ಗಂಗೊಳ್ಳಿ: ನದಿಯಲ್ಲಿ ಮುಳುಗಿ ಮೀನು ಹಿಡಿಯುತ್ತಿದ್ದ ವ್ಯಕ್ತಿ ಮೃತ್ಯು

ಗಂಗೊಳ್ಳಿ: ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಸೌಪರ್ಣಿಕ ಹೊಳೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೇನಾಪುರ ಗ್ರಾಮದ ಗುಡ್ಡಮ್ಮಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಗುಡ್ಡಮ್ಮಾಡಿ ನಿವಾಸಿ ಆಲ್ಬನ್ (49) ಎಂದು ಗುರುತಿಸಲಾಗಿದೆ.
ಎ.23ರಂದು ಬೆಳಗ್ಗೆ ಮನೆ ಸಮೀಪದ ಸೌಪರ್ಣಿಕ ಹೋಳೆಗೆ ಮೀನು ಹಿಡಿಯಲು ಹೋದ ಇವರು ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಎ.24ರಂದು ಅಪರಾಹ್ನ ಗುಡ್ಡಮ್ಮಾಡಿ ಬಳಿ ಸೌರ್ಪಣಿಕ ನದಿಯಲ್ಲಿ ಇವರ ಮೃತದೇಹವು ಪತ್ತೆಯಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story