ಮೋದಿ ಆಶೀರ್ವಾದಕ್ಕಿಂತ ಕರ್ನಾಟಕದ ಜನತೆಗೆ ಬಿಜೆಪಿಯಿಂದ ಆಗಿರುವ ನಷ್ವವೇ ಹೆಚ್ಚು: ಚರಣ್ ಸಿಂಗ್ ಸಪ್ರಾ

ಮಂಗಳೂರು: ಕರ್ನಾಟಕ ಸರಕಾರಕ್ಕೆ ಮೋದಿಯವರ ಆಶೀರ್ವಾದ ದಿಂದ ಅಭಿವೃದ್ಧಿ ಎಂಬ ಹೇಳಿಕೆ ನೀಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಹೇಳಿಕೆಯಾಗಿದೆ. ಈ ಹೇಳಿಕೆಯನ್ನು ಖಂಡಿಸುವುದಾಗಿ ಎಐಸಿಸಿ ವಕ್ತಾರ ಚರಣ್ ಸಿಂಗ್ ಸಪ್ರಾ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ವೀಕ್ಷಕರಾಗಿ ಆಗಮಿಸಿದ ಅವರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿರುವ ಶೇ.40 ಕಮೀಷನ್ ಪಡೆದಿರುವ ಆರೋಪ ಹೊಂದಿರುವ ಬಿಜೆಪಿ ಕಳೆದ ನಾಲ್ಕು ವರ್ಷದಲ್ಲಿ 1.5 ಲಕ್ಷ ಕೋಟಿ ರೂ ನಷ್ಟ ಉಂಟು ಮಾಡಿದೆ. ರಾಜ್ಯದಿಂದ ಒಂದು ರೂ. ತೆರಿಗೆ ಸಂಗ್ರಹವಾಗಿ ಕೇಂದ್ರಕ್ಕೆ ಹೋದ ಹಣದಲ್ಲಿ ರಾಜ್ಯಕ್ಕೆ ಬಂದಿರುವುದು ಕೇವಲ 15 ಪೈಸೆ. ಕರ್ನಾಟಕದಿಂದ 25 ಲೋಕ ಸಭಾ ಸದಸ್ಯ ರನ್ನು ಹೊಂದಿದ್ದ ಕರ್ನಾಟಕ 2019 ಕರ್ನಾಟಕದ ಬರದಿಂದ ರೂ.35,000 ಕೋಟಿ ನಷ್ಟ ವಾದರೂ ದೊರೆತ ಪರಿಹಾರ ಕೇವಲ ರೂ.1869 ಕೋಟಿ ಮಾತ್ರ. 2017ರ ನೆರೆ ಹಾನಿಯಾದ ಸಂದರ್ಭದಲ್ಲಿ ಮಹಾರಾಷ್ಟ್ರ ಕ್ಕೆ ರೂ,8195 ಕೋಟಿ, ಗುಜರಾತ್ ಗೆ 3894 ಕೋಟಿ, ರಾಜಾಸ್ಥಾನಕ್ಕೆ 2153 ಕೋಟಿ ರೂ ಪರಿಹಾರ ನೀಡಲಾಗಿತ್ತು. ಆದರೆ ಕರ್ನಾಟಕ ಕ್ಕೆ ಕೇವಲ 1435 ಕೋಟಿ ರೂ ಪರಿಹಾರ ನೀಡಲಾಗಿದೆ.
ಕೇಂದ್ರ ಸರ್ಕಾರದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ ಕನ್ನಡದಲ್ಲಿ ಬರೆಯಲು ಆಶೀರ್ವಾದ ನೀಡಲಾಗಿಲ್ಲ. ಗಡಿ ಪ್ರದೇಶದ ವಿಚಾರದಲ್ಲಿ, ನೀರು, ಮೇಕೆದಾಟು ವಿಚಾರದಲ್ಲಿಯೂ ಕರ್ನಾಟಕದ ಜನತೆಗೆ ನ್ಯಾಯ ದೊರೆತ್ತಿಲ್ಲ ರಾಜ್ಯದ ಜನತೆಗೆ ನೀಡಿದ ಪ್ರಣಾಳಿಕೆಯಲ್ಲಿ ಯೂ ಶೇ 90 ಈಡೇರಿಲ್ಲ ಮೋದಿಯ ಆಶೀರ್ವಾದ ದ ಬದಲು ಕರ್ನಾಟಕದ ಜನತೆಗೆ ನೀಡಬೇಕಾದ ಸೌಲಭ್ಯ ಗಳನ್ನು ನೀಡದೆ ಮೋದಿ ಸರಕಾರ ನಷ್ಟ ಉಂಟು ಮಾಡಿದೆ ಎಂದು ಚರಣ್ ಸಿಂಗ್ ಸಪ್ರಾ ಆರೋಪಿಸಿದ್ದಾರೆ.
ಭೃಷ್ಟಾಚಾರದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡ ಬೇಕಾಗಿ ಬಂದ ಪಕ್ಷದ ಮುಖಂಡರನ್ನು ಚುನಾವಣಾ ಪ್ರಚಾರಕ್ಕೆ ಮೋದಿ ಆಹ್ವಾನ ನೀಡುವ ಮೂಲಕ ರಾಜ್ಯ ದಲ್ಲಿ ಭೃಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಚರಣ್ ಸಿಂಗ್ ಆರೋಪಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡ ರಾದ ಮಿಥುನ್ ರೈ,ವಿನಯ ರಾಜ್,ಸಂತೋಷ್ ಕುಮಾರ್ ಶೆಟ್ಟಿ, ನೀರಜ್ ಪಾಲ್,ಚರಣ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.