ಐಪಿಎಲ್: ಹೈದರಾಬಾದ್ ವಿರುದ್ಧ ಡೆಲ್ಲಿಗೆ 7 ರನ್ ಜಯ

ಹೈದರಾಬಾದ್, ಎ.24: ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನ 34ನೇ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ರನ್ ಅಂತರದಿಂದ ಮಣಿಸಿತು. ತಾನಾಡಿದ 7ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 145 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಹೈದರಾಬಾದ್ ಪರ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್(49 ರನ್, 39 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಹೆನ್ರಿಚ್ ಕ್ಲಾಸನ್(31 ರನ್), ಸುಂದರ್(ಔಟಾಗದೆ 24 ರನ್ )ಎರಡಂಕೆಯ ಸ್ಕೋರ್ ಗಳಿಸಿದರು.
ಡೆಲ್ಲಿ ಪರ ಅಕ್ಷರ್ ಪಟೇಲ್(2-21) ಹಾಗೂ ಅನ್ರಿಚ್ ನೋರ್ಟ್ಜೆ(2-33)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಹಿರಿಯ ವೇಗಿ ಭುವನೇಶ್ವರ ಕುಮಾರ್ ಹಾಗೂ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿದರೂ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು.
Next Story





