Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದ...

ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದ 'ಓವರ್‌ಸೀಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ' ಸ್ಥಾಪಕ ಬಲೇಶ್‌ ಧನ್ಕರ್‌ ದೋಷಿ

25 April 2023 11:05 AM IST
share
ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದ ಓವರ್‌ಸೀಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ ಸ್ಥಾಪಕ ಬಲೇಶ್‌ ಧನ್ಕರ್‌ ದೋಷಿ

ಮೆಲ್ಬೋರ್ನ್‌: ನಕಲಿ ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸಿ ತಾನು ಭೇಟಿಯಾದ ಐದು ಮಂದಿ ಕೊರಿಯನ್‌ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಅವರ ಮೇಲೆ ಅತ್ಯಾಚಾರಗೈದ  ಪ್ರಕರಣದಲ್ಲಿ ಓವರ್‌ಸೀಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ ಇದರ ಆಸ್ಟ್ರೇಲಿಯಾ ವಿಭಾಗದ ಸ್ಥಾಪಕರಲ್ಲೊಬ್ಬನಾದ ಬಲೇಶ್‌ ಧನ್ಕರ್‌ ಎಂಬಾತನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ.

ಆತನ ವಿರುದ್ಧದ 39 ಆರೋಪಗಳಲ್ಲೂ ಆತನನ್ನು ಸಿಡ್ನಿಯ ಡೌನಿಂಗ್‌ ಸೆಂಟರ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ದೋಷಿ ಎಂದು ಸೋಮವಾರ ಘೋಷಿಸುತ್ತಿದ್ದಂತೆಯೇ ಅಲ್ಲಿ ಹಾಜರಿದ್ದ ಧನ್ಕರ್‌ ಕಣ್ಣೀರು ಸುರಿಸಿದ್ದ ಎಂದು ವರದಿಯಾಗಿದೆ.

ಆತನ ವಿರುದ್ಧ ಒಟ್ಟು 13 ಅತ್ಯಾಚಾರ ಪ್ರಕರಣಗಳು, ಅತ್ಯಾಚಾರಗೈಯ್ಯಲು ಸಹಕಾರಿಯಾಗಲು ಅಮಲು ಪದಾರ್ಥ ನೀಡಿದ ಆರು ಪ್ರಕರಣಗಳು, ಅನುಮತಿಯಿಲ್ಲದೆ ಅಶ್ಲೀಲ ವೀಡಿಯೋಗಳನ್ನು ಸೆರೆಹಿಡಿದ 17 ಪ್ರಕರಣಗಳು ಇದ್ದವು.

ಜನವರಿ ಹಾಗೂ ಅಕ್ಟೋಬರ್‌ 2018 ರ ನಡುವಿನ ಈ ಅಪರಾಧಗಳಲ್ಲಿ ತನ್ನನ್ನು ರಕ್ಷಿಸಲು ಕಳೆದ ನಾಲ್ಕು ವರ್ಷಗಳಲ್ಲಿ ಧನ್ಕರ್‌ ಇನ್ನಿಲ್ಲದ ಕಸರತ್ತು ನಡೆಸಿದ್ದ ಎಂದು ವರದಿಯಾಗಿದೆ.

ಅಕ್ಟೋಬರ್‌ 2018 ರಲ್ಲಿ ಆತನ ನಿವಾಸಕ್ಕೆ ಪೊಲೀಸರು ದಾಳಿ ನಡೆಸಿದಾಗ ಹಲವಾರು ಅಶ್ಲೀಲ ವೀಡಿಯೋಗಳು ಅಲ್ಲಿ ದೊರಕಿದ್ದವಲ್ಲದೆ ಅವುಗಳಲ್ಲಿ ಹೆಚ್ಚಿನ ಸಂತ್ರಸ್ತೆಯರು ಪ್ರಜ್ಞಾಹೀನರಾಗಿದ್ದರೆಂಬುದನ್ನು ಪೊಲೀಸರು ಕಂಡುಕೊಂಡಿದ್ದರು., ಈ ವೀಡಿಯೋಗಳನ್ನು ಆತ ವಿವಿಧ ಫೋಲ್ಡರ್‌ಗಳಲ್ಲಿರಿಸಿದ್ದ ಹಾಗೂ ಅವುಗಳಿಗೆ ಕೊರಿಯನ್‌ ಮಹಿಳೆಯ ಹೆಸರು ನೀಡಿದ್ದ.

ಕೊರಿಯನ್‌ ಇಂಗ್ಲಿಷ್‌ ಮಾತನಾಡುವವರು ಬೇಕಿದ್ದಾರೆ ಎಂದು ಆತ ಜಾಹೀರಾತು ಪ್ರಕಟಿಸುತ್ತಿದ್ದ ಹಾಗೂ ಅದನ್ನು ನಂಬಿ ಆತನನ್ನು ಭೇಟಿಯಾಗಲು ಬರುವವರನ್ನು ಆತನ ನಿವಾಸದ ಸಮೀಪವಿದ್ದ ಸಿಡ್ನಿಯ ಹಿಲ್ಟನ್‌ ಹೋಟೆಲ್‌ ಬಾರ್‌ಗೆ ಕರೆದೊಯ್ದು ಅಲ್ಲಿ ವೈನ್‌ ಅಥವಾ ಐಸ್‌ ಕ್ರೀಂಗೆ ಅಮಲು ಪದಾರ್ಥ ಬೆರೆಸಿ ಕೊಡುತ್ತಿದ್ದ. ಆತನ ಮಂಚದ ಪಕ್ಕದಲ್ಲಿದ್ದ ಅಲಾರ್ಮ್‌ ಕ್ಲಾಕ್‌ನಲ್ಲಿ ಹಾಗೂ ಆತನ ಕೈಗಡಿಯಾರದಲ್ಲಿ ರಹಸ್ಯ ಕ್ಯಾಮೆರಾ ಇತ್ತು ಎಂದು ವರದಿಯಾಗಿದೆ.

ಈತನ ಸಂಘಟನೆ ಓವರ್‌ಸೀಸ್‌ ಫ್ರೆಂಡ್ಸ್‌ ಆಫ್‌ ಬಿಜೆಪಿ, ಆಸ್ಟ್ರೇಲಿಯಾ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭೇಟಿ ವೇಳೆಗಿನ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

share
Next Story
X