ಫೇಸ್‌ಬುಕ್‌ನಲ್ಲಿ ಧರ್ಮದ ಹೆಸರಿನಲ್ಲಿ ಶಾಂತಿ ಭಂಗ ಯತ್ನ: ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಪ್ರಕರಣ ದಾಖಲು

ಬೈಂದೂರು, ಎ.21: ಫೇಸ್‌ಬುಕ್‌ನಲ್ಲಿ ಧರ್ಮದ ಹೆಸರಿನಲ್ಲಿ ಮತದಾರರನ್ನು ಎತ್ತಿಕಟ್ಟುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ವಾಟ್ಸಾಪ್ ದುರ್ಬಳಕೆ ಮಾಡಿಕೊಂಡು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಮೂರ್ತಿ ಬಿ.ಎಸ್. ಹಾಗೂ ರಂಜಿತ್ ಎಂಬವರು ಮುಖ್ಯ ಚುನಾವಣಾಧಿ ಕಾರಿ ಬೆಂಗಳೂರು ಇವರಿಗೆ ದೂರು ನೀಡಿದ್ದರು.
ಗುರುರಾಜ್ ಗಂಟಿಹೊಳೆ ಬೈಂದೂರಿನ ಶಾಸಕರಾಗಲಿ ಎಂಬ ಹೆಸರಿನಲ್ಲಿರುವ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಇದ್ದು ಅದನ್ನು ರಾಜೇಶ್ ಕೊಟಾರಿ ಎಂಬ ಫೇಸ್‌ಬುಕ್ ಖಾತೆಯನ್ನು ಹೊಂದಿದ ವ್ಯಕ್ತಿಯು ತನ್ನ ಫೇಸ್‌ಬುಕ್ ಖಾತೆಯ ಮೂಲಕ ಶೇರ್ ಮಾಡಿದ್ದನು. ಆತ ನವೀನ್ ಗಂಗೊಳ್ಳಿ ಎಂಬ ಬರಹ ಇರುವ ಪೋಸ್ಟ್‌ನ್ನು ಮೊಬೈಲ್‌ನಲ್ಲಿ ಶೇರ್ ಮಾಡಿ ಸಮಾಜದಲ್ಲಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆ ಉಂಟು ಮಾಡಿ ಆ ಮೂಲಕ ಕಾನೂನು ವಿರುದ್ಧವಾದ ಯಾವುದೇ ಕೃತ್ಯವನ್ನು ಮಾಡುವ ಮೂಲಕ ಹಾಗೆ ಉದ್ರೇಕಿಸುವದರಿಂದ ಸಮಾಜದಲ್ಲಿ ದೊಂಬಿ ಉಂಟು ಮಾಡುವ ಕೃತ್ಯ ಮಾಡಿದ್ದನು ಎಂದು ದೂರಲಾಗಿದೆ.
ಧರ್ಮದ ಹೆಸರಿನಲ್ಲಿ ಮತದಾರರನ್ನು ಎತ್ತಿಕಟ್ಟುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ರುವುದಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಎಫ್‌ಎಸ್‌ಟಿ ಅಧಿಕಾರಿ ವಿಶ್ವನಾಥ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.







