ಮಂಗಳೂರು: ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನಾಚರಣೆ

ಮಂಗಳೂರು: ನಗರದ ಜೆಪ್ಪುವಿನ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ಕೃತಜ್ಞತಾ ದಿನವನ್ನು ರವಿವಾರ ಜೆಪ್ಪುಸಂತ ಅಂತೋನಿ ಚಾಪೆಲ್‌ನಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಅತೀ ವಂದನೀಯ ಮ್ಯಾಕ್ಸಿಮ್ ಎಲ್. ನೊರೊನ್ಹಾ ಸಂಸ್ಥೆಯ ಮೇಲೆ ತೋರಿದವರಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು.
ಸಂಸ್ಥೆಯ ಸಹಾಯಕ ನಿರ್ದೇಶಕ ಫಾ.ರೂಪೇಶ್ ತಾವ್ರೊ ಪ್ರವಚನ ನೀಡಿದರು. ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ನಿರ್ದೇಶಕರು, ಹಿತಚಿಂತಕರು, ದಾನಿಗಳು ಹಾಗೂ ಹಿತೈಷಿಗಳನ್ನು ಸಂತ ಆಂತೋನಿಯ ಪ್ರತಿಮೆಯನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾರ್ಸೆಲ್ ಮೊಂತೇರೊ, ಮಂಗಳೂರು ಧರ್ಮಕ್ಷೇತ್ರದ ಕುಲಪತಿ, ಅತೀ ವಂದನೀಯ ವಿಕ್ಟರ್ ಜಾರ್ಜ್ ಡಿಸೋಜ, ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ವಿಲಿಯಂ ಬಾರ್ಬೋಜಾ, ಫಾ. ಲಾರೆನ್ಸ್ ಡಿಸೋಜ, ಫಾ. ಫ್ರಾನ್ಸಿಸ್ ಡಿಸೋಜ, ಫಾ.ತ್ರಿಶನ್ ಡಿಸೋಜ, ಸಂಸ್ಥೆಯ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತಾ, ಸಹಾಯಕ ನಿರ್ದೇಶಕ ಫಾ.ಲ್ಯಾರಿ ಪಿಂಟೋ ಉಪಸ್ಥಿತರಿದ್ದರು.
ಸಂಸ್ಥೆಯ ಮರು ವಿನ್ಯಾಸಗೊಳಿಸಲಾದ ‘ವೆಬ್‌ಸೈಟ್’ನ್ನು ಅನಾವರಣಗೊಳಿಸಿದರು. ನಿಸರ್ಗ ಪ್ರೇಮಿಯಾಗಿದ್ದ ಪಾದುವ ಸಂತ ಅಂತೋನಿಯ ನೆನಪಿಗೆ ಸಂತ ಅಂತೋನಿ ಚಾರಿಟಿ ಸಂಸ್ಥೆಯ ವತಿಯಿಂದ ಫಲ ನೀಡುವ 10 ಗಿಡಗಳನ್ನು ನೆಡಲಾಯಿತು. ಸೈಮನ್ ಪಾಯ್ಸ್ ಬಜಾಲ್ ಮತ್ತು ತಂಡದಿಂದ ಬಲಿಪೂಜೆಯ ಗಾಯನವನ್ನು ಆಯೋಜಿಸಲಾಗಿತ್ತು.







