ಐಪಿಎಲ್: ರಾಜಸ್ಥಾನ ರಾಯಲ್ಸ್‌ಗೆ 190 ರನ್ ಸವಾಲು ನೀಡಿದ ಆರ್‌ಸಿಬಿ

ಬೆಂಗಳೂರು,ಎ.23: ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (77 ರನ್, 44 ಎಸೆತ) ಹಾಗೂ ಎಫ್ ಡು ಪ್ಲೆಸಿಸ್(62 ರನ್, 39 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿಗೆ 190 ರನ್ ಗುರಿ ನೀಡಿದೆ.
ರವಿವಾರ ನಡೆದ ಐಪಿಎಲ್‌ನ 32ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು.
ಆರ್‌ಸಿಬಿ ಪರ ಪ್ಲೆಸಿಸ್ ಹಾಗೂ ಮ್ಯಾಕ್ಸ್‌ವೆಲ್ ಹೊರತುಪಡಿಸಿ ಉಳಿದವರಿಂದ ದೊಡ್ಡ ಕೊಡುಗೆ ಸಿಗಲಿಲ್ಲ. ನಾಯಕ ವಿರಾಟ್ ಕೊಹ್ಲಿ ಶೂನ್ಯ ಸಂಪಾದಿಸಿದರು. ದಿನೇಶ್ ಕಾರ್ತಿಕ್ ಮಾತ್ರ(16)ಒಂದಷ್ಟು ಹೋರಾಟ ನೀಡಿದರು.
ತಲಾ 2 ವಿಕೆಟ್‌ಗಳನ್ನು ಪಡೆದಿರುವ ಟ್ರೆಂಟ್ ಬೌಲ್ಟ್(2-41) ಹಾಗೂ ಸಂದೀಪ್ ಶರ್ಮಾ(2-49) ಆರ್‌ಸಿಬಿಗೆ ಕಡಿವಾಣ ಹಾಕಿದರು. ಆರ್.ಅಶ್ವಿನ್(1-36) ಹಾಗೂ ಯಜುವೇಂದ್ರ ಚಹಾಲ್(1-28) ತಲಾ ಒಂದು ವಿಕೆಟ್ ಪಡೆದರು.
ಪ್ಲೆಸಿಸ್ ಸಹಿತ ಮೂವರು ಆಟಗಾರರ ರನೌಟಾದರು.
Next Story