ದ್ವಿತೀಯ ಪಿಯುಸಿ ಪರೀಕ್ಷೆ: ಅವಳಿ ವಿದ್ಯಾರ್ಥಿಗಳ ಸಾಧನೆ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ನಿಟ್ಟೂರಿನಲ್ಲಿರುವ ಮಹೇಶ್ ಸಿಲಾಸ್ ಪ.ಪೂ.ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ತನ್ಮಯ್ ಶೇ.97.50 ಹಾಗೂ ಚಿನ್ಮಯ್ ಶೇ.96 ಅಂಕ ಗಳಿಸಿದ್ದಾರೆ.
ತನ್ಮಯ್ ಕನ್ನಡದಲ್ಲಿ 99, ಇಂಗ್ಲೀಷ್: 87, ಭೌತಶಾಸ್ತ್ರ: 100, ರಸಾಯನ ಶಾಸ್ತ್ರ: 99, ಗಣಿತ:100, ಕಂಪ್ಯೂಟರ್ ವಿಜ್ಞಾನ: 100 ಸಹಿತ ಒಟ್ಟು 585 ಅಂಕ ಪಡೆದರೆ, ಚಿನ್ಮಯ್ ಕನ್ನಡ: 98, ಇಂಗ್ಲೀಷ್: 90, ಭೌತಶಾಸ್ತ್ರ: 98, ರಸಾಯನಶಾಸ್ತ್ರ: 90, ಗಣಿತ: 100, ಕಂಪ್ಯೂಟರ್ ವಿಜ್ಞಾನ: 100ಅಂಕ ಸಹಿತ ಒಟ್ಟು 576 ಗಳಿಸಿದ್ದಾರೆ. ಈ ಅವಳಿ ಮಕ್ಕಳಿಬ್ಬರೂ ಉಡುಪಿಯ ಹಿರಿಯ ಪತ್ರಕರ್ತರಾದ ಸುಜಿ ಕುರ್ಯ ಮತ್ತು ಗೀತಾ ಕುಮಾರಿ ದಂಪತಿ ಪುತ್ರರು.
Next Story





