ಜೆಪ್ಪಿನಮೊಗರು: ಜೆ.ಆರ್.ಲೋಬೊ ಚುನಾವಣಾ ಪ್ರಚಾರ

ಮಂಗಳೂರು: ನಗರದ ಜೆಪ್ಪಿನಮೊಗರು ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆ.ಆರ್.ಲೋಬೊ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದರು.
ಜೆಪ್ಪಿನಮೊಗರುವಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿದಿ ದೇವಸ್ಥಾನ, ಕರ್ಮಿಸ್ಥಾನ ವೈದ್ಯನಾಥ ದೈವಸ್ಥಾನ, ಕೋದರ್ಭ್ದು ದೈವಸ್ಥಾನ, ಜಪ್ಪು ಗುಡ್ಡೆಗುತ್ತು ನಾಗ ಸನ್ನಿದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಮಾಜಿ ಎಂಎಲ್‌ಸಿ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಬ್ಲಾಕ್ ಅಧ್ಯಕ್ಷ ಸಲಿಂ, ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ, ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ವಾರ್ಡ್ ಅಧ್ಯಕ್ಷ ಸುಧಾಕರ್, ಕರುಣಾಕರ ಶೆಟ್ಟಿ ತರ್ದೋಲ್ಯ, ಸುನಿಲ್ ಕುಮಾರ್ ಪೂಜಾರಿ, ಓಸ್ವಲ್ಡ್ ಫುರ್ತಾದೋ, ಸುಧೀರ್ ಕಡೇಕಾರ್, ಹಾರ್ಬರ್ಟ್ ಡಿಸೋಜ, ದುರ್ಗಾ ಪ್ರಸಾದ, ನವೀನ್ ಸ್ಟೀವನ್, ಹೈದರ್ ಆಲಿ, ಶೈಲೇಶ್ ಭಂಡಾರಿ, ಹರೀಶ್ ಶೆಟ್ಟಿ, ಶಾಂತಿ, ಕವಿತಾ ಶೆಟ್ಟಿ, ದಿನೇಶ್ ಕುಲಾಲ್ ಉಪಸ್ಥಿತರಿದ್ದರು.
Next Story