Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಆನ್‌ಲೈನ್ ವಂಚನೆ ಆರೋಪ; 6...

ಮಂಗಳೂರು: ಆನ್‌ಲೈನ್ ವಂಚನೆ ಆರೋಪ; 6 ಪ್ರಕರಣಗಳ ಬಗ್ಗೆ ದೂರು ದಾಖಲು

25 April 2023 9:42 PM IST
share
ಮಂಗಳೂರು: ಆನ್‌ಲೈನ್ ವಂಚನೆ ಆರೋಪ; 6 ಪ್ರಕರಣಗಳ ಬಗ್ಗೆ ದೂರು ದಾಖಲು

ಮಂಗಳೂರು, ಎ.25: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉದ್ಯೋಗ, ಉಡುಗೊರೆ ಮತ್ತಿತರ ಆನ್‌ಲೈನ್ ವ್ಯವಹಾರ ನಡೆಸಿದ ಒಟ್ಟು 6 ಪ್ರಕರಣದಲ್ಲಿ 1,26,50,234 ರೂ. ವಂಚನೆಗೈದಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಫೆ.7ರಂದು ಅಪರಿಚಿತ ವ್ಯಕ್ತಿಯು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಉಡುಗೊರೆ ಕಳುಹಿಸುವುದಾಗಿ ತಿಳಿಸಿ ದೂರುದಾರರ ಹೆಸರು ವಿಳಾಸ ಪಡೆದುಕೊಂಡಿದ್ದ. ನಂತರ ಉಡುಗೊರೆ ಕಳುಹಿಸಲಾಗಿದೆ. ಅದಕ್ಕಾಗಿ ಶುಲ್ಕ ಪಾವತಿಸಬೇಕೆಂದು ತಿಳಿಸಿದ್ದ.  ಹಾಗೇ ಬ್ಯಾಂಕ್ ಯುಪಿಐ ಕೋಡ್ ಮೂಲಕ ಹಂತಹಂತವಾಗಿ  82,746ರೂ. ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ.

*ಫೆ.10ರಂದು ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ಪಾರ್ಟ್ ಟೈಂ ಜಾಬ್ ಇರುವುದಾಗಿ ದೂರುದಾರರಿಗೆ ಸಂದೇಶ ಬಂದಿದ್ದು, ಬಳಿಕ ವಾಟ್ಸ್‌ಆ್ಯಪ್‌ನಲ್ಲಿ  ಲಿಂಕ್‌ವೊಂದನ್ನು ಕಳುಹಿಸಲಾಗಿತ್ತು. ಬಳಿಕ ಆರೋಪಿಯು ನಾನಾ ಟಾಸ್ಕ್‌ಗಳನ್ನು ನೀಡಿ ದೂರುದಾರರ ನಾನಾ ಖಾತೆಗಳಿಂದ 14,67,194 ರೂ. ವರ್ಗಾಯಿಸಿಕೊಳ್ಳಲಾಗಿದೆ.

*ಮಾ.3ರಂದು ದೂರುದಾರರ ವಾಟ್ಸ್‌ಆ್ಯಪ್ ನಂಬರ್‌ಗೆ ಜಾಬ್ ಆಫರ್ ಸಂದೇಶ ಬಂದಿದ್ದು, ಟೆಲಿಗ್ರಾಂ ಪ್ರೊಫೈಲ್‌ನಲ್ಲಿ ಚಾಟನ್ನು ಮುಂದುವರಿಸಲಾಗಿತ್ತು. ಹಾಗೇ ದೂರುದಾರ ಖಾತೆಯಿಂದ ಹಂತಹಂತವಾಗಿ 28,21,100 ರೂ. ವರ್ಗಾಯಿಸಿಕೊಳ್ಳಲಾಗಿದೆ.

*ಮಾ.14ರಂದು ದೂರುದಾರರ ಮೊಬೈಲ್‌ಗೆ ಪಾರ್ಟ್ ಟೈಂ ಜಾಬ್ ನೆಪದಲ್ಲಿ ಸಂದೇಶವೊಂದು ಬಂದಿದ್ದು, ಬಳಿಕ ಟೆಲಿಗ್ರಾಂ ಮೂಲಕ ಕೆಲಸದ ಬಗ್ಗೆ ದೂರುದಾರರಲ್ಲಿ ಚಾಟ್ ಮಾಡಲಾಗಿದೆ. ಹಾಗೇ ಟಾಸ್ಕ್ ನೆಪದಲ್ಲಿ ದೂರುದಾರರು ಹಾಗೂ ಅವರ ಸಂಬಂಧಿಕ ನಾನಾ ಬ್ಯಾಂಕ್ ಖಾತೆಯಿಂದ 76,31,084 ರೂ.ವನ್ನು ವರ್ಗಾಯಿಸಿಕೊಳ್ಳಲಾಗಿದೆ.

*ಎ.11ರಂದು ದೂರುದಾರರ ವಾಟ್ಸ್‌ಆ್ಯಪ್ ಖಾತೆಗೆ ಅಪರಿಚಿತ ವ್ಯಕ್ತಿ ಮೊಬೈಲ್ ಸಂದೇಶ ಹಾಕಿ ಬಳಿಕ ಲಿಂಕ್ ಕಳುಹಿಸಿದ್ದಾನೆ. ಈ ಸಂದೇಶವು ಗೂಗಲ್‌ಗೆ ಲಿಂಕ್ ಆಗಿದ್ದು, ಸದ್ರಿ ಅಪರಿಚಿತ ವ್ಯಕ್ತಿಯು ದೂರುದಾರರ ಮಗಳಿಗೆ  ಟೆಲಿಗ್ರಾಂ ಆ್ಯಪ್‌ನ್ನು ಡೌನ್‌ಲೋಡ್ ಮಾಡಲು ತಿಳಿಸಿದ್ದಾನೆ. ಅದರಂತೆ ಟೆಲಿಗ್ರಾಂ ಆ್ಯಪನ್ನು ಡೌನ್‌ಲೋಡ್ ಮಾಡಿದ ಬಳಿಕ ಟಾಸ್ಕ್ ನೆಪದಲ್ಲಿ ಹಂತ ಹಂತವಾಗಿ 4,23,000 ರೂ.ವನ್ನು ವರ್ಗಾಯಿಸಿಕೊಳ್ಳಲಾಗಿದೆ.

*ಎ.17ರಂದು ದೂರುದಾರರ ವಾಸದ ಮನೆಗೆ ಸ್ಕ್ರಾಚ್ ಕಾರ್ಡೊಂದು ಅಂಚೆ ಮೂಲಕ ಬಂದಿದ್ದು. ಪಿರ್ಯಾದಿದಾರರು ಅದನ್ನು ತೆರೆದು ನೋಡಿ ಅದರಲ್ಲಿ ನಮೂದಾಗಿದ್ದ ವಾಟ್ಸ್‌ಆಪ್‌ಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ನೀವು ಮೀಶೊ ವತಿಯಿಂದ ಕಾರ್ ಗೆದ್ದಿದ್ದೀರಿ. ಅದರ ಕಾರ್ಡನ್ನು ಸ್ಕ್ರಾಚ್ ಮಾಡಿ ಕೋಡನ್ನು ಹೇಳುವಂತೆ ಸೂಚಿಸಿದ. ಅದರಂತೆ ದೂರುದಾರರು ಆ ಕೋಡನ್ನು ಆತನಿಗೆ  ನೀಡಿದ್ದು, ಬಳಿಕ ಚಾಟ್ ಮುಂದುವರಿಸಲಾಗಿದೆ. ಬಳಿಕ ನಾನಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2,25,200 ರೂ. ವರ್ಗಾಯಿಸಿಕೊಳ್ಳಲಾಗಿದೆ.

share
Next Story
X