ಜೋಕಟ್ಟೆ ಅಂಜುಮನ್ ಪಪೂ ಕಾಲೇಜಿಗೆ ಶೇ.95.12 ಫಲಿತಾಂಶ

ಮಂಗಳೂರು, ಎ.23: ಜೋಕಟ್ಟೆಯ ಅಂಜುಮನ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ.92.85 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.96.29 ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿರುವ 27 ವಿದ್ಯಾರ್ಥಿಗಳಲ್ಲಿ 5 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 9 ಮಂದಿ ಪ್ರಥಮ ಶ್ರೇಣಿಯಲ್ಲಿ, 9 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 3 ಮಂದಿ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಸುಜೀನಾ 554 (ಶೇ.92.33), ಹಲೀಮಾ ಮೆಹತಾಜ್ 534 (ಶೇ.89), ಫರ್ಜೀನಾ ಫರಹತ್ 520 (ಶೇ.86.66), ಫಾತಿಮಾ ರಿಜಾ 513 (ಶೇ.85.50), ಆಯಿಷಾ ಆಫ್ರೀನಾ 512(ಶೇ.85.33) ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 14 ವಿದ್ಯಾರ್ಥಿಗಳಲ್ಲಿ 2 ಮಂದಿ ವಿಶಿಷ್ಟ ಶ್ರೇಣಿ, 9 ಮಂದಿ ಪ್ರಥಮ ಶ್ರೇಣಿ, ತಲಾ ಒಬ್ಬರು ದ್ವಿತೀಯ ಮತ್ತು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಫಾತಿಮಾ ಫಾಸಿಲಾ 525(ಶೇ.87.50), ಹಾಜಿರಾ ಶಹಲಾ 513(ಶೇ.85.50) ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
*ಅಂಜುಮನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕ ಹಾಜಿ ಟಿ. ಅಬೂಬಕರ್, ಅಧ್ಯಕ್ಷ ಹಾಜಿ ಮುಹಮ್ಮದ್ ಸಿರಾಜ್ ಮನೆಗಾರ ಹಾಗೂ ಉಪ ಸಂಚಾಲಕರು ಮತ್ತು ಗೌರವ ಸಲಹೆಗಾರರು, ಆಡಳಿತ ಮಂಡಳಿಯ ಸದಸ್ಯರು, ಪಿ ಟಿಎ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದ್ದಾರೆ.