ಡಾ.ರಾಜ್‌ಕುಮಾರ್ ಜನ್ಮದಿನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಶುಭ ಹಾರೈಕೆ
ಬೆಂಗಳೂರು: ವರನಟ ರಾಜ್‌ಕುಮಾರ್ ಅವರ 94ನೇ ಜನ್ಮ ದಿನ ಆಚರಣೆಯನ್ನು ಅವರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ ರಾಜ್‌ಕುಮಾರ್ ಸ್ಮಾರಕದ ಬಳಿಗೆ ರಾಜ್ ಅವರ ಕುಟುಂಬದ ಸದಸ್ಯರು ಪ್ರತಿ ವರ್ಷದಂತೆ ಈ ವರ್ಷವೂ ಪೂಜೆ ಸಲ್ಲಿಸಲಿದ್ದಾರೆ.
ಗಣ್ಯರಿಂದ ಶುಭ ಹಾರೈಕೆ
'ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡದ ಅಸ್ಮಿತೆಯಾಗಿ, ತೆರೆಯ ಮೇಲೆ ಶ್ರೇಷ್ಠ ನಟನಾಗಿ, ತೆರೆಯ ಹಿಂದೆ ಶ್ರೇಷ್ಠ ಸಮಾಜ ಸೇವಕನಾಗಿ, ಡಾ||ರಾಜ್ ರವರು ಈ ನಾಡಿಗೆ ಸಲ್ಲಿಸಿದ ಸೇವೆ ಅಪಾರವಾದುದು' ಎಂದು ಮುಖ್ಯಮಂತ್ರಿ ಸಬವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಅಣ್ಣಾವ್ರ' ಕುರಿತ ಕುತೂಹಲಕಾರಿ 10 ಪ್ರಮುಖ ವಿಚಾರಗಳು
''ಡಾ.ರಾಜ್‌ಕುಮಾರ್ ಕನ್ನಡದ ಅಸ್ಮಿತೆಯಾಗಿ ಎಂದೆಂದಿಗೂ ಬೆಳಗುತ್ತಿರುವ ನಂದಾದೀಪ. ಭೌತಿಕವಾಗಿ ಇಲ್ಲದಿದ್ದರೂ ಕನ್ನಡ ನಾಡಿಗೆ ತಮ್ಮ ಕೊಡುಗೆಗೆಳ ಮೂಲಕ ಪ್ರೇರಣಾದಾಯಿಯಾಗಿರುವ ಕನ್ನಡಿಗರ ಕಣ್ಮಣಿ. ಅಣ್ಣಾವ್ರ ಹುಟ್ಟುಹಬ್ಬವು ಕರುನಾಡಿನ ಸಂಭ್ರಮದ ದಿನ. ಡಾ.ರಾಜ್‌ಕುಮಾರ್ ಜನ್ಮದಿನದಂದು ಶತಕೋಟಿ ನಮನಗಳು'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
''ಕನ್ನಡಿಗರ ಸಾಕ್ಷಿಪ್ರಜ್ಞೆ, ಕನ್ನಡಿಗರ ಹೆಮ್ಮೆ, ನಟನೆ ಜತೆಗೆ ತಮ್ಮ ಬದುಕಿನ ಮೂಲಕವೇ ಸಮಾಜಕ್ಕೆ ಚಿಕಿತ್ಸಕರಾಗಿದ್ದ ಜಗತ್ತಿನ ಏಕೈಕ ಸುಧಾರಣಾವಾದಿ ನಟರಾಗಿದ್ದ ವರನಟ ಡಾ.ರಾಜ್ ಕುಮಾರ್ ಅವರ ಜಯಂತಿ ದಿನದಂದು ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅಣ್ಣಾವ್ರ ಬದುಕು ನಮಗೆ ದಾರಿದೀಪ. ಅವರನ್ನು ಸ್ಮರಿಸಿ ನಮಿಸೋಣ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
''ಕನ್ನಡ ನಾಡು, ನುಡಿ, ಕಲಾವಂತಿಕೆಗಳ ಸಾಧಕ ಪ್ರತೀಕ, ವರನಟ, ಪದ್ಮಭೂಷಣ, ಕರ್ನಾಟಕ ರತ್ನ, ದಿವಂಗತ ಡಾII ರಾಜ್ ಕುಮಾರ್ ಜನ್ಮದಿನದಂದು ಆ ಕಲಾತಪಸ್ವಿ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು''
- ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು.
— Basavaraj S Bommai (@BSBommai) April 24, 2023
ಕನ್ನಡದ ಅಸ್ಮಿತೆಯಾಗಿ, ತೆರೆಯ ಮೇಲೆ ಶ್ರೇಷ್ಠ ನಟನಾಗಿ, ತೆರೆಯ ಹಿಂದೆ ಶ್ರೇಷ್ಠ ಸಮಾಜ ಸೇವಕನಾಗಿ, ಡಾ||ರಾಜ್ ರವರು ಈ ನಾಡಿಗೆ ಸಲ್ಲಿಸಿದ ಸೇವೆ ಅಪಾರವಾದುದು. pic.twitter.com/szRreITp15
ಕನ್ನಡಿಗರ ಸಾಕ್ಷಿಪ್ರಜ್ಞೆ, ಕನ್ನಡಿಗರ ಹೆಮ್ಮೆ, ನಟನೆ ಜತೆಗೆ ತಮ್ಮ ಬದುಕಿನ ಮೂಲಕವೇ ಸಮಾಜಕ್ಕೆ ಚಿಕಿತ್ಸಕರಾಗಿದ್ದ ಜಗತ್ತಿನ ಏಕೈಕ ಸುಧಾರಣಾವಾದಿ ನಟರಾಗಿದ್ದ ವರನಟ ಡಾ.ರಾಜ್ ಕುಮಾರ್ ಅವರ ಜಯಂತಿ ದಿನದಂದು ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 24, 2023
ಅಣ್ಣಾವ್ರ ಬದುಕು ನಮಗೆ ದಾರಿದೀಪ. ಅವರನ್ನು ಸ್ಮರಿಸಿ ನಮಿಸೋಣ.#ಅಣ್ಣಾವ್ರು pic.twitter.com/JEssNtOLfH

ಡಾ.ರಾಜ್‌ಕುಮಾರ್ ಕನ್ನಡದ ಅಸ್ಮಿತೆಯಾಗಿ ಎಂದೆಂದಿಗೂ ಬೆಳಗುತ್ತಿರುವ ನಂದಾದೀಪ. ಭೌತಿಕವಾಗಿ ಇಲ್ಲದಿದ್ದರೂ ಕನ್ನಡ ನಾಡಿಗೆ ತಮ್ಮ ಕೊಡುಗೆಗೆಳ ಮೂಲಕ ಪ್ರೇರಣಾದಾಯಿಯಾಗಿರುವ ಕನ್ನಡಿಗರ ಕಣ್ಮಣಿ. ಅಣ್ಣಾವ್ರ ಹುಟ್ಟುಹಬ್ಬವು ಕರುನಾಡಿನ ಸಂಭ್ರಮದ ದಿನ. ಡಾ.ರಾಜ್‌ಕುಮಾರ್ ಜನ್ಮದಿನದಂದು ಶತಕೋಟಿ ನಮನಗಳು. pic.twitter.com/ER14UYCg1l
— DK Shivakumar (@DKShivakumar) April 24, 2023