IPL: 24 ಲಕ್ಷ ರೂ. ಮೌಲ್ಯದ ಸ್ಟಂಪ್ ಅನ್ನು ಎರಡು ಬಾರಿ ಪುಡಿಗಟ್ಟಿದ ಅರ್ಷದೀಪ್ ಸಿಂಗ್

ಮುಂಬೈ: ವಾಂಖೆಡೆ ಸ್ಟೇಡಿಯಮ್ ನಲ್ಲಿ ಶನಿವಾರ ರಾತ್ರಿ ನಡೆದ ಹೈ ಸ್ಕೋರಿಂಗ್ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 215 ರನ್‌ಗಳ ಗುರಿ ಬೆನ್ನಟ್ಟಿತು. ಅಂತಿಮ ಓವರ್ ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿರುವ ಪಂಜಾಬ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಆತಿಥೇಯರಿಗೆ ಗೆಲುವನ್ನು ನಿರಾಕರಿಸಿದರು.
ಅರ್ಷದೀಪ್ ತನ್ನ ಯಾರ್ಕರ್ ಎಸೆತದ ಮೂಲಕ ಕೊನೆಯ ಓವರ್ ನಲ್ಲಿ ಎರಡು ಬಾರಿ ಕ್ಲೀನ್ ಬೌಲ್ಡ್ ಮಾಡಿ 24 ಲಕ್ಷ ರೂ. ಮೌಲ್ಯದ ಸ್ಟಂಪ್ ನ್ನು ಪುಡಿಗಟ್ಟಿದ್ದಾರೆ.
ಇಶಾನ್ ಕಿಶನ್ ರನ್ನು ಬೇಗನೆ ಕಳೆದುಕೊಂಡ ಮುಂಬೈ ಮೂರು ನಿರ್ಣಾಯಕ ಜೊತೆಯಾಟದ ನೆರವಿನಿಂದ ಗೆಲುವಿನತ್ತ ಮುನ್ನಡೆದಿತ್ತು.
ಮುಂಬೈ 18ನೇ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ಆಗ ಬೌಲಿಂಗ್ ಮಾಡಿದ ಅರ್ಷದೀಪ್ ಕೇವಲ 9 ರನ್ ನೀಡಿ ಸೂರ್ಯಕುಮಾರ್ ಯಾದವ್ ವಿಕೆಟನ್ನು ಉಡಾಯಿಸಿದರು.
ಅಂತಿಮ ಓವರ್ ಎಸೆಯುವ ಹೊಣೆ ಹೊತ್ತ ಅರ್ಷದೀಪ್ ಮೊದಲ ಎಸೆತದಲ್ಲಿ 1 ರನ್ ನೀಡಿದರು. ತಿಲಕ್ ವರ್ಮಾ ಮುಂದಿನ ಎಸೆತ ವ್ಯರ್ಥ ಮಾಡಿದ್ದರು. ಆಗ ಮುಂಬೈ ಗೆಲುವಿಗೆ 4 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು. ಆಗ ಅರ್ಷದೀಪ್ ಸತತ 2 ಯಾರ್ಕರ್ ಗಳನ್ನು ಎಸೆದು ತಿಲಕ್ ಹಾಗೂ ನೆಹಾಲ್ ವಧೇರಾರನ್ನು ಔಟ್ ಮಾಡಿದರು. ಎಡಗೈ ವೇಗಿ ಎಸೆದ ಚೆಂಡಿನ ರಭಸಕ್ಕೆ 24 ಲಕ್ಷ ರೂ. ಮೌಲ್ಯದ ಮಧ್ಯದಲ್ಲಿದ್ದ ಸ್ಟಂಪ್ ಎರಡೂ ಬಾರಿಯೂ ಹೋಳಾಯಿತು.
Stump breaker,
— JioCinema (@JioCinema) April 22, 2023
Game changer!
Remember to switch to Stump Cam when Arshdeep Akram bowls #MIvPBKS #IPLonJioCinema #IPL2023 #TATAIPL | @arshdeepsinghh pic.twitter.com/ZnpuNzeF7x







