ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಆತ್ಮೀಯ ಕ್ಷಣಕ್ಕೆ ಸಾಕ್ಷಿಯಾದ ಶಿವಕುಮಾರ್-ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ರಾಜಧಾನಿಯನಲ್ಲಿ ಶನಿವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಆತ್ಮೀಯ ಕ್ಷಣಕ್ಕೆ ಸಾಕ್ಷಿಯಾದರು.
ಈ ಕುರಿತಂತೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ವಿರೋಧಿಗಳು ಅದೆಷ್ಟೇ ಅಪಪ್ರಚಾರ ಮಾಡಬಹುದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಐಕ್ಯತೆ, ಏಕತೆ, ಒಗ್ಗಟ್ಟುಗಳೇ ಶಕ್ತಿ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಈ ಇಬ್ಬರು ನಾಯಕರ ಶಕ್ತಿಯೇ ವಿರೋಧಿಗಳ ನಿದ್ದೆಗೆಡಿಸಿದೆ. ಮುಂದೆ ಶಾಶ್ವತವಾಗಿ ನಿದ್ದೆಗೆಡಿಸಲಿದೆ. ಜನನಾಯಕ + ಸಂಘಟನಾ ಚತುರ = ಅಭೂತಪೂರ್ವ ಯಶಸ್ಸು. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ’’ಎಂದು ಬರೆದುಕೊಂಡಿದೆ.
ವಿರೋಧಿಗಳು ಅದೆಷ್ಟೇ ಅಪಪ್ರಚಾರ ಮಾಡಬಹುದು, ಆದರೆ ಕಾಂಗ್ರೆಸ್ ಪಕ್ಷಕ್ಕೆ ಐಕ್ಯತೆ, ಏಕತೆ, ಒಗ್ಗಟ್ಟುಗಳೇ ಶಕ್ತಿ.@siddaramaiah, @DKShivakumar,
— Karnataka Congress (@INCKarnataka) April 22, 2023
ಈ ಇಬ್ಬರು ನಾಯಕರ ಶಕ್ತಿಯೇ ವಿರೋಧಿಗಳ ನಿದ್ದೆಗೆಡಿಸಿದೆ.
ಮುಂದೆ ಶಾಶ್ವತವಾಗಿ ನಿದ್ದೆಗೆಡಿಸಲಿದೆ.
ಜನನಾಯಕ + ಸಂಘಟನಾ ಚತುರ = ಅಭೂತಪೂರ್ವ ಯಶಸ್ಸು#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/mYPoFyONsS