಳೂರಿನ ಕೊಂಚಾಡಿ ವಿಮಾನ ನಿಲ್ದಾಣ ರಸ್ತೆಯ ಕೆನರಾ ವಿಕಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಎಸ್.ಪೈ. ಕರ್ಣಾಟಕ ಬ್ಯಾಂಕ್ ಉದ್ಯೋಗಿ ಸುರೇಂದ್ರ ಪೈ ಕೆ. ಹಾಗೂ ಗೃಹಿಣಿ ಲತಾ ಎಸ್.ಪೈಯ ಪುತ್ರಿ ಸ್ವಾತಿ ಎಸ್.ಪೈ ಮುಂದೆ ಬಿಕಾಂ ಜತೆಗೆ ಸಿಎ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ.

‘ಎಸೆಸೆಲ್ಸಿಯಲ್ಲಿ ನನಗೆ ಅಗ್ರಸ್ಥಾನ ಬಂದಿತ್ತು. ದ್ವಿತೀಯ ಪಿಯುಸಿಯಲ್ಲಿ ಉನ್ನತ ಸ್ಥಾನದ ನಿರೀಕ್ಷೆ ಇರಲಿಲ್ಲ. ತರಗತಿಯ ಕಲಿಕೆಯಲ್ಲದೆ ಪ್ರತೀ ದಿನ 5 ಗಂಟೆ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೆ. ಕೆನರಾ ಕಾಲೇಜಿನಲ್ಲಿ ಶಿಕ್ಷಕರು ಉತ್ತಮ ಬೋಧನೆ ಮಾಡುತ್ತಿದ್ದರು. ಹೀಗಾಗಿ ಉತ್ತಮ ಅಂಕ ಪಡೆಯಲು ಅನುಕೂಲವಾಯಿತು ಎನ್ನುತ್ತಾರೆ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ತೃತೀಯ ಸ್ಥಾನ ತಂದುಕೊಟ್ಟ ಮಂಗಳೂರಿನ ಕೆನರಾ ಪಿಯು ಕಾಲೇಜಿನ ಎನ್. ಪ್ರತೀಕ್ ಮಲ್ಯ. ಬಂಟ್ವಾಳದಲ್ಲಿ ಡೇರಿ ಉದ್ಯಮ ನಡೆಸುತ್ತಿರುವ ಎನ್. ವೆಂಕಟೇಶ್ ಮಲ್ಯ ಹಾಗೂ ಮನೆಯಲ್ಲಿ ಟ್ಯೂಷನ್ ಬೋಧಿಸುತ್ತಿರುವ ರಾಧಿಕಾ ವಿ. ಮಲ್ಯ ಅವರ ಪುತ್ರ ಎನ್. ಪ್ರತೀಕ್ ಮಲ್ಯ ಅವರು ಮುಂದೆ ಸಿಎ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಎಂ.ಎ. ನಿಶ್ಮಾ ಅವರು ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 547 (ಶೇ.91.16) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನ ಅಬ್ದುರ‌್ರಹ್ಮಾನ್ ಮುಸ್ಲಿಯಾರ್-ಉಮೈಮಾ ದಂಪತಿಯ ಪುತ್ರಿಯಾಗಿದ್ದಾರೆ. ಈಕೆಯ ಅಕ್ಕ ಆಯಿಶಾ ಅವರು ಪ್ರಥಮ ಯತ್ನದಲ್ಲೇ ಸಿಎ ತೇರ್ಗಡೆಯಾಗಿದ್ದರು.

ಉಳ್ಳಾಲ ಅಳೇಕಲ ಮದನಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.88 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಆಯಿಶಾ ಮುಸ್ಕಾನ 548 (ಶೇ.91.33) ಮತ್ತು ಮುಹಮ್ಮದ್ ಅರಾಫತ್ 544 (ಶೇ. 90.66) ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದಂತೆ 25 ಮಂದಿ ಪ್ರಥಮ ಶ್ರೇಣಿ ಮತ್ತು 26 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮಂಗಳೂರು ಸಮೀಪದ ಅಡ್ಯಾರ್‌ನ ಬರಕಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಯಿಶಾ ಅಝ್ಮಿಯಾ 582 (ಶೇ.97) ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಗಡಿಯಾರ್ ಹೌಸ್‌ನ ಮುಹಮ್ಮದಲಿ-ನೆಫಿಸಾ ದಂಪತಿಯ ಪುತ್ರಿ.

share
Next Story
X