ಮಂಡ್ಯ: ನಾಲೆಯಲ್ಲಿ ಮುಳುಗಿ ಐವರು ಮೃತ್ಯು

ಮಂಡ್ಯ: ನಾಲೆಯಲ್ಲಿ ಈಜಲು ಹೋಗಿದ್ದ ಐವರು ಮೃತಪಟ್ಟ ಘಟನೆ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ಮಂಗಳವಾರ ವರದಿಯಾಗಿದೆ.
ಮೃತರನ್ನು ಬೆಂಗಳೂರು ಮೂಲದ ಅನಿಷಾ ಬೇಗಂ (34) ಮಗಳು ಮೆಹತಾಬ್ (10) ತಸ್ಮಿಯಾ (22) ಅಶ್ರಕ್ (28) ಅತೀಕ್ (22) ಎಂದು ಗುರುತಿಸಲಾಗಿದೆ.
ಮೃತರು ಹಲ್ಲಗೆರೆ ಗ್ರಾಮದ ಅಜ್ಜಿ ಮನೆಗೆ ಬಂದಿದ್ದರೆನ್ನಲಾಗಿದ್ದು, ವಿಸಿ ನಾಲೆಯಲ್ಲಿ ಈಜಲು ತೆರಳಿದ್ದರು. 10 ವರ್ಷದ ಮಗು ಮೆಹತಾಬ್ ನಾಲೆ ಬಳಿ ಆಟವಾಡುತ್ತಿದ್ದಾಗ ನೀರಿನ ಸುಳಿಗೆ ಸಿಲುಕಿ ಮುಳುಗಿದೆ. ಮಗುವನ್ನು ರಕ್ಷಿಸಲು ತೆರಳಿದ ಇತರರೂ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಬಂದ ಬಸರಾಳು ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮೂರು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





