ಪಂಜಾಬ್ ಪೊಲೀಸರ ಎದುರು ಅಮೃತ್‌ಪಾಲ್ ಸಿಂಗ್ ಶರಣಾಗತಿ: ವರದಿ

ಹೊಸದಿಲ್ಲಿ: ಕಳೆದ ಮಾರ್ಚ್ 18ರಿಂದ ತಲೆ ಮರೆಸಿಕೊಂಡಿದ್ದ ಖಲಿಸ್ತಾನ ಪ್ರತಿಪಾದಕ ಹಾಗೂ ವಿವಾದಾತ್ಮಕ ಪ್ರವಚನಕಾರ ಅಮೃತ್‌ಪಾಲ್ ಮೊಗಾದಲ್ಲಿ ಪಂಜಾಬ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಉನ್ನತ ಮೂಲಗಳು ಹೇಳಿವೆ. ಆತ ಈಗ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗಿದೆ.
ಅಮೃತ್‌ಪಾಲ್ ಖಾಲಿಸ್ತಾನಿ-ಪಾಕಿಸ್ತಾನಿ ಏಜೆಂಟ್ ಎನ್ನುವುದು ಸರ್ಕಾರದ ವಾದ. ಹಲವು ವರ್ಷಗಳಿಂದ ಪಂಜಾಬ್‌ನಲ್ಲಿ ನೆಲೆಸಿದ್ದ ಈಗ ಸಶಸ್ತ್ರ ಬೆಂಬಲಿಗರ ಬೆಂಗಾವಲು ಹೊಂದಿದ್ದ. ಖಲಿಸ್ತಾನಿ ಹೋರಾಟಗಾರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಅನುಯಾಯಿ ಎನ್ನಲಾದ ಈತ "ಬಿಂದ್ರನ್‌ವಾಲೆ 2.0" ಎಂದೇ ಬೆಂಬಲಿಗರಲ್ಲಿ ಜನಪ್ರಿಯನಾಗಿದ್ದ.
Next Story





