ಪುತ್ತೂರು ಬಿಜೆಪಿ ಪರಿಸ್ಥಿತಿ ನೆಟ್ವರ್ಕ್ ಇಲ್ಲದ ಸಿಮ್‍ನಂತಾಗಿದೆ: ಅಶೋಕ್ ಕುಮಾರ್
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು : ಪುತ್ತೂರಿನಲ್ಲಿ ಬಿಜೆಪಿ ಚಿದ್ರವಾಗಿದ್ದು, ಅವರಿಗೆ ಸುಳ್ಯದಿಂದ ಅಭ್ಯರ್ಥಿಯನ್ನು ಹುಡುಕಿ ತರುವ ಪರಿಸ್ಥಿತಿ ಎದುರಾಗಿದೆ. ಇದೀಗ ಬಿಜೆಪಿ ನೆಟ್ವರ್ಕ್ ಇಲ್ಲದ ಸಿಮ್‍ನಂತಾಗಿದ್ದು ಎಲ್ಲಡೆ ಜನತೆಯ ಒಲವು ಕಾಂಗ್ರೆಸ್ ಕಡೆಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಮುಕ್ವೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
94ಸಿ ಹಕ್ಕು ಪತ್ರ ಪಡೆಯಲು ಮಹಿಳೆಯೊಬ್ಬರು ತನ್ನೆರಡು ದನಗಳನ್ನೇ ಮಾರಿದ್ದರು. ಇಷ್ಟು ಹಣ ಸಾಲದೆ ರೂ.2 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಇಷ್ಟೊಂದು ಹಣ ಇಲ್ಲ ಎಂದಾಗ ಬಡ್ಡಿಗೆ ಹಣ ಪಡೆದುಕೊಳ್ಳುವಂತೆ, ಹಕ್ಕುಪತ್ರ ಸಿಕ್ಕಿದ ಬಳಿಕ ಜಾಗವನ್ನು ಅಡವಿಡುವಂತೆ ಸಲಹೆ ನೀಡಿದ್ದರಂತೆ. ಕೊನೆಗೆ ಮಹಿಳೆಗೆ ದನವೂ ಇಲ್ಲ, ಹಣವೂ ಇಲ್ಲ, ಜಾಗವೂ ಇಲ್ಲದ ಪರಿಸ್ಥಿತಿ ಎದುರಾಗಿ ಆ ಮಹಿಳೆ ಶಾಪ ಹಾಕಿಕೊಂಡು ತೆರಳಿದ್ದು, ಇಂತಹ ಬಡವರ ಶಾಪವೇ ಇಂದಿನ ಬಿಜೆಪಿ ಸ್ಥಿತಿಗೆ ಕಾರಣ ಎಂದು ಅವರು ಹೇಳಿದರು.
ನಾವು ರಸ್ತೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವವರು ಜಲ್ಲಿ ಸಿಮೆಂಟ್ ಹಾಕಿ ಶೇ 40 ಪೆರ್ಸೆಂಟ್ ಪಡೆದುಕೊಂಡು ಭ್ರಷ್ಟಾಚಾರ ಮಾಡಿದ್ದಲ್ಲದೆ ಬೇರೇನು ಮಾಡಿಲ್ಲ, ಸರ್ಕಾರದ ಹಣ ಸಿಗುತ್ತದೆ ಎಂದು ಮನೆಯನ್ನು ಕೆಡವಿದ ಬಡವರ ಮನೆಗಳು ಪಂಚಾಂಗದ ಸ್ಥಿತಿಯಲ್ಲೇ ಉಳಿದಿದ್ದು, ಅದೋಷ್ಟೋ ಮಂದಿಗೆ ಶೀಟು ನೀಡುವ ಕೆಲಸ ತಾನು ಮಾಡಿದ್ದೇನೆ. ಆದರೆ ಸರ್ಕಾರ ಏನೂ ಮಾಡಿಲ್ಲ. ಕಳೆದ 5 ವರ್ಷದಲ್ಲ ಏನೂ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಯವರು ಈಗ ಜನರ ಬಳಿಗೆ ಹೇಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ ಅವರು ಮತದಾರರು ಬದಲಾವಣೆ ಬಯಸಿದ್ದಾರೆ. ಖಂಡಿತವಾಗಿಯೂ ಪುತ್ತೂರಿನಲ್ಲಿ ಕಾಂಗ್ರೆಸ್ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು ಪ್ರತೀ ಬೂತ್‍ಬೂತ್‍ಗಳಲ್ಲಿನ ಎಲ್ಲಾ ಮನೆಗಳಿಗೆ ಹೋಗಬೇಕು. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಲ್ಲಿನ ಯೋಜನೆಗಳನ್ನು ಮತ್ತು ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಯೋಜನೆಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು ಎಂದ ಅವರು ಈ ನಿಟ್ಟಿನಲ್ಲಿ ಯುವಕರು ಈಗಾಗಲೇ ಕಾಯೋನ್ಮಖರಾಗಿದ್ದಾರೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಜನತಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ನೀಡಿ ಜನರೊಂದಿಗೆ ಬೆರೆತ ಸರ್ಕಾರ ಕಾಂಗ್ರೆಸ್. ಭೂಮಿಯ ಒಡೆತನ, ಮೂಲಭೂತ ಸೌಕರ್ಯ, ಬಡವರಿಗೆ ಉಚಿತ ಅಕ್ಕಿ ಸೇರಿದಂತೆ ನಾನಾ ಸೌಲಭ್ಯಗಳನ್ನು ನೀಡಿದ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಜನತೆ ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿದರು.
ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯಾಧ್ಯಕ್ಷ ಜುನೈದ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಪಕ್ಷದ ಮುಖಂಡರಾದ ಲ್ಯಾನ್ಸಿ ಮಸ್ಕರೇನ್ಹಸ್, ಅನ್ವರ್ ಖಾಸಿಂ ಮತ್ತಿತರರು ಉಪಸ್ಥಿತರಿದ್ದರು.