ಹಿರಾ ಸಂಯುಕ್ತ ಪಪೂ ಕಾಲೇಜಿಗೆ ಶೇ.100 ಫಲಿತಾಂಶ

ಮಂಗಳೂರು, ಎ.21: ಬಬ್ಬುಕಟ್ಟೆಯ ಹಿರಾ ಸಂಯುಕ್ತ ಪಪೂ ಕಾಲೇಜು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಶೇ.100 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.94.1 ಫಲಿತಾಂಶ ದಾಖಲಿಸಿದೆ.
ಒಟ್ಟು 105 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಅದರಲ್ಲಿ 24 ಮಕ್ಕಳು ವಿಶಿಷ್ಟ ಶ್ರೇಣಿ ಹಾಗೂ 62 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದ ಫಾತಿಮಾ ಜಸೀಲಾ 588 (ಶೇ.98), ವಾಣಿಜ್ಯ ವಿಭಾಗದ ತಸ್ಕೀನ್ ಸಲಾಂ 569 (ಶೇ.94.83), ಕಲಾ ವಿಭಾಗದ ಫಾತಿಮಾ ಕನ್ಸಾ 561 (ಶೇ.93.5), ವಿಜ್ಞಾನ ವಿಭಾಗದ ಅಲೀಮಾ ನಿದಾ 549 (ಶೇ.91.5) ಅಂಕ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
Next Story





