OCI ಮಾನ್ಯತೆ ರದ್ದು: ನಟ ಚೇತನ್‌ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಬೆಂಗಳೂರು: ಕನ್ನಡ ನಟ ಮತ್ತು ಹೋರಾಟಗಾರ ಚೇತನ್ ಕುಮಾರ್ (Chetan Kumar) ಅವರ ಓವರ್‌ಸೀಸ್ ಸಿಟಿಜನ್‌ಶಿಪ್ ಕಾರ್ಡ್ (OCI) ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಆದರೆ ಈಗ ಹೈಕೋರ್ಟ್ ಈ ವಿಚಾರವಾಗಿ ನಟನಿಗೆ ಷರತ್ತುಬದ್ಧ ರಿಲೀಫ್ ಕೊಟ್ಟಿದೆ.
ಮುಂದಿನ ವಿಚಾರಣೆ (ಜೂನ್ 2) ವರೆಗೆ ನಟನ ವಿರುದ್ಧ ಕ್ರಮ ಬೇಡ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ. ಆದರೆ, ನ್ಯಾಯಾಂಗದ ಬಗ್ಗೆ ಟ್ವೀಟ್ ಮಾಡುವಂತಿಲ್ಲ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಬಗ್ಗೆ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ನಟ ಚೇತನ್ ಅವರಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.ಇದ
ಕೇಂದ್ರ ಸರ್ಕಾರ ನಟನ ಒಸಿಐ ಮಾನ್ಯತೆ ರದ್ದು ಮಾಡುವುದಾಗಿ ನೋಟಿಸ್ ಕಳುಹಿಸಿತ್ತು. ಪತ್ರ ದೊರಕಿದ 15 ದಿನಗಳಲ್ಲಿ ಒಸಿಐ ಕಾರ್ಡ್ ವಾಪಸ್ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು.
Next Story





