ಸುಳ್ಯ: ಕೊಲ್ಲಮೊಗ್ರದ ಯುವಕ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದ ಮೃತ್ಯು

ಸುಳ್ಯ, ಎ.25: ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಕೊಲ್ಲಮೊಗ್ರ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿರುವುದು ವರದಿಯಾಗಿದೆ.
ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷಿ ದಂಪತಿಯ ಪುತ್ರ ಯತೀಶ್ ಬಾಳೆಬೈಲು(30) ಮೃತಪಟ್ಟವರು.
ಸೋಮವಾರ ಬೆಳಗ್ಗೆ ಯತೀಶ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯತೀಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಅವಿವಾಹಿತರಾಗಿರುವ ಯತೀಶ್ ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು. ಮೃತರು ತಂದೆ ತಾಯಿ, ಸಹೋದರ, ಸಹೋದರಿ, ಬಂಧುಮಿತ್ರರನ್ನು ಅಗಲಿದ್ದಾರೆ.
Next Story