ಶೈಕ್ಷಣಿಕ ಸೇವೆಗೆ 2 ವರ್ಷದ ಸಂಭ್ರಮ: 300 ವಿದ್ಯಾರ್ಥಿಗಳಿಗೆ ಈದ್ ಕೊಡುಗೆ ಘೋಷಿಸಿದ ಕಮ್ಯೂನಿಟಿ ಸೆಂಟರ್

ಮಂಗಳೂರು: ಶೈಕ್ಷಣಿಕ ಸೇವೆಗೆ ಎರಡು ವರ್ಷದ ಸಂಭ್ರಮ ಹಾಗೂ ಈದ್ ಹಬ್ಬದ ಪ್ರಯುಕ್ತ 'ಕಮ್ಯೂನಿಟಿ ಸೆಂಟರ್' 300 ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
2023 ರ ಸಾಲಿನಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳು ಈ ಕೊಡುಗೆ ಪಡೆಯಲಿದ್ದಾರೆ ಎಂದು ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.
'ಕಮ್ಯೂನಿಟಿ ಸೆಂಟರ್ ಅಧೀನದಲ್ಲಿ ಮೆಡಿಕಲ್-ಡೆಂಟಲ್ ಕಾಲೇಜು ಇಲ್ಲ. ಆದರೂ ನಮ್ಮಲ್ಲಿ 12 ಎಂ.ಬಿ.ಬಿ.ಎಸ್, 5 ಬಿಡಿಎಸ್ , 3 ಬಿ.ಎಂ.ಎಸ್ ಪದವಿ ಕಲಿಯುವ ವಿದ್ಯಾರ್ಥಿಗಳು ರಾಜ್ಯದ ವಿವಿಧ ಮೆಡಿಕಲ್ ಕಾಲೇಜಿನಲ್ಲಿದ್ದಾರೆ. ಈ ವರ್ಷ 50 ವಿದ್ಯಾರ್ಥಿಗಳಿಗೆ ನೀಟ್ ಬರೆಯಲು ಕೋಚಿಂಗ್ ನೀಡಲಾಗಿದೆ. ಮುಂದಿನ ವರ್ಷಕ್ಕೆ 50 ವಿದ್ಯಾರ್ಥಿಗಳು ಈ ಅವಕಾಶವನ್ನು ಕೊಡುಗೆಯಾಗಿ ಪಡೆಯಲಿದ್ದಾರೆ. ನಮ್ಮಲ್ಲಿ ಕಾನೂನು ಕಾಲೇಜು ಇಲ್ಲ. ಆದರೂ ರಾಜ್ಯದ ವಿವಿಧ ಕಾನೂನು ಕಾಲೇಜಿನಲ್ಲಿ ಸೆಂಟರಿನ 14 ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಎಲ್ಲಾ ಧರ್ಮೀಯ ವಿದ್ಯಾರ್ಥಿಗಳಿಗೂ ಅವಕಾಶ ಇರುವಂತೆ 25 ವಿದ್ಯಾರ್ಥಿಗಳಿಗೆ ಕಾನೂನು ಪದವಿಗೆ 100% ವಿದ್ಯಾರ್ಥಿ ವೇತನ ನೀಡಲಿದ್ದೇವೆ' ಎಂದು ತಿಳಿಸಿದ್ದಾರೆ.
ಸೆಂಟರಿನಲ್ಲಿ ಸುಮಾರು 100 ವಿದ್ಯಾರ್ಥಿಗಳು ಈಗಾಗಲೇ ಪಿಯುಸಿ ಕಲಿಯುತ್ತಿದ್ದು ಪ್ರಥಮ ಪಿಯುಸಿಯಲ್ಲಿ 100% ಫಲಿತಾಂಶ ಮತ್ತು ದ್ವಿತೀಯ ಪಿಯುಸಿಯಲ್ಲೂ 71 ವಿದ್ಯಾರ್ಥಿಗಳು 100% ಫಲಿತಾಂಶ ತೆಗೆದು ನಮಗೆ ಹೆಮ್ಮೆ ಮೂಡಿಸಿದ್ದಾರೆ. ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ ಎಂದು ತಿಳಿಸಿದ್ದಾರೆ.
2023- 24 ನೇ ಸಾಲಿನಲ್ಲಿ ಸಂಶೋಧನೆ ಮತ್ತು ಬೋಧನಾ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ. ಬಿಎಡ್. physics chemistry biology mathematics ನಲ್ಲಿ ಎಂ.ಎಸ್ಸಿ, ಪದವಿಗೆ 60% ವಿದ್ಯಾರ್ಥಿ ವೇತನ ನೀಡಲಿದ್ದು ಫಿಸಿಕ್ಸ್ ನಲ್ಲಿ 95% ಹೆಚ್ಚು ಇರುವ ಪಿಯುಸಿ ವಿದ್ಯಾರ್ಥಿಗಳಿಗೆ ಎಂ.ಎಸ್ಸಿ ಫಿಸಿಕ್ಸ್ ಮಾಡುವ ಗುರಿ ಹೊಂದುವುದಾದರೆ ಸಂಪೂರ್ಣ ಉಚಿತವಾಗಿ ಅವರಿಗೆ ಶಿಕ್ಷಣ ನೀಡಲಿದ್ದೇವೆ. ಬಿಎಸ್ಸಿ ನರ್ಸಿಂಗ್ 10 ಯುವಕರಿಗೆ 5 ಯುವತಿಯರಿಗೆ 40% ಕಾಲೇಜು ಶುಲ್ಕ ಕಮ್ಯೂನಿಟಿ ಸೆಂಟರ್ ನೀಡಲಿದೆ ಎಂದು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ನಂತರ ಜೆ-ಇ-ಇ (25), ನೀಟ್ ಲಾಂಗ್ ಟರ್ಮ್(50) ಕೊಚಿಂಗ್ ರಾಜ್ಯದ ಪ್ರತಿಷ್ಠಿತ ಕೋಚಿಂಗ್ ಸೆಂಟರಿನಲ್ಲಿ ನೀಡಲಿದ್ದು ಒಟ್ಟು 75 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ಸೆಂಟರ್ ನೀಡಲಿದೆ. ಸಿ.ಎ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಜೊತೆ 60% ಕಾಲೇಜು ಶುಲ್ಕ ಕೌನ್ಸಿಲಿಂಗ್ ಪಾಸಾಗುವ 10 ವಿದ್ಯಾರ್ಥಿಗಳಿಗೆ ಸೆಂಟರ್ ವಿದ್ಯಾರ್ಥಿ ವೇತನ ನೀಡಲಿದೆ. ಪಿಯುಸಿ ನಂತರ ಯಾವುದೇ ಪದವಿ ಮಾಡುವ 50 ವಿದ್ಯಾರ್ಥಿಗಳಿಗೆ ಸರಕಾರಿ ಉಧ್ಯೋಗ ತರಭೇತಿ ಏಸ್ ಐ ಎ ಎಸ್ ಅಖಾಡಮಿ ಮತ್ತು ಮಾತಾ ಎಜುಕೇಶನ್ ಅಕಾಡಮಿಯ ಮೂಲಕ ಉಚಿತವಾಗಿ ಕೋಚಿಂಗ್ ನೀಡಲಿದ್ದೇವೆ. ಹಿಸ್ಟರಿ, ಲಿಟ್ರೇಚರ್, ಎಕಾನಮಿ, ಜರ್ನಲಿಝಂ, ಸೋಶಿಯಲ್ ಸರ್ವಿಸ್, ಮಾಸ್ ಕಮ್ಯುನಿಕೇಶನ್, ವಿಶೇಷ ಮಕ್ಕಳ ಸೇವೆ, ಮಾನಸಿಕ ಚಿಕಿತ್ಸಾ ತಜ್ಞರಾಗಲು ಪದವಿ ಪಡೆಯುವ ವಿದ್ಯಾರ್ಥಿಗಳಿಗೆ 60% ವಿದ್ಯಾರ್ಥಿ ವೇತನ ಸೆಂಟರ್ ನೀಡಲಿದೆ ಎಂದು ತಿಳಿಸಿದ್ದಾರೆ.
24-4-2023 ರ ಸೋಮವಾರದಿಂದ 24-5-2023 ರ ವರೆಗೆ ಪುತ್ತೂರು, ಮಂಗಳೂರು, ಬಿಸಿರೋಡ್, ವಿಟ್ಲ ಸೆಂಟರಿನಲ್ಲಿ ವಿದ್ಯಾರ್ಥಿಗಳ ಆಯ್ಕೆಗೆ ಕೌನ್ಸಿಲಿಂಗ್ ನಡೆಯಲಿದೆ ಪ್ರತೀ ಹೆತ್ತವರು ತಮ್ಮ ಮಕ್ಕಳನ್ನು ಕೌನ್ಸಿಲಿಂಗ್ ಕಳುಹಿಸಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ನಂತರ ಕಾನೂನು ಪದವಿ ಪಡೆಯುವ CLAT ಕೋಚಿಂಗ್ ಸಹಿತ, UPSC, NDA, NEET, JEE ಗೆ ಸ್ಪರ್ಧಿಸುವ ಯುವಕರಿಗೆ ರಾಷ್ಟ್ರದ ಪ್ರಮುಖ ಕಾಲೇಜಿನಲ್ಲಿ ದಾಖಲಾತಿ ನೀಡಲಿರುವ ಸೆಂಟರ್, ಒಟ್ಟು 120 ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಲು ಬಯಸಿದ್ದು ಅವರಲ್ಲಿ 20 ವಿದ್ಯಾರ್ಥಿನಿಯರಿಗೂ ಅವಕಾಶ ನೀಡಲಾಗುತ್ತದೆ. ಹಾಸ್ಟೇಲ್ ಸೌಲಭ್ಯವೂ ಉಚಿತವಾಗಿದ್ದು ಸಂಪೂರ್ಣ ಜವಾಬ್ದಾರಿಯನ್ನು ಸೆಂಟರ್ ವಹಿಸಿ ಕೊಳ್ಳಲಿದೆ. ಸೆಂಟರಿಗೆ ಕಳೆದ ಎರಡು ವರ್ಷದ ಅವಧಿಗೆ ನೆರವು ನೀಡಿದ ಪ್ರತೀಯೊಬ್ಬರನ್ನು ಸ್ಮರಿಸುತ್ತೇವೆ. ಈಗಾಗಲೇ 370 ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್ ಮಾಡುತ್ತಿದ್ದು ಅವರೆಲ್ಲರೂ ದೇಶಕ್ಕೆ ಕೊಡುಗೆ ಕೊಡುವ ಯುವ ಪೀಳಿಗೆಯಾಗಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಅಮ್ಜದ್ ಖಾನ್ ಹೇಳಿದ್ದಾರೆ.
'ಸೆಂಟರಿನಲ್ಲಿ 4600 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. 9 ಸೆಂಟರ್ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳಿಗೆ ಪ್ರತೀ ದಿನವು ವಿವಿಧ ರೀತಿಯ ಕೌನ್ಸಿಲಿಂಗ್ ನಡೆಯುತ್ತಿದೆ. 17 ವಿಲೇಜ್ ಟ್ಯೂಷನ್ ಸೆಂಟರ್ ಕಾರ್ಯಾಚರಿಸುತ್ತಿದೆ. ಪ್ರತೀ ಶಾಲಾ-ಕಾಲೇಜಿನ ಜೊತೆ ಸಂಪರ್ಕ ಸಾಧಿಸಿ, ಸರಕಾರದ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಎನ್ನುವ ಉಚಿತ ಕ್ಯಾರಿಯರ್ ಗೈಡೆನ್ಸ್ , ವಿವಿಧ ಇಲಾಖೆ ಮತ್ತು ಸಂಸ್ಥೆಗಳ ವಿದ್ಯಾರ್ಥಿ ವೇತನ ಮಾಹಿತಿ, ಪರೀಕ್ಷಾ ಮಾಹಿತಿ ನೀಡುವ ಕಾಲ್ ಸೆಂಟರ್ ಸಂಸ್ಥೆಯಲ್ಲಿ ಕಾರ್ಯಾಚರಿಸುತ್ತಿದೆ. 23 ಕೌನ್ಸಿಲರ್ ಗಳು ಸೆಂಟರಿನಲ್ಲಿ ದುಡಿಯುತ್ತಿದ್ದಾರೆ. ರಾಜ್ಯದಾದ್ಯಂತ ಹಲವು ಸಂಘ ಸಂಸ್ಥೆಗಳು ಸೆಂಟರಿನ ಮಾದರಿ ಅನುಸರಿಸುತ್ತಿದೆ. ಅವರಿಗೆ ಬೇಕಾದ ಪದ್ದತಿಗಳನ್ನು ನೀಡುತ್ತಿದ್ದೇವೆ. ಕೌಶಲ್ಯ ತರಬೇತಿ, ತಂತ್ರಜ್ಞಾನ ಮತ್ತು ಉದ್ಯೋಗ ಒದಗಿಸಿ ಕೊಡುವ ಸೇವೆಯನ್ನು ಸಂಸ್ಥೆ ಮಾಡುತ್ತಿದೆ' ಎಂದು ವಿವರಿಸಿದ್ದಾರೆ.
ಪ್ರತೀ ಹೆತ್ತವರು SSLC & PUC, ನಂತರ ನೇರವಾಗಿ ಕಾಲೇಜಿಗೆ ದಾಖಲಾತಿ ಮಾಡದೆ ಸೆಂಟರಿಗೆ ತಮ್ಮ ಮಕ್ಕಳನ್ನು ಕರೆತಂದು ನಮ್ಮ ಕೌನ್ಸಿಲರ್ ಗಳೊಂದಿಗೆ ಸಮಾಲೋಚಿಸಿ ಅವರಿಗೆ ಕ್ಯಾರಿಯರ್ ಪ್ಲಾನ್ ಮಾಡಿಸಿಕೊಳ್ಳಿ. ಇದು ಸಂಪೂರ್ಣ ಉಚಿತವಾದ ಸೇವೆಯಾಗಿದೆ. ಸೆಂಟರಿನಲ್ಲಿ ಇದುವರೆಗೂ ಹಲವು ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಲಾಗಿದೆ. ಅಲ್ಲಿ ಹಲವು ಸ್ಪೂರ್ತಿದಾಯಕ ಕಥೆಗಳಿವೆ. ಅವುಗಳ ಮೂಲಕ ತಮ್ಮ ಮಕ್ಕಳಲ್ಲಿ ಹೊಸ ಉತ್ಸಾಹ ಮತ್ತು ಆಲೋಚನೆಯನ್ನು ನೀಡಿರಿ ಎಂದವರು ವಿನಂತಿಸಿದರು.







