ಐಪಿಎಲ್ ಬೆಟ್ಟಿಂಗ್ ನಲ್ಲಿ ಲಕ್ಷಾಂತರ ರೂ. ನಷ್ಟ: ಯುವಕ ಬಲಿ

ಕಲಬುರ್ಗಿ, ಎ.22: ಐಪಿಎಲ್ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಇಲ್ಲಿನ ಜೇವರ್ಗಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು ಸಿದ್ದು ಪ್ರಸಾದ ಸಾ.ಬಿರಾಳ ಬಿ. (26) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಸಿದ್ದುಪ್ರಸಾದ ಪದವಿ ಮುಗಿದರೂ ತನ್ನ ಸ್ನೇಹಿತರೊಂದಿಗೆ ಹಾಸ್ಟೆಲ್‌ನಲ್ಲಿ ವಾಸವಾಗಿರುತ್ತಿದ್ದ. ಐಪಿಎಲ್ ಕ್ರಿಕೆಟ್‌ನ್ನು ನೋಡುತ್ತಿದ್ದ ಆತ ಬೆಟ್ಟಿಂಗ್‌ನ ಹಿಂದೆ ಬಿದ್ದಿದ್ದ. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ.
Next Story





