Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈದಿನ ಸಂಭ್ರಮ

ಈದಿನ ಸಂಭ್ರಮ

ಇಂದು ಈದುಲ್ ಫಿತ್ರ್ ಸಂಭ್ರಮ. ಜಾತಿ ಧರ್ಮಗಳ ಗಡಿಗಳನ್ನು ಮೀರಿ ಎಲ್ಲರನ್ನೂ ಬೆಸೆದ ಸೌಹಾರ್ದ ಸಂಭ್ರಮದ ನೆನಪುಗಳನ್ನು ಓದುಗರು ಇಲ್ಲಿ ಮೊಗೆದು ಹಂಚಿದ್ದಾರೆ.

21 April 2023 11:42 PM IST
share
ಈದಿನ ಸಂಭ್ರಮ
ಇಂದು ಈದುಲ್ ಫಿತ್ರ್ ಸಂಭ್ರಮ. ಜಾತಿ ಧರ್ಮಗಳ ಗಡಿಗಳನ್ನು ಮೀರಿ ಎಲ್ಲರನ್ನೂ ಬೆಸೆದ ಸೌಹಾರ್ದ ಸಂಭ್ರಮದ ನೆನಪುಗಳನ್ನು ಓದುಗರು ಇಲ್ಲಿ ಮೊಗೆದು ಹಂಚಿದ್ದಾರೆ.

ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುವ ಪೆರ್ನಾಲ್

- ಕಲ್ಲೂರು ನಾಗೇಶ್, ಪ್ರಕಾಶಕರು, ಆಕೃತಿ ಪ್ರಕಾಶನ ಮಂಗಳೂರು

‘ಕುಟ್ಟಿ ಸಂಕಪ್ಪಾ, ಉಸಾರಾ ವೊಡೂ’ ಎಂದು ಹೇಳುತ್ತಾ ಗದ್ದೆ ಬದುವಿನಲ್ಲಿ ಓಡಾಡುತ್ತಿದ್ದ ನಮ್ಮ ತಲೆಯನ್ನು ನೇವರಿಸಿ ಬೆನ್ನು ತಟ್ಟಿದರೆಂದರೆ ತಿರುಗಿ ನೋಡಬೇಕಾದ್ದಿಲ್ಲ; ಅದು ನಮ್ಮ ಗದ್ದೆಗಳಾಚೆ ಮನೆಯ ಪುತ್ತಬ್ಬ ಬ್ಯಾರಿಯವರೇ. ನಮ್ಮನ್ನೆಲ್ಲ ‘ಕುಟ್ಟಿ ಸಂಕಪ್ಪಾ’ ಎಂದು ಅವರೇ ಇಟ್ಟ ಹೆಸರಿನಿಂದ ಕೊಂಡಾಟದಲ್ಲಿ ಕರೆಯುತ್ತಾ ಕಾಳಜಿಯಿಂದ ‘‘ನೀನು ಜಾಣನಾಗಬೇಕು’’ ಎನ್ನುತ್ತ ಪ್ರೀತಿಯ ನಗು ಸೂಸುತ್ತಿದ್ದರು. ದೈತ್ಯದೇಹಿಯಾಗಿ ಗೌರವವರ್ಣದ ಆಕರ್ಷಕ ನಗುವಿನ ದೊಡ್ಡ ಹೊಟ್ಟೆಯ ಪುತ್ತಬ್ಬ ಬ್ಯಾರಿಯೆಂದರೆ ನಮಗೂ ಅಚ್ಚುಮೆಚ್ಚು. ಅವರ ಹೊಟೇಲಂಗಡಿಯಲ್ಲಿ ಆಗಾಗ ಕೊಡುತ್ತಿದ್ದ ಅವಲಕ್ಕಿ, ಪತ್ರ್, ಗೆಂಡದಡ್ಯೆಗಳೂ ಪೆರ್ನಾಲ್ ಹಬ್ಬ ಬಂದಾಗ ಅವರು ಹಂಚುತ್ತಿದ್ದ ನೈಚೋರ್ ಎಂಬ ಘಮ್ಮನೆಯ ಪರಿಮಳದ ತುಪ್ಪದ ಅನ್ನವೂ ಮಕ್ಕಳಾದ ನಮಗೆ ಅವರ ಮೇಲಿನ ಮೆಚ್ಚುಗೆಗೆ ಇನ್ನೊಂದು ಕಾರಣವಾಗಿತ್ತು.

ಕಲ್ಲೂರೆಂದರೆ ಸಣ್ಣ ಹಳ್ಳಿ. ಹಿಂದೂಗಳು, ಮುಸ್ಲಿಮರೂ, ಕ್ರಿಶ್ಚಿಯನ್ನರೂ ಕೂಡು ಕುಟುಂಬಗಳಲ್ಲಿ ವಾಸವಿದ್ದ ಹತ್ತಾರು ಮನೆಗಳಿದ್ದ ಹಳ್ಳಿಯದು. ನಮ್ಮ ಹೊಲದಾಚೆ ತಾಯಿ, ಮಕ್ಕಳೆಂದು ಹತ್ತಿಪ್ಪತ್ತು ಮಂದಿಯಿದ್ದ ಸಂಸಾರ ಪುತ್ತಬ್ಬ ಬ್ಯಾರಿಯದ್ದು. ನಮ್ಮ ಮನೆಯೂ ಹಿರಿಯರು, ಮಕ್ಕಳೆಂದು ಒಟ್ಟಾರೆ ಹತ್ತು ಹದಿನೈದು ಮಂದಿಯಿದ್ದ ದೊಡ್ಡ ಕುಟುಂಬ. ಎರಡೂ ಮನೆಗಳ ಅಂತರ ಕೂಗಳತೆಯಷ್ಟೇ ಆಗಿದ್ದುದರಿಂದ ಕೋಳಿ ಮರಿಗಳನ್ನು ಹಿಡಿಯಲು ಧಾವಿಸುವ ಗಿಡುಗನನ್ನು ಕಂಡರೆ ಪುತ್ತಬ್ಬ ಬ್ಯಾರಿಯ ದೊಡ್ಡ ಸ್ವರದ ಕೂ.. ಕೂಗಿನಿಂದ ಪರಿಹಾರವಾಗುತ್ತಿತ್ತು. ಅವರ ಹೊಲ, ತೋಟ ಗಳಿಗೆ ಜಾನುವಾರು ನುಗ್ಗುವುದನ್ನು ನಮ್ಮ ಮನೆ ಮಂದಿಯ ಕೂಗು ಬೊಬ್ಬೆ, ಗದ್ದಲಗಳು ಅಲೆಮಾರಿ ಜಾನುವಾರುಗಳನ್ನು ಹಿಂದಕ್ಕಟ್ಟುತ್ತಿತ್ತು. ಅನಿರೀಕ್ಷಿತ ಘಟನೆಗಳಾದಾಗ ಪರಸ್ಪರ ಸಾಂತ್ವನ, ಸಹಾಯಹಸ್ತ ಇದ್ದೇ ಇರುತ್ತಿತ್ತು. ವಿಶೇಷ ದಿನಗಳಲ್ಲಿ ಪರಸ್ಪರ ಕೊಡುಕೊಳ್ಳುವ ಸೌಹಾರ್ದವಿತ್ತು. ಅಂತಹ ವಿಶೇಷ ದಿನಗಳಲ್ಲಿ ಪೆರ್ನಾಲ್ ಕೂಡ ಒಂದು.

ಪೆರ್ನಾಲ್ ದಿನವೆಂದರೆ ಬಯಲೆಲ್ಲ ರಂಗೇರುತ್ತದೆ. ನಮ್ಮ ಮನೆಗಳಿಗೆ ಬಿರಿಯಾನಿ, ಸಿಹಿ ತಿಂಡಿಗಳ ವಿತರಣೆಯಾಗುತ್ತದೆ. ಮಧ್ಯಾಹ್ನವಾಗುತ್ತಲೇ ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಸಂಸಾರ ಸಂಚಾರ ಹೊರಡುತ್ತದೆ. ಹೊಲದಂಚಿನ ಬದುಗಳ ದಾರಿಯಲ್ಲಿ ಬಣ್ಣ ಬಣ್ಣದ ಹೊಸ ಬಟ್ಟೆ ತೊಟ್ಟು ಹರ್ಷೋಲ್ಲಾಸದಿಂದ ಬಂಧುಗಳ ಮನೆಗಳಿಗೆ ಓಡಾಡುವ ನೋಟ ಸೊಬಗನ್ನುಂಟು ಮಾಡುತ್ತಿತ್ತು. ಹೀಗೆ ಹೊಸ ಬಟ್ಟೆ ತೊಟ್ಟು ಓಡಾಡುವ ಮಕ್ಕಳು ಮಹಿಳೆಯರೊಂದಿಗೆ ಗದ್ದೆ-ತೋಟಗಳಲ್ಲಿ ಕೆಲಸ ನಿರತರಾಗಿರುತ್ತಿದ್ದ ಮಹಿಳೆ ಯರೆಲ್ಲ ಅವರ ಬಣ್ಣ ಬಣ್ಣದ ಬಟ್ಟೆಗಳನ್ನು ನೋಡುತ್ತಾ ಮಾತಿಗಿಳಿ ಯುತ್ತಿದ್ದರು. ಬಣ್ಣಗಳ ವರ್ಣನೆ, ಮನೆಯ ಗೌಜಿ ಗಮ್ಮತ್ತು, ಬಂದು ಹೋದ ನೆಂಟರಿಷ್ಟರ ವಿವರ ಇತ್ಯಾದಿ ಸಂಸಾರ ವಾರ್ತೆಗಳೆಲ್ಲ ಬೇಲಿಯಾಚೆಯಿಂದ ವಿನಿಮಯವಾಗುತ್ತಿದ್ದುವು. ತಾನಾಗಿಯೇ ನೆಲೆಸಿದ್ದ ಸಾಮರಸ್ಯ, ಸೌಹಾರ್ದವನ್ನು ಈ ಪೆರ್ನಾಲ್ ಹಬ್ಬ ವರ್ಷಕ್ಕೊಮ್ಮೆ ನವೀಕರಿಸುತ್ತಿತ್ತು. ಅನ್ನ, ಅರಿವೆಗೆ ಕೊರತೆಯಿದ್ದರೂ ಹಬ್ಬದ ದಿನಗಳಂದು ಬದುಕು ಬಣ್ಣಗಟ್ಟಲು ಅನ್ನದಲ್ಲಾಗಲೀ ಅರಿವೆಯಲ್ಲಾಗಲೀ ಕೊರತೆ ಬಾರದಂತೆ ನೋಡಿಕೊಳ್ಳುವ ಸಮಾಜ ಅಂದು ಇತ್ತು.

ನಾವೆಲ್ಲ ತರಕಾರಿ ಬೆಳೆಯುತ್ತಿದ್ದೆವು. ಆಗ ತರಕಾರಿ ಮಾರಾಟದ ಸರಕಾಗಿರಲಿಲ್ಲ. ಮುಸ್ಲಿಮರು ಸಾಮಾನ್ಯವಾಗಿ ಕೃಷಿ ಮಾಡುತ್ತಿ ದ್ದುದು ಕಡಿಮೆ. ನಾವು ಬೆಳೆದ ತರಕಾರಿಯಲ್ಲಿ ಒಂದು ಪಾಲು ಅವರ ಮನೆಗಳಿಗೆ ಹೋಗುತ್ತಿತ್ತು. ಅರಿವೆ ದಂಟೋ, ಬಸಳೆ ಸೊಪ್ಪೋ, ಸೌತೆಕಾಯಿಯೋ, ಹೀರೇಕಾಯಿಯೋ, ಅಲಸಂಡೆಯೋಅವರಿಗೊಂದು ಪಾಲು ಇದ್ದೇ ಇರುತ್ತಿತ್ತು. ತರಕಾರಿ ಬೆಳೆಸಲು ಜಾಗವಿಲ್ಲದ ಎಲ್ಲ ಧರ್ಮದ ಬಡ ಕುಟುಂಬಗಳಿಗೂ ತರಕಾರಿ ಪಾಲು ಸಲ್ಲುತ್ತಿತ್ತು. ಉಪವಾಸದ ದಿನಗಳಾದರೆ ಅರಿವೆ ದಂಟು, ಬಸಳೆ ಸೊಪ್ಪನ್ನು ಕೊಯ್ಯದೆ ಪೆರ್ನಾಲ್‌ಗಾಗಿಯೇ ಕಾಪಿಡುತ್ತಿದ್ದುದುಂಟು. ಆ ದಿನಗಳಲ್ಲಿ ಸೇಸಮ್ಮ, ದುಗ್ಗಿ, ಚಂದ್ರಕ್ಕ, ಸೀತಮ್ಮನವರಿಗೆ ತರಕಾರಿ ಇರದು. ಅದು ರಮಝಾನಿಗೆ ಮೀಸಲು.

ಪೆರ್ನಾಲ್ ಸಮೀಪಿಸುವಾಗ ಗುಡ್ಡದ ಬೀಪಾತುಮ್ಮ, ಪಾಡಿಯ ಐಸಮ್ಮ, ಕುಮೇರಿನ ಮರಿಯಮ್ಮ, ಕುಕ್ಕುದಡಿಯ ನಬೀಸಾ ಹೀಗೆ
ನಾಲ್ಕಾರು ಹಿರಿಯ ಮಹಿಳೆಯರು ಸಣ್ಣಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಹಿತ್ತಿಲ ಮೂಲಕ ಅಡುಗೆ ಕೋಣೆಗೆ ಬಂದು ನನ್ನಮ್ಮನ
ಜೊತೆ ಗಂಟೆಗಳ ತನಕ, ಕೆಲವೊಮ್ಮೆ ಮಧ್ಯಾಹ್ನದ ತನಕವೂ ಕುಶಲೋಪರಿ ನಡೆಸುತ್ತಿದ್ದರು. ಮಕ್ಕಳಿಗೊಂದಿಷ್ಟು ಗಂಜಿಯ ಸಮಾರಾಧನೆಯೂ ಆಗುತ್ತಿತ್ತು. ಅವರ ಮಾತುಗಳಲ್ಲಿ ಕುಟುಂಬದ ಕಷ್ಟ ನಷ್ಟ, ಅಸಹಾಯಕತೆಗಳು, ಬಡತನದ ನೋವು ನಲಿವು ಇವೇ ತುಂಬಿರುತ್ತಿದ್ದುವು. ಎಷ್ಟೋ ಸಂದರ್ಭಗಳಲ್ಲಿ ಪರಸ್ಪರ ಮಮ್ಮಲ ಮರುಗಿ ಅಳುತ್ತಿದ್ದುದನ್ನು ನಾನು ಕಂಡಿದ್ದೇನೆ. ಪರಸ್ಪರ ಸಾಂತ್ವನಗೊಳ್ಳುತ್ತ ಹಗುರಾಗುತ್ತ ಹೊರಡುವಾಗ ಒಂದಿಷ್ಟು ಅಕ್ಕಿ, ಸೌತೆಕಾಯಿ, ತೆಂಗಿನಕಾಯಿಗಳನ್ನು ನನ್ನಮ್ಮ ಕಟ್ಟಿ ಕೊಡುತ್ತಿದ್ದರು. ಅವರೆಲ್ಲ ಗದ್ದೆ ನಾಟಿಗೋ, ಕೊಯ್ಲಿಗೋ, ಹುಲ್ಲು ಕೀಳಲೋ, ಬೈ ಹುಲ್ಲು ಗುದ್ದಲೋ ಆಗಾಗ ಬರುತ್ತಿದ್ದವರು. ಅವರ ಕೆಲಸ ಕಾರ್ಯಗಳಲ್ಲಿ ನಿಷ್ಠೆ ಇರುತ್ತಿತ್ತು. ಕಾಳಜಿ ಇರುತ್ತಿತ್ತು. ಅಂಗಳವನ್ನೆಲ್ಲ ತಮ್ಮ ಮನೆಯಂಗಳವೇನೋ ಎನ್ನುವಂತೆ ಗುಡಿಸಿ ಸ್ವಚ್ಛ ಮಾಡಿ ಭತ್ತ ಹರಡುತ್ತಿದ್ದರು. ಬೈಹುಲ್ಲು ಸಂಸ್ಕರಿಸುತ್ತಿದ್ದರು.

ಹೊಲದ ಬದಿಯಲ್ಲಿ ತೋಟದ ಮೂಲೆಯಲ್ಲಿ ಪುತ್ತಬ್ಬ ಬ್ಯಾರಿಯ ಹೊಟೇಲಂಗಡಿ. ಊರವರು, ಕೂಲಿ ಕೆಲಸದವರು, ಕೃಷಿಕರು ಬೆಳಗ್ಗೆ ಸಂಜೆಯ ಬಿಡುವಿನ ಹೊತ್ತಲ್ಲಿ ಅಲ್ಲಿ ಸೇರುತ್ತಿದ್ದರು. ಅವರ ಹೊಟೇಲಿನಲ್ಲಿ ಕೊಡುತ್ತಿದ್ದ ಅವಲಕ್ಕಿ, ಗೆಂಡದಡ್ಯೆ, ಪತ್ರ್ ಇತ್ಯಾದಿಯ ಪ್ರಮಾಣ ನೋಡಿದರೆ ಅವರದು ವ್ಯಾಪಾರಕ್ಕಿಂತಲೂ ಕೃಷಿ ಕಸುಬುದಾರರ, ಕೂಲಿ ಕೆಲಸದವರ ಹೊಟ್ಟೆ ತುಂಬಿಸುವ ಉದ್ದೇಶವಿರುವಂತೆ ಭಾಸವಾಗುತ್ತಿತ್ತು. ಊರ ದನದ ಹಾಲಿನಲ್ಲಿ ಮಾಡಿದ ದೊಡ್ಡ ಗ್ಲಾಸಿನಲ್ಲಿ ಚಹಾ. ಈಗಿನ ನಾಲ್ಕು ಲೋಟ ಚಹಾದಷ್ಟಿತ್ತದು! ರಮಝಾನ್‌ನಲ್ಲಿ ಉಪವಾಸ ಮುಗಿದ ಬಳಿಕ ಮುಸ್ಸಂಜೆ ಅಂಗಡಿಗೆ ಹೋಗುತ್ತಿದ್ದ ಮಕ್ಕಳಿಗೆ ದ್ರಾಕ್ಷಿಯನ್ನೋ, ಖರ್ಜೂರವನ್ನೋ ಕೊಟ್ಟು ಬೆನ್ನು ತಟ್ಟಿ ‘ಜಾಣನಾಗಬೇಕು’ ಎನ್ನುತ್ತಿದ್ದರು.

ಕೃಷಿ ಬದುಕು ಕ್ರಮೇಣ ನಶಿಸತೊಡಗಿತು. ವ್ಯವಹಾರ ಆರ್ಥಿಕತೆ ಗಳು ಕುದುರತೊಡಗಿತು. ಅನ್ನ, ಅರಿವೆಗಿಂತಲೂ ಮಿಗಿಲಾದ ಆಸೆ ಆವರಿಸತೊಡಗಿದಾಗ ಕೃಷಿ ಕುಟುಂಬಗಳೆಲ್ಲ ಹಳ್ಳಿಯಿಂದ ಪೇಟೆಗಳತ್ತ ಮುಖ ಮಾಡಿದವು. ಕೃಷಿ ಬದುಕಿನೊಂದಿಗೆ ನಂಟು ಹೊಂದಿದ್ದ ಸಾಮರಸ್ಯ, ಸಹಬಾಳ್ವೆ, ಹಂಚಿಕೊಳ್ಳುವ ಗುಣಗಳು ಪೇಟೆಯ ಆರ್ಥಿಕ ಬದುಕಿಗೆ ಸೂಕ್ತವಾದುದಾಗಿರಲಿಲ್ಲ. ಇವೆಲ್ಲವನ್ನು ಕಾಪಿಡುತ್ತಿದ್ದ ಹಬ್ಬಗಳು, ಆಚರಣೆಗಳು ವ್ಯಾವಹಾರಿಕಗೊಂಡು ಅರ್ಥ ಕಳೆದುಕೊಂಡವು.

ಅಲ್ಲೋ ಇಲ್ಲೋ ಒಂದಿಷ್ಟು ಬೆಳ್ಳಿರೇಖೆಯಂತೆ ಗೋಚರಿಸುವ ಸಂಬಂಧಗಳು ಇಲ್ಲವೆಂದಲ್ಲ. ನಗರದ ಮುಸ್ಲಿಮ್ ಗೆಳೆಯರು ಪೆರ್ನಾಲ್‌ಗೆ ಮನೆಗೆ ಆಹ್ವಾನಿಸಿ ಈಗಲೂ ಸತ್ಕರಿಸುತ್ತಾರೆ. ಹಾಗೆ ಮನೆಗೆ ಭೇಟಿಯಾದಾಗಲೆಲ್ಲ ಬಾಲ್ಯದ ಹಳ್ಳಿಯ ಬದುಕು ಮತ್ತು ಪೆರ್ನಾಲ್ ಸೊಬಗು ಕಾಡುವುದುಂಟು.

-------------------------------------------------------------------- 

ಎಲ್ಲರನ್ನೂ ಒಳಗೊಂಡ ಔತಣಕೂಟ

- ಮನೋಜ್, ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ವತಿಯಿಂದ ನಮಗೆ ರಮಝಾನ್ ಪ್ರಯುಕ್ತ ಇಫ್ತಾರ್ ಕೂಟವನ್ನು ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಲಾಗಿತ್ತು. ಇದಕ್ಕೂ ಮೊದಲು ರಮಝಾನ್ ಬಗ್ಗೆ ಹೆಚ್ಚಾಗಿ ಮಾಹಿತಿ ಇರಲಿಲ್ಲ. ಆರ್ಗನೈಝೇಷನ್‌ನ ಪದಾಧಿಕಾರಿಗಳು ನಮಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸುವಂತೆ ಆಹ್ವಾನವನ್ನು ನೀಡಿದರು. ಹಾಗಾಗಿ ನಾನು ಇಫ್ತಾರ್ ಕೂಟದಲ್ಲಿ ಭಾಗವಹಿಸಿದೆ. ಇದರ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿಯನ್ನು ನೀಡಿದರು. ಹಿಜಾಬ್, ಹಲಾಲ್ ಹೆಸರಿನಲ್ಲಿ ರಾಜ್ಯ ಕೋಮುವಾದವನ್ನು ಸೃಷ್ಟಿ ಮಾಡಲಾಗುತ್ತಿರುವ ಸಂದರ್ಭದಲ್ಲಿ ಇಫ್ತಾರ್ ಕೂಟದಲ್ಲಿ ಸೌಹಾರ್ದವನ್ನು ನಾನು ನೋಡಿದೆ. ನಾನು ಭಾಗವಹಿಸಿದ್ದ ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮದ ಸ್ನೇಹಿತರು ಭಾಗವಹಿಸಿದ್ದರು. ಕೇವಲ ರಮಝಾನ್ ಹೆಸರಿನಲ್ಲಿ ಮಾತ್ರ ನಾವು ಸೇರದೆ ಪ್ರತೀ ತಿಂಗಳಿಗೊಮ್ಮೆ ಇಂತಹ ಔತಣಕೂಟವನ್ನು ಮಾಡಿ ಸೌಹಾರ್ದವನ್ನು ಎತ್ತಿಹಿಡಿಯಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು.

-------------------------------------------------------------------- 

ನಾನೂ ಹೊಸ ಬಟ್ಟೆಬರೆ ಧರಿಸುತ್ತಿದ್ದೆ...

- ಲೊಯ್ಡ್ ರೋಯಲ್ ಡಿಸೋಜ, ಉಳ್ಳಾಲ ಮಾರ್ಗತಲೆ, ಇಂಡಿಯನ್ ಲೇಬರ್ ಹೆಲ್ಪ್‌ಲೈನ್‌ನ ದ.ಕ. ಜಿಲ್ಲಾ ಕಾರ್ಯಕರ್ತ

ನಾನು ಹುಟ್ಟಿ ಬೆಳೆದದ್ದು, ಉಳ್ಳಾಲ ಮಾರ್ಗತಲೆಯ ಉಳಿಯ ಮೊನೆಪು ಎಂಬಲ್ಲಿ. ನಮ್ಮ ಸುತ್ತಮುತ್ತ ಶೇ.೮೦ರಷ್ಟು ಮುಸ್ಲಿಮರು ವಾಸವಾಗಿ ದ್ದಾರೆ. ಹಾಗಾಗಿ ನನಗೆ ಬಾಲ್ಯದಿಂದಲೇ ಮುಸ್ಲಿಮರ ಜೊತೆ ಒಡನಾಟವಿತ್ತು. ಅವರ ಆಚಾರ-ವಿಚಾರವನ್ನು ತೀರಾ ಹತ್ತಿರದಿಂದ ಕಂಡಿರುವೆ. ಅವರೊಡನೆ ಆಡಿ ಮೆರೆದಿರುವೆ, ಕುಣಿದು ಕುಪ್ಪಳಿಸಿರುವೆ, ಆತ್ಮೀಯವಾಗಿ ಬೆರೆತಿರುವೆ, ಮೈಮರೆತು ಸಂಭ್ರಮಿಸಿರುವೆ. ಬಾಲ್ಯದಲ್ಲಿ ನಡೆದ ಯಾವುದೇ ಘಟನೆಗಳಾಗಲಿ, ಅದನ್ನು ಅಷ್ಟು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ.

ನನಗೀಗ 37ರ ಹರೆಯವಾದರೂ ಅಂದಿನ ಆ ಘಟನೆಗಳು ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿವೆ. ನನ್ನ ಮುಸ್ಲಿಮ್ ಗೆಳೆಯರು ಅತ್ಯಂತ ಶ್ರದ್ಧೆಯಿಂದ ರಮಝಾನ್‌ನಲ್ಲಿ ಉಪವಾಸ ಆಚರಿಸಿದ್ದನ್ನೂ ನಾನು ಕಂಡಿರುವೆ. ಶವ್ವಾಲ್‌ನ ಪ್ರಥಮ ಚಂದ್ರದರ್ಶನವಾ ಗುತ್ತಲೇ ‘ಈದುಲ್ ಫಿತ್ರ್’ ಆಚರಣೆಗೆ ಅಣಿಯಾಗುತ್ತಾರೆ. ನಮ್ಮ ಕಡೆ ಈ ಹಬ್ಬಕ್ಕೆ ‘ಚೆರಿಯೆ ಪೆರ್ನಾಲ್’ ಅನ್ನುತ್ತಾರೆ. ಒಂದು ತಿಂಗಳಿಡೀ ವ್ರತ ಹಿಡಿದು ಹಬ್ಬದ ಸಂಭ್ರಮದಲ್ಲಿ ತೇಲುವ ಆ ಕ್ಷಣ ಅಮೋಘ. ಮುಸ್ಲಿಮ್ ಗೆಳೆಯರಂತೆ ನಾನೂ ಹೊಸ ಬಟ್ಟೆಬರೆ ಧರಿಸುತ್ತಿದ್ದೆ. ಒಂದಲ್ಲ ಹತ್ತಾರು ಮನೆಗೆ ಸಾಲು ಸಾಲಾಗಿ ಹೋಗಿ ಶುಭಾಶಯ ಸಲ್ಲಿಸುತ್ತಿದ್ದೆ. 

ನಾನಾ ಬಗೆಯ ಶರ್ಬತ್ ಕುಡಿಯುತ್ತಿದ್ದೆ. ಸಿಹಿತಿಂಡಿ-ಬಿರಿಯಾನಿ ತಿನ್ನುತ್ತಿದ್ದೆ. ಖುಷಿಯ ವಿಷಯವೆಂದರೆ ನಾವು ಹೀಗೆ ಸ್ವಚ್ಛಂದವಾಗಿ ಸಂಭ್ರಮಿಸುವಾಗ ನಮ್ಮ ಹೆತ್ತವರು ನಮ್ಮನ್ನು ತಡೆಯದೆ ಮೌನವಾಗಿ ಸಮ್ಮತಿಸುತ್ತಿದ್ದುದು. ಈಗ ಆ ವಾತಾವರಣ ಕೆಲವು ಕಡೆ ಮಾಯವಾಗಿದೆ. ನಗರಗಳಲ್ಲಿ ಇಂತಹ ವಾತಾವರಣ ಮಾಯವಾದುದರಲ್ಲಿ ಆಶ್ಚರ್ಯವಿಲ್ಲ. ಆದರೆ ಗ್ರಾಮಾಂತರದಲ್ಲಿ ಮಾಯವಾಗುತ್ತಿರುವುದು ಬೇಸರದ ಸಂಗತಿ. ನಾನು ಬಾಲ್ಯದಲ್ಲಿ ಮಾತ್ರವಲ್ಲ, ಈಗಲೂ ಅಷ್ಟೆ, ಹಬ್ಬದ ದಿನಗಳಲ್ಲಿ ಯಾವುದೇ ಭೇದಭಾವಿಲ್ಲದೆ ಎಲ್ಲರ ಜೊತೆಗೂಡಿ ಸಂಭ್ರಮಿಸುವೆ. ಪೆರ್ನಾಲ್ ಗೆ ನಾನು ಮುಸ್ಲಿಮ್ ಗೆಳೆಯರ ಮನೆಗೆ ಹೋದರೆ, ಕ್ರಿಸ್ಮಸ್ ಮತ್ತಿತರ ಹಬ್ಬಗಳಿಗೆ ಮುಸ್ಲಿಮ್ ಗೆಳೆಯರು ನಮ್ಮ ಮನೆಗೆ ಬರುತ್ತಾರೆ. ಆ ಮೂಲಕ ನಾವು ನಮ್ಮ ಮುಂದಿನ ಪೀಳಿಗೆಗೆ ಒಂದೊಳ್ಳೆಯ ಸಂದೇಶ ರವಾನಿಸಲು ಪ್ರಯತ್ನಿಸುತ್ತಿದ್ದೇವೆ.

-------------------------------------------------------------------- 

ಸೌಹಾರ್ದ ಸಾರುವ ಈದುಲ್ ಫಿತ್ರ್

- ರವಿಗೌಡ, ಮಡಿಕೇರಿ

ಈದುಲ್ ಫಿತ್ರ್ ಮುಸ್ಲಿಮರ ಪವಿತ್ರ ಹಬ್ಬ. ಮನುಕುಲಕ್ಕೆ ಉತ್ತಮವಾದ ಸಂದೇಶವನ್ನು ಸಾರುವ ಹಬ್ಬಗಳಲ್ಲಿ ಇದೂ ಒಂದಾಗಿದೆ. ಶಾಲಾ ದಿನಗಳಲ್ಲಿ ನಾವೆಲ್ಲರೂ ಈದುಲ್ ಫಿತ್ರ್ ದಿನ ಸ್ನೇಹಿತರ ಮನೆಗಳಿಗೆ ತೆರಳಿ ಬಿರಿಯಾನಿ ಸವಿಯುತ್ತಿದ್ದ ಕಾಲವಿತ್ತು.

ಮುಸ್ಲಿಮ್ ಸ್ನೇಹಿತರು ಹಬ್ಬದ ದಿನ ಎಲ್ಲರನ್ನೂ ಪ್ರೀತಿಯಿಂದ ಆಮಂತ್ರಿಸುತ್ತಿದ್ದರು. ಮುಸ್ಲಿಮ್ ಸ್ನೇಹಿತರ ಕುಟುಂಬದೊಂದಿಗೆ ಎಲ್ಲರೂ ಸೌಹಾರ್ದದಿಂದ ಹಬ್ಬವನ್ನು ಆಚರಿಸುತ್ತಿದ್ದೆವು. ಒಂದು ತಿಂಗಳ ಕಾಲ ವ್ರತಾಚರಣೆ ಮಾಡುವ ಮುಸ್ಲಿಮರು ಇಡೀ ವಿಶ್ವಕ್ಕೆ
ಮಾದರಿಯಾಗಿದ್ದಾರೆ. ಸೌಹಾರ್ದವನ್ನು ಸಾರುವ ಹಬ್ಬಗಳಲ್ಲಿ ಈದುಲ್ ಫಿತ್ರ್ ಮೊದಲ ಸಾಲಿಗೆ ನಿಲ್ಲುತ್ತದೆ. ಎಲ್ಲರೂ ಒಂದುಗೂಡಿ ಸೌಹಾರ್ದದಿಂದ ಆಚರಿಸುವ ಈದುಲ್ ಫಿತ್ರ್ ಇಂದಿನ ದಿನಗಳಲ್ಲಿ ಮಾಯವಾಗಿದೆ. ಮಾನವ ಕುಲಕ್ಕೆ ಸೌಹಾರ್ದದ ಸಂದೇಶವನ್ನು ಸಾರುವ ಈದುಲ್ ಫಿತ್ರ್ ಅನ್ನು ಎಲ್ಲರೂ ಸೇರಿ ಆಚರಿಸೋಣ.

ಮುಸ್ಲಿಮ್ ಸಮುದಾಯದವರಿಗೆ ಈದುಲ್ ಫಿತ್ರ್ ಶುಭಾಶಯಗಳು.

-------------------------------------------------------------------- 

ಮರೆಯಲಾಗದ ಆತಿಥ್ಯ

ರವಿಪ್ರಸಾದ್ ಶೆಟ್ಟಿ ಬನ್ನೂರು, ಪುತ್ತೂರು

ಪಕ್ಕದ ಮನೆಯವರು ಹಸಿದಿರುವ ಸಂದರ್ಭದಲ್ಲಿ ಅವನ ಹೊಟ್ಟೆಗೆ ಹಿಟ್ಟು ನೀಡದೆ ತಾನು ಉಣಬಾರದು ಎನ್ನುವ ಆಚರಣೆಯನ್ನು ಪಾಲಿಸುತ್ತಿರುವ ಮುಸ್ಲಿಮ್ ಸಮುದಾಯ ವರ್ಷದ ಒಂದು ತಿಂಗಳು ಕಠಿಣ ವ್ರತ ಪಾಲಿಸು ವುದೇ ಸಮಾನತೆಯ ಭಾಗವಾಗಿದೆ. ಉಪವಾಸ ವ್ರತದಲ್ಲಿ ಸಮಾನತೆಯ ಜೊತೆಗೆ ಸೌಹಾರ್ದವನ್ನು ಭಾತೃತ್ವ ವನ್ನು ಸಾರುತ್ತಿದೆ. ಬಿರು ಬಿಸಿಲಿನ ಎಪ್ರಿಲ್ ತಿಂಗಳಲ್ಲಿ ಈ ಬಾರಿಯರಮಝಾನ್ ಬಂದಿದೆ. ಇದು ಅತೀ ಕಠಿಣ ಉಪವಾಸ ಎಂದರೆ ತಪ್ಪಾಗಲಾರದು. ಮುಂಜಾನೆ ನಾಲ್ಕರ ಸುಮಾರಿಗೆ ಪ್ರಾರ್ಥನೆ ಯೊಂದಿಗೆ ಉಪವಾಸ ಆರಂಭಿಸಿ ಮುಸ್ಸಂಜೆಯ ತನಕ ಬಾಯಿಯಲ್ಲಿರುವ ಉಗುಳನ್ನೂ ನುಂಗದೆ, ನೀರನ್ನೂ ಕುಡಿಯದೆ ನಿತ್ಯ ಕರ್ಮಗಳೊಂದಿಗೆ, ವ್ರತ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಉಪವಾಸಿಗರ ಧಾರ್ಮಿಕ ನಂಬಿಕೆ, ಮನೋಸ್ಥೈರ್ಯ ಸ್ತುತ್ಯರ್ಹವಾದುದು.

ನಾನು ಕಂಡಂತೆ ಉಪವಾಸ ವ್ರತದಲ್ಲಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ಆಹಾರ ಸೇವಿಸುವುದು. ದೇಹ ದಂಡನೆ ಮಾಡುವುದರ ಜೊತೆಗೆ ದೇಹದ ನಿಯಂತ್ರಣ ಪಡಿಸುವುದು. ಇದು ನಮಗೆ ಯಾವುದೇ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ನೀಡುತ್ತದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಇನ್ನೊಬ್ಬರ ಹಸಿವಿನ ಮಹತ್ವ ಅರಿವಾಗಿಸುತ್ತದೆ. ಇದರ ಪ್ರತ್ಯಕ್ಷ ದರ್ಶನ ಆಗಬೇಕಾದರೆ ನಾವು ಮುಸ್ಲಿಮರ ಮನೆಯ ಅತಿಥಿಯಾಗಬೇಕು. ಎಷ್ಟೇ ಬಡವರಾಗಿರಲಿ ಹೊಟ್ಟೆ ಬಿರಿಯುವಷ್ಟು ತಿನ್ನಿಸದೇ ನಮ್ಮನ್ನು ಬಿಡುವುದೇ ಇಲ್ಲ. ನಾನು ಗೆಳೆಯರ ಬಳಗದ ಇಫ್ತಾರ್ ಕೂಟದಲ್ಲಿ ತುಂಬಾ ಸಲ ಭಾಗಿಯಾಗಿದ್ದೇನೆ. ಅವರು ತೋರಿದ ಪ್ರೀತಿ, ವಿಶ್ವಾಸ, ನೀಡಿರುವ ಆತಿಥ್ಯ ಇವೆಲ್ಲವೂ ಮರೆಯಲು ಸಾಧ್ಯವಿಲ್ಲ. ಕುವೆಂಪು ಅವರು ಹೇಳಿದಂತೆ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಅದನ್ನು ನಾವು ಎಲ್ಲಾ ತ್ಯಾಗದೊಂದಿಗೆ ಉಳಿಸಿ ಕೊಳ್ಳಬೇಕಾಗಿದೆ. ಪವಿತ್ರ ಈದುಲ್ ಫಿತ್ರ್ ಇದಕ್ಕೆ ಸಾಕ್ಷಿಯಾಗಲಿ.

ಹಿಂದೂಗಳು ಏಕಾದಶಿ, ಷಷ್ಠಿ ಹೀಗೆ ತಿಂಗಳ ಕೆಲವು ದಿನ ಉಪವಾಸ ಯೋಗ ಮಾಡಿ ದೇಹವನ್ನು ದಂಡಿಸಿದರೆ ಮುಸ್ಲಿಮರು ವರ್ಷದ ಒಂದು ತಿಂಗಳು ಕಠಿಣವಾಗಿ ದಂಡಿಸುತ್ತ್ತಾರೆ. ದೇವರ ಎಲ್ಲಾ ಆರಾಧನೆಗಳಿಗಿಂತ ಉಪವಾಸ ವ್ರತ ಹೆಚ್ಚು ಮಹತ್ತರವಾದ ಆರಾಧನೆಯಾಗಿದೆ. ಇಲ್ಲಿ ಹಸಿವಿನ ಪಾಠವಿದೆ. ಹಸಿವಿನ ನಿಯಂತ್ರಣವಿದೆ. ಹಸಿವಿನ ಮೂಲದ ಹುಡುಕಾಟವಿದೆ. ಇನ್ನೊಬ್ನರ ಹಸಿವನ್ನು ಅರ್ಥೈಸಿಕೊಳ್ಳುವ ಉನ್ನತ ಚಿಂತನೆಯಿದೆ. ಎಲ್ಲ ಧರ್ಮಗಳ ಅಂತಿಮ ಸಂದೇಶ ಶಾಂತಿ.ಈದುಲ್ ಫಿತ್ರ್ ಸರ್ವಧರ್ಮಗಳ ಸೌಹಾರ್ದಕ್ಕೆ ಸಾಕ್ಷಿಯಾಗಲಿ. ಹಬ್ಬದ ಈ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.

-------------------------------------------------------------------- 

ಸೌಹಾರ್ದ ಸಾರುವ ಹಬ್ಬ

- ಸತೀಶ್, ಮರಳು ಉದ್ಯಮಿ, ಹೆಡಿಯಾಲ

ಮುಸ್ಲಿಮರು ಮತ್ತು ನಾವು ಬೇರೆ ಎಂಬ ಭಾವನೆಯೇ ನಮಗಿಲ್ಲ, ನಾವೆಲ್ಲರೂ ಒಂದೇ ಮನೆಯವರ ರೀತಿ ಬದುಕು ನಡೆಸುತ್ತಿ ದ್ದೇವೆ. ನಮ್ಮಲ್ಲಿ ಯಾವುದೇ ಭೇದ ಭಾವ ಇಲ್ಲ. ಅವರು ನಮ್ಮ ಮನೆಗೆ ಬಂದು ಊಟ ಮಾಡುತ್ತಾರೆ. ನಾವು ಅವರ ಮನೆಗೆ ಹೋಗಿ ಊಟ ಮಾಡುತ್ತೇವೆ.

ನಮ್ಮ ಊರಿನಲ್ಲಿ ಬಹಳಷ್ಟು ಮಂದಿ ಮುಸ್ಲಿಮರು ಇದ್ದಾರೆ. ನಮ್ಮ ಮನೆಯ ಪಕ್ಕದಲ್ಲೇ ಅನೇಕ ಮುಸ್ಲಿಮ್ ಬಾಂಧವರು ಇದ್ದಾರೆ. ನಮ್ಮ ಜಮೀನಿನ ಕೆಲಸಕ್ಕೆ ಅವರು ಬರುತ್ತಾರೆ. ಅವರ ಜಮೀನಿನ ಕೆಲಸಕ್ಕೆ ನಮ್ಮವರು ಹೋಗುತ್ತಾರೆ. ಒಂದು ರೀತಿಯಲ್ಲಿ ನಾವು ಒಬ್ಬರಿಗೊಬ್ಬರು ಬೆರೆತುಕೊಂಡೇ ಬದುಕು ನಡೆಸುತ್ತಿದ್ದೇವೆ.

ನಮ್ಮೂರಿನ ಮುಸ್ಲಿಮರು ಉರ್ದು ಭಾಷೆಯಲ್ಲೇ ಮಾತನಾಡು ವುದಲ್ಲ, ಗ್ರಾಮೀಣ ಭಾಗದ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಜೊತೆಗೆ ಅವರ ಮನೆಯ ಮಕ್ಕಳು ನಮ್ಮ ಮಕ್ಕಳ ಜೊತೆಯಲ್ಲಿ ಇರುವುದನ್ನು ನೋಡಿದರೆ ಕೆಲವರು ‘ಇವರು ನಿಮ್ಮ ಮಕ್ಕಳಾ’ ಎಂದು ಕೇಳುತ್ತಾರೆ. ಅಷ್ಟರ ಮಟ್ಟಿಗೆ ನಾವು ಅನ್ಯೋನ್ಯವಾಗಿದ್ದೇವೆ.

ಹಿಜಾಬ್, ಹಲಾಲ್ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ವಿವಾದವನ್ನು ಉಂಟು ಮಾಡಿತು. ಆದರೆ ನಮ್ಮೂರಿನಲ್ಲಿ ಇದ್ಯಾವುದರ ಬಗ್ಗೆಯೂ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಇದರ ಬಗ್ಗೆ ಯಾವುದೇ ಚರ್ಚೆಗಳು ನಡೆಯಲಿಲ್ಲ. ಯಾಕೆಂದರೆ ಅವರೆಲ್ಲರೂ ನಮ್ಮವರೇ ಎಂಬ ಭಾವನೆ ನಮ್ಮೂರಿನ ಎಲ್ಲಾ ಸಮುದಾಯದ ಜನರಲ್ಲಿ ಇದೆ.

-------------------------------------------------------------------- 

ಪ್ರತೀ ಬಾರಿ ಹಬ್ಬಕ್ಕೆ ಕರೆಯುತ್ತಾರೆ

- ಪುಟ್ಟಸ್ವಾಮಿ, ಕೆ.ಎಚ್.ಬಿ. ಕಾಲನಿ ನಂಜನಗೂಡು

ನಮ್ಮ ಮನೆಯ ಅಕ್ಕ ಪಕ್ಕ 50 ವರ್ಷಗಳಿಂದ ಮುಸ್ಲಿಮರು ವಾಸ ಮಾಡುತ್ತಿದ್ದಾರೆ. ಅವರ ನಮ್ಮ ಒಡನಾಟ ಅಣ್ಣ -ತಮ್ಮಂದಿರ ಒಡನಾಟ. ಅವರ ಮನೆಯಲ್ಲಿ ಏನೇ ಮಾಡಿದರೂ ಅವರು ನಮಗೆ ನೀಡುತ್ತಾರೆ. ನಮ್ಮ ಮನೆಯಲ್ಲಿ ಏನೇ ಮಾಡಿದರೂ ನಾವು ಅವರಿಗೆ ನೀಡುತ್ತೇವೆ. ಮುಸ್ಲಿಮರ ಮದುವೆ ಮತ್ತು ಇತರ ಸಮಾರಂಭಗಳಿಗೆ ನಮಗೆ ಒಂದೊಂದು ಜವಾಬ್ದಾರಿ ವಹಿಸುತ್ತಾರೆ. ಮುಸ್ಲಿಮರ ಹಬ್ಬದ ಬಿರಿಯಾನಿ ಎಂದರೆ ನಮಗೆ ತುಂಬಾ ಇಷ್ಟ, ಹಾಗಾಗಿ ಅವರ ಮನೆಯಲ್ಲಿ ಬಿರಿಯಾನಿ ಮಾಡಿದಾಗಲೆಲ್ಲಾ ನಮಗೂ ಒಂದು ಬಾಕ್ಸ್ ನೀಡುತ್ತಾರೆ. ನಮ್ಮ ಮನೆಯಲ್ಲಿ ಯಾವುದೇ ಹಬ್ಬಗಳನ್ನು ಆಚರಣೆ ಮಾಡಿ ಒಬ್ಬಟ್ಟು, ರವೆ ಪಾಯಸ, ಕಡ್ಲೆಹುಳಿ ಮಾಡಿದರೆ ಅವರಿಗೆ ಕೊಡುತ್ತೇವೆ. ಅದು ಅವರಿಗೆ ಬಲು ಇಷ್ಟ. ಅವರು ಪ್ರತೀ ಬಾರಿಯೂ ನಮಗೆ ಹಬ್ಬ ಮಾಡಿದಾಗ ಕರೆಯಿರಿ ಎಂದು ಹೇಳುತ್ತಿರುತ್ತಾರೆ.

-------------------------------------------------------------------- 

ಮರೆಯಲಾರದ ನೆನಪು

ಪ್ರೊ. ಭೀಮಣ್ಣ ಸುಣಗಾರ, ಅಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ

ಭಾರತ ದೇಶ ವಿವಿಧತೆಯಲ್ಲಿ ಏಕತೆ ಇರುವ ದೇಶ. ಹಲವಾರು ಧರ್ಮಗಳ ಕೂಟ ನೋಡಲಿಕ್ಕೆ ಸಿಗುವುದು ನಮ್ಮ ದೇಶದಲ್ಲಿ ಮಾತ್ರ. ಅನಾದಿ ಕಾಲದಿಂದಲೂ ಸರ್ವ ಧರ�

share
Next Story
X