Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಧ್ಯಾತ್ಮಿಕ ಪರಿಶುದ್ಧತೆ, ಸಾಮಾಜಿಕ...

ಆಧ್ಯಾತ್ಮಿಕ ಪರಿಶುದ್ಧತೆ, ಸಾಮಾಜಿಕ ಕಟಿಬದ್ಧತೆಯ ಈದುಲ್ ಫಿತ್ರ್

ನಝೀರ್ ಅಬ್ಬಾಸ್ ಸುರೈಜಿನಝೀರ್ ಅಬ್ಬಾಸ್ ಸುರೈಜಿ22 April 2023 12:01 AM IST
share
ಆಧ್ಯಾತ್ಮಿಕ ಪರಿಶುದ್ಧತೆ, ಸಾಮಾಜಿಕ ಕಟಿಬದ್ಧತೆಯ ಈದುಲ್ ಫಿತ್ರ್

ಪ್ರತಿಯೊಂದು ಹಬ್ಬದ ಜೀವಾಳ ಇರುವುದು ಪರಸ್ಪರ ಒಗ್ಗಟ್ಟು ಮತ್ತು ಬೆಸುಗೆಗಳಲ್ಲಿ. ನಾವು ನಮ್ಮ ಅಸ್ತಿತ್ವವನ್ನು, ನಮ್ಮ ಸಂಪತ್ತನ್ನು ಮತ್ತು ಸರ್ವಸ್ವವನ್ನು ಇತರರೊಂದಿಗೆ ಹೆಚ್ಚಾಗಿ ಹಂಚಿ ಕೊಳ್ಳುವುದು ಹಬ್ಬದ ದಿನಗಳಲ್ಲಿ. ಈದುಲ್ ಫಿತ್ರ್ ಕೂಡಾ ಹಾಗೆಯೇ ಆಗಬೇಕು. ದ್ವೀಪಗಳಾಗಿ ಒಡೆದು ಹೋಗುತ್ತಿರುವ ಸಮಾಜಗಳನ್ನು ಒಂದೇ ನೂಲಿನಲ್ಲಿ ಪೋಣಿಸಬಹುದಾದ ಸಂದರ್ಭಗಳಾಗಿ ಅವುಗಳನ್ನು ಮಾರ್ಪಡಿಸಲು ನಾವು ಕೆಲಸ ಮಾಡಬೇಕು. ರಮಝಾನಿನ ವ್ರತಾಚರಣೆ ಮತ್ತು ಶವ್ವಾಲ್ ಒಂದರ ಈದುಲ್ ಫಿತ್ರ್ ಆತ್ಮ ಪರಿಶುದ್ಧತೆ ಮತ್ತು ಸಾಮಾಜಿಕ ಬೆಸುಗೆಯನ್ನು ಸಾಧಿಸುವಲ್ಲಿ ಉದಾತ್ತ ಸಾಫಲ್ಯವನ್ನು ಕಾಣುವಂತಾಗಲಿ.


ಇಸ್ಲಾಮಿನ ಚಾಂದ್ರಮಾಸ ಪಂಚಾಂಗದ ಒಂಭತ್ತನೆಯ ತಿಂಗಳಾಗಿದೆ ರಮಝಾನ್. ರಮಝಾನ್ ತಿಂಗಳಾದ್ಯಂತ ಮುಸಲ್ಮಾನರು ಉಪವಾಸ ವ್ರತಾಚರಿಸುತ್ತಾರೆ. ಸದಾ ತಿಂದುಂಡು ತೇಗುವ ಮನುಷ್ಯರಿಗೆ ಹಸಿವಿನ ಅನುಭವದ ತೀಕ್ಷ್ಣತೆಯನ್ನು ಬೋಧಿಸಿ ಜೀವನದಲ್ಲಿ ಮಹತ್ತರವಾದ ಪಲ್ಲಟಗಳನ್ನು ತರಬಲ್ಲ ಶಕ್ತಿ ಈ ಆಚರಣೆಗಿದೆ. ದಯೆ, ಸಹಾನುಭೂತಿ, ಕ್ಷಮಾಶೀಲತೆ, ಸಹಜೀವಿಗಳೊಂದಿಗಿನ ಪ್ರೀತಿ ಮತ್ತು ಆರಾಧನೆಗಳಲ್ಲಿನ ಆನಂದದ ತರಬೇತಿ ನೀಡುತ್ತದೆ ರಮಝಾನ್ ವ್ರತಾಚರಣೆ. ಅಸಡ್ಡೆ, ಅಚಾ ತುರ್ಯ, ಉದಾಸೀನತೆ ಮುಂತಾದ ಮಾನವನ ಅಭಿವೃದ್ಧಿಗೆ ತೊಡಕಾಗಿರುವ ಸಂಗತಿಗಳನ್ನು ಕಂಡುಹಿಡಿದು ಅದರಿಂದ ಮುಕ್ತಿ ಪಡೆಯುವ ಅವಕಾಶವನ್ನು ಈ ತಿಂಗಳು ಒದಗಿಸುತ್ತದೆ. ಮನಸ್ಸನ್ನು ಸರ್ವ ಕೆಡುಕುಗಳಿಂದ ದೂರೀಕರಿಸಿ ದುರ್ಭಾವನೆಗಳನ್ನು ಹೋಗಲಾಡಿಸಿ ಪ್ರಾಂಜಲವಾದ ಹೃದಯವನ್ನು ನಮ್ಮದಾಗಿಸಲು ಸಹಾಯ ಮಾಡುತ್ತದೆ.

ಪಾಪಮೋಚನೆ, ನರಕವಿಮೋಚನೆ ಮತ್ತು ಸ್ವರ್ಗಪ್ರಾಪ್ತಿ ಎಂಬ ಉನ್ನತವಾದ ಉದ್ದೇಶಗಳನ್ನಿಟ್ಟುಕೊಂಡು ವಿಶ್ವಾಸಿ ರಮಝಾನಿನಾದ್ಯಂತ ಅಹರ್ನಿಶಿ ದುಡಿಯುತ್ತಾನೆ. ರಮಝಾನಿನ ಹಗಲುಪೂರ್ತಿ ಉಪವಾಸ ಆಚರಿಸುವ ಮತ್ತು ರಾತ್ರಿಯಲ್ಲಿ ನಿಂತುಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶ್ವಾಸಿಗಳಿಗೆ ಪಾಪಮೋಚನೆ ಇದೆಯೆಂದು ಪ್ರವಾದಿಯವರ ನುಡಿಯ ಪ್ರಭಾವ ಇದರ ಬೆನ್ನಿಗಿದೆ. ಈ ರೀತಿಯಲ್ಲಿ ಬಹಳ ಆದರ್ಶಪ್ರಾಯವಾದ ಆಚರಣೆಗಳನ್ನು ನಿರ್ವಹಿಸಿದ ತರುವಾಯ ಬರುವ ಹಬ್ಬವಾಗಿದೆ ಈದುಲ್ ಫಿತ್ರ್ ಅಥವಾ ರಮಝಾನ್ ಹಬ್ಬ. ರಮಝಾನ್ ತಿಂಗಳ ನಂತರ ಬರುವ ಶವ್ವಾಲಿನ ಬಾಲಚಂದಿರ ಬಾನಂಗಳದಲ್ಲಿ ಪ್ರತ್ಯಕ್ಷವಾದರೆ ಈದುಲ್ ಫಿತ್ರ್ ರಂಗೇರುತ್ತದೆ. ವಿವಿಧ ಕಾರಣಗಳಿಂದ ಮನುಷ್ಯನ ಮನಸ್ಸನ್ನು ಜೀರ್ಣತೆಗಳು ಮತ್ತು ಕಪ್ಪುಚುಕ್ಕೆಗಳು ಮೆತ್ತಿಕೊಳ್ಳಬಹುದು. ಅತಿಯಾದ ಸ್ವಾರ್ಥ ಚಿಂತನೆಗಳು ಮನಸ್ಸನ್ನು ಮಲಿನಗೊಳಿಸುತ್ತದೆ. ಇತರರ ಬಗೆಗಿನ ಚಿಂತನೆ ಮತ್ತು ಪರಿಗಣನೆ ಮನಸ್ಸಿನಿಂದ ಹೊರಡುವಾಗಲೂ ಮನಸ್ಸು ತನ್ನ ಶುಭ್ರತೆಯನ್ನು ಕಳೆದುಕೊಳ್ಳುತ್ತದೆ. ಸಂಪತ್ತನ್ನು ಪೇರಿಸಿಟ್ಟು ಮೋಜು ಮಸ್ತಿಗಳಲ್ಲಿ ಮುಳುಗುವುದೇ ಜೀವನ ಎಂಬ ಚಿಂತನೆಯ ಅಮಲಿನಲ್ಲಿ ಮುಳುಗಿ ಹೋದರೂ ಮನಸ್ಸು ಮರಗಟ್ಟಿ ಹೋಗುತ್ತದೆ.

ಅತಿಯಾದ ಸುಖದ ಸುಪ್ಪತ್ತಿಗೆಯಲ್ಲಿ ಮಿಂದೇಳುವ ಜನರು ಒಂದು ಕಡೆಯಾದರೆ ದಾರಿದ್ರ್ಯತೆ ಮತ್ತು ದುಗುಡ ದುಮ್ಮಾನಗಳಲ್ಲಿ ಬೆಂದು ನಲುಗುವ ಜೀವಗಳು ಬೇರೊಂದು ಕಡೆ. ಅತಿ ಸುಖ ಮತ್ತು ಅತಿ ದುಃಖ ಇವೆರಡೂ ಜನರು ದಾರಿತಪ್ಪಲು ಕಾರಣವಾಗುತ್ತದೆ. ಆದರೆ ರಮಝಾನ್ ಈ ಎರಡೂ ಕಾರಣಗಳಿಂದ ದಾರಿತಪ್ಪಿ ಹೋಗದಿರಲು ಬೇಕಾದ ತರಬೇತಿ ನೀಡುತ್ತದೆ. ಒಂದು ತಿಂಗಳ ದೀರ್ಘತೆ ಇರುವ ಸ್ವಯಂ ಆಯ್ದುಕೊಳ್ಳುವ ತ್ಯಾಗಮಯ ಮತ್ತು ನಿಯಂತ್ರಿತ ಜೀವನಕ್ರಮದ ಮೂಲಕ ಬದುಕನ್ನು ಮತ್ತು ಮನಸ್ಸನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ. ದಯಾಮಯನಾದ ದೇವರು ದಯಪಾಲಿಸಿದ ಬದುಕು ಅಥವಾ ಅಸ್ತಿತ್ವ ಎಂಬ ಸೌಭಾಗ್ಯವನ್ನು ಅರ್ಥೈಸಲು ಸಾಧ್ಯವಾಗುತ್ತದೆ. ಒಂದು ತಿಂಗಳ ಅವಧಿಯ ಈ ಶುಚೀಕರಣ ಪ್ರಕ್ರಿಯೆ ಇಲ್ಲದೆ ಹೋದಲ್ಲಿ ತಮ್ಮ ಮನಸ್ಸಿನಲ್ಲಿನ ಜೀರ್ಣತೆಗಳನ್ನು ಗುರುತಿಸುವುದು ಎಲ್ಲರಿಗೂ ಕಷ್ಟಸಾಧ್ಯವೆನಿಸುತ್ತಿತ್ತು. ವ್ರತಾಚರಣೆ ಮತ್ತು ಆತ್ಮಸಮರ್ಪಣೆಯ ಪ್ರತೀಕವಾದ ಉಪವಾಸದ ನಂತರ ನಮ್ಮೆಡೆಗೆ ಆಗತವಾಗುವ ಈದುಲ್ ಫಿತ್ರ್ ಬಹಳ ಮಹತ್ವ ಪಡೆದಿದೆ. ಹಸಿವಿನೊಂದಿಗೆ ಆಧ್ಯಾತ್ಮಿಕ ಮತ್ತು ಭೌತಿಕ ಸಂಸ್ಕರಣೆಯನ್ನು ಪಡೆದುಕೊಂಡು ಈದ್ ಆಚರಣೆಗೆ ಇಳಿಯುವ ವಿಶ್ವಾಸಿಯ ಹಬ್ಬದಲ್ಲಿ ವಿಶಾಲವಾದ ಅರ್ಥಗಳನ್ನು ಅದು ಒಡಮೂಡಿಸುತ್ತದೆ.

ಸಹೋದರತೆಯ ಸೌಂದರ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ ಈದ್. ಪರಸ್ಪರ ಸಹಾಯ ಮಾಡಬೇಕಾದ ಮತ್ತು ಆಸರೆ ಆಗಬೇಕಾದ ಅನಿವಾರ್ಯತೆಯನ್ನು ಅದು ಒತ್ತಿ ಹೇಳುತ್ತದೆ. ಆಹಾರದ ಮೌಲ್ಯವನ್ನು ಮತ್ತು ಹಸಿವಿನ ಅರ್ಥವನ್ನು ಒಂದು ತಿಂಗಳ ಕಠಿಣ ತಪಸ್ಸಿನಿಂದ ಮನವರಿಕೆ ಮಾಡಿದ ನಂತರ ಒಂದಾಗಿ ಕೂತು ಹಬ್ಬದೂಟ ಸವಿಯುವಾಗ ಹೊಸ ಸಾಮಾಜಿಕ ಪಾಠಗಳ ಮೆರುಗನ್ನು ಅದು ಮೇಳೈಸಿರುತ್ತದೆ. ದೇವರಿಗೆ ಮತ್ತು ತನ್ನ ಸುತಮುತ್ತಲಿರುವ ಎಲ್ಲರಿಗೂ ಕೃತಜ್ಞರಾಗುವ ಮನೋಭಾವವನ್ನು ನಮ್ಮಲ್ಲಿ ಅದು ಬೆಳೆಸುತ್ತದೆ. ದಯೆಯ ಉದಾತ್ತ ನಿದರ್ಶನಗಳು ಈದ್ ಆಚರಣೆಯ ಮುಖಮುದ್ರೆ. ಸಹಜೀವಿಗಳೊಂದಿಗೆ ದಯೆ ತೋರಿಸುವಲ್ಲಿ ವಿಶ್ವಾಸಿ ವಹಿಸುವ ಕಾಳಜಿ, ಬಯಕೆ ಮತ್ತು ಪ್ರಾರ್ಥನೆಗಳು ಹಬ್ಬದ ಪ್ರಸ್ತುತತೆಯನ್ನು ಇನ್ನಷ್ಟು ವೃದ್ಧಿಸುತ್ತದೆ. ಅದೇ ವೇಳೆ, ಪ್ರಸಕ್ತ ಸಾಮಾಜಿಕ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕೆಲವು ಋಣಾತ್ಮಕ ಪಲ್ಲಟಗಳು ಹಬ್ಬದ ಸಾಮಾಜಿಕ ಆಯಾಮಗಳಿಗೆ ಬಾಧಿಸದಂತೆ ನೋಡಿಕೊಳ್ಳಬೇಕಿದೆ. ಇಸ್ಲಾಮಿನಲ್ಲಿ ಕರುಣೆ ಒಂದು ಸಾಟಿಯಿಲ್ಲದ ಮಾನವ ಭಾವ. ಅದೊಂದು ಮಹತ್ತರ ಆಶಯವಾಗಿದ್ದು ಜೀವನದ ಪ್ರಮುಖ ಗುರಿಗಳಲ್ಲೊಂದು. ಇತರರ ನೋವುಗಳನ್ನು ತನ್ನ ನೋವುಗಳಾಗಿ ಕಾಣಲು ಸಾಧ್ಯವಾದರೆ ಮಾತ್ರವೇ ಇಸ್ಲಾಮ್ ಸಂಪೂರ್ಣವಾಗಬಲ್ಲದು.

ಒಬ್ಬ ವಿಶ್ವಾಸಿಯ ಅಂತರ್ಯದಲ್ಲಿ ಕರುಣೆಯ ಹೆದ್ದೆರೆಗಳನ್ನೆಬ್ಬಿಸುವ ಕರುಣೆಯ ದಿನವಾಗಿದೆ ಈದುಲ್ ಫಿತ್ರ್. ಬೆಂಕಿ ಹಿಡಿಯದ ಒಲೆಗಳನ್ನು ಕಾಣುವಾಗ ಅವನ ಕಣ್ಣಂಚಿನಲ್ಲಿ ನೀರಿನ ಸೆಲೆಗಳು ಕಂಡುಬರದಿದ್ದಲ್ಲಿ ಒಂದು ತಿಂಗಳು ಅನ್ನಪಾನೀಯಗಳನ್ನು ತ್ಯಜಿಸಿದ್ದು ವ್ಯರ್ಥ ಎನ್ನಬಹುದು. ಉಪವಾಸದ ಸತ್ಫಲಗಳನ್ನು ತನ್ನ ಜೀವನಕ್ಕೆ ಆವಾಹಿಸುವಲ್ಲಿ ಪರಾಭವಗೊಂಡದ್ದರ ನಿದರ್ಶನವದು. ಉತ್ತಮವಾದ ದಿರಿಸನ್ನು ಧರಿಸಿ, ಸುಗಂಧ ದ್ರವ್ಯಗಳನ್ನು ಬಳಸಿ ಹಬ್ಬದ ದಿನದಂದು ನಾವು ಸುತ್ತಾಡುವಾಗ ನಮ್ಮ ಸುತ್ತಲಿನಲ್ಲಿರುವ ಬೆನ್ನಿಗೆ ಅಂಟಿದ ಹೊಟ್ಟೆ ಮತ್ತು ಮುರುಕಲು ವಸ್ತ್ರ ಧರಿಸಿದ ಜನರಿಗೆ ಆಸರೆಯಾಗಲು ನಮಗೆ ಸಾಧ್ಯವಾಗಬೇಕು. ಈದ್ ಸಂದೇಶಗಳು ಸಾಕಾರಗೊಳ್ಳುವುದು ಇಂತಹ ಸಾಮಾಜಿಕ ವಿಕಾಸಗಳ ಮೂಲಕ. ಸದ್ಯ ರಾರಾಜಿಸುತ್ತಿರುವ ಚಿಂತನಾಧಾರೆಗಳು ತಮ್ಮ ತಮ್ಮಲ್ಲೇ ಸೀಮಿತಗೊಳ್ಳುವುದನ್ನು ಪ್ರೋತ್ಸಾಹಿಸುತ್ತಿದ್ದರೆ ಆ ಎಲ್ಲೆಗಳನ್ನೆಲ್ಲಾ ಮೀರಿ ಸೀಮೋಲ್ಲಂಘನೆ ನಡೆಸಲು ಪ್ರೇರಣೆ ನೀಡುತ್ತದೆ ಈದ್. ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವುದನ್ನು ನಿರಾಕರಿಸಿರುವ ಇಸ್ಲಾಮಿನ ವಿಶ್ವಾಸಿಗೆ ಈ ಎಲ್ಲೆಗಳನ್ನು ಮೀರುವುದು ಅಷ್ಟು ಕಷ್ಟಕರವಲ್ಲ. ಈದ್ ದಿನ ಯಾರೂ ಹಸಿವಿನಿಂದ ಉಳಿಯಬಾರದು ಎಂಬ ಕಾರಣ ದಿಂದಲೇ ಈದ್‌ನ ಕಡ್ಡಾಯ ಕರ್ಮಗಳಲ್ಲೊಂದಾಗಿ 'ಫಿತ್ರ್ ಝಕಾತ್' ಎಂದು ಕರೆಯಲಾಗುವ ದಾನವನ್ನು ಒಳಗೊಳಿಸಲಾಗಿದೆ.

ಈದ್ ದಿನದಲ್ಲಿ ತನಗೆ ಮತ್ತು ತನ್ನ ಕುಟುಂಬಿಕರಿಗೆ ಬೇಕಾದ ಖರ್ಚಿಗಿಂತ ಹೆಚ್ಚಿನ ಸಂಪತ್ತಿನ ಸಂಗ್ರಹವಿರುವ ಎಲ್ಲಾ ವಿಶ್ವಾಸಿಗಳು ತಂತಮ್ಮ ಊರಿನಲ್ಲ್ಲಿರುವ ಬಡಜನರಿಗೆ ನಿಗದಿತ ಪ್ರಮಾಣದ ಧಾನ್ಯಗಳನ್ನು ತಲುಪಿಸಿಕೊಡಲೇಬೇಕು. ಹಬ್ಬದ ಸಂಭ್ರಮ ಕೆಲವೇ ಕೆಲವು ಶ್ರೀಮಂತರಿಗೆ ಮಾತ್ರ ಸೀಮಿತವಾಗದಂತೆ ಇದು ನೋಡಿಕೊ ಳ್ಳುತ್ತದೆ. ಒಂದೆಡೆ ಒಗ್ಗೂಡಿ ಪ್ರಾರ್ಥನೆಗಳಲ್ಲಿ ನಿರತರಾಗು ವಾಗಲೂ ಒಗ್ಗಟ್ಟು ಮತ್ತು ಸಾಮಾಜಿಕ ಸಹಭಾಗಿತ್ವದ ಉದಾಹರಣೆಗಳು ಅನಾವರಣಗೊಳ್ಳುತ್ತದೆ. ಹಸ್ತಲಾಘವ ಮಾಡಿ ಪರಸ್ಪರ ಬರಸೆಳೆಯವಾಗ ಸಂಬಂಧಗಳು ಸದೃಢಗೊಳ್ಳು ತ್ತದೆ. ಕುಟುಂಬಸ್ಥರ, ನೆರೆಹೊರೆಯವರ ಮನೆಗಳಿಗೆ ಭೇಟಿ ನೀಡಿ ಸ್ನೇಹ ವಿನಿಮಯ ಮಾಡುವ ಮೂಲಕ ಸಾಮಾಜಿಕ ಬಾಂಧವ್ಯಗಳನ್ನು ಗಟ್ಟಿಗೊಳಿಸಲಾಗುತ್ತದೆ.

ಮನುಷ್ಯನು ಒಂದು ಸಾಮಾಜಿಕ ಜೀವಿಯಾಗಿದ್ದು ಸಮಾಜದಿಂದ ಬೇರ್ಪಟ್ಟು ಯಾವ ಹಬ್ಬವೂ ಪರಿಪೂರ್ಣ ಎನಿಸದು ಎಂಬ ಸಂದೇಶವನ್ನು ಈದುಲ್ ಫಿತ್ರ್ ನಮ್ಮ ಮುಂದಿಡುತ್ತದೆ. ಈ ಸುದಿನದ ಆರಾಧನೆಗಳಲ್ಲಿ ತುಂಬಿ ನಿಲ್ಲುವುದು ಸ್ವಂತಕ್ಕಾಗಿನ ಪ್ರಾರ್ಥನೆಗಳಲ್ಲ. ಮಾನವರಾಶಿಯ ವಿಮೋಚನೆಯೇ ಅಲ್ಲಿನ ಕೇಂದ್ರಬಿಂದು. ಎಲ್ಲರೂ ಸಕಲೈಶ್ವರ್ಯದಿಂದ ಬಾಳಬೇಕು ಎಂಬ ಉತ್ಕಟ ಬಯಕೆಯನ್ನು ಹೊರಹೊಮ್ಮಿಸುತ್ತದೆ ಈದ್. ಪ್ರತಿಯೊಂದು ಹಬ್ಬದ ಜೀವಾಳ ಇರುವುದು ಪರಸ್ಪರ ಒಗ್ಗಟ್ಟು ಮತ್ತು ಬೆಸುಗೆಗಳಲ್ಲಿ. ನಾವು ನಮ್ಮ ಅಸ್ತಿತ್ವವನ್ನು, ನಮ್ಮ ಸಂಪತ್ತನ್ನು ಮತ್ತು ಸರ್ವಸ್ವವನ್ನು ಇತರರೊಂದಿಗೆ ಹೆಚ್ಚಾಗಿ ಹಂಚಿ ಕೊಳ್ಳುವುದು ಹಬ್ಬದ ದಿನಗಳಲ್ಲಿ. ಈದುಲ್ ಫಿತ್ರ್ ಕೂಡಾ ಹಾಗೆಯೇ ಆಗಬೇಕು. ದ್ವೀಪಗಳಾಗಿ ಒಡೆದು ಹೋಗುತ್ತಿರುವ ಸಮಾಜಗಳನ್ನು ಒಂದೇ ನೂಲಿನಲ್ಲಿ ಪೋಣಿಸಬಹುದಾದ ಸಂದರ್ಭಗಳಾಗಿ ಅವುಗಳನ್ನು ಮಾರ್ಪಡಿಸಲು ನಾವು ಕೆಲಸ ಮಾಡಬೇಕು. ರಮಝಾನಿನ ವ್ರತಾಚರಣೆ ಮತ್ತು ಶವ್ವಾಲ್ ಒಂದರ ಈದುಲ್ ಫಿತ್ರ್ ಆತ್ಮ ಪರಿಶುದ್ಧತೆ ಮತ್ತು ಸಾಮಾಜಿಕ ಬೆಸುಗೆಯನ್ನು ಸಾಧಿಸುವಲ್ಲಿ ಉದಾತ್ತ ಸಾಫಲ್ಯವನ್ನು ಕಾಣುವಂತಾ ಗಲಿ. ಸರ್ವರಿಗೂ ಈದುಲ್ ಫಿತ್ರ್‌ನ ಶುಭಾಶಯಗಳು.

share
ನಝೀರ್ ಅಬ್ಬಾಸ್ ಸುರೈಜಿ
ನಝೀರ್ ಅಬ್ಬಾಸ್ ಸುರೈಜಿ
Next Story
X