ಕೃಷ್ಣಾಪುರ: ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಕೃಷ್ಣಾಪುರ: ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್, ಕೃಷ್ಣಾಪುರ ಇದರ ಈದುಲ್ ಫಿತ್ರ್ ನಮಾಝ್ ಕೃಷ್ಣಾಪುರದ ಈದ್ಗಾ ಮೈದಾನದಲ್ಲಿ ನಡೆಯಿತು.
ಈದ್ ನಮಾಝ್ ನೇತೃತ್ವವನ್ನು ಕೃಷ್ಣಾಪುರ ಸಂಯುಕ್ತ ಖಾಝಿ ಅಲ್ ಹಾಜ್ ಇ. ಕೆ. ಇಬ್ರಾಹಿಂ ಮುಸ್ಲಿಯಾರ್ ನೆರವೇರಿಸಿದರು. ಈದ್ ಖುತುಬವನ್ನು ಕೇಂದ್ರ ಮಸೀದಿಯ ಖತೀಬ್ ಮೌಲಾನ ಪಿ.ಎಂ. ಉಮರುಲ್ ಫಾರೂಕ್ ಸಖಾಫಿ ಪ್ರಭಾಷಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ಭರವಸೆ ಸಮಿತಿ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್ ಹಾಗೂ ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ, ಜಮಾತಿನ ಅಧ್ಯಕ್ಷರಾದ ಹಾಜಿ ಬಿ.ಎಂ. ಮುಮ್ತಾಝ್ ಆಲಿ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಫಾಲ್ಕನ್, ಅಲ್ ಬದ್ರಿಯಾ ಶಾಲೆಯ ಅಧ್ಯಕ್ಷ ಅಬೂಬಕ್ಕರ್ ಕೃಷ್ಣಾಪುರ ಮತ್ತು ಅಧೀನ ಮಸೀದಿಗಳ ಖತೀಬರು ಹಾಗೂ ಅಧ್ಯಕ್ಷರುಗಳು ಮತ್ತು ಜಮಾತಿನ ಸದಸ್ಯರು ಉಪಸ್ಥಿತರಿದ್ದರು.






.jpeg)
.jpeg)


