ಮೈಸೂರು: ಮೈಲಾರಿ ಹೋಟೆಲ್ ನಲ್ಲಿ ದೋಸೆ ತಯಾರಿಸಿ ರುಚಿ ಸವಿದ ಪ್ರಿಯಾಂಕಾ ಗಾಂಧಿ

ಮೈಸೂರು: ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಸಾಲೆ ದೋಸೆ, ಇಡ್ಲಿ ಸವಿದು ಖುಷಿಪಟ್ಟರು.
ಮೈಸೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಪ್ರಿಯಾಂಕಾ ಗಾಂಧಿ ಬುಧವಾರ ಶೃಂಗೇರಿ ಶಾರಾದಂಭೆ ದೇವಸ್ಥಾನಕ್ಕೆ ತೆರಳುವ ಮೈಸೂರಿನ ಅಗ್ರಹಾರದ ಬಳಿ ಇರುವ ಮೈಲಾರಿ ಅಗ್ರಹಾರ ಹೋಟೆಲ್ ಗೆ ಆಗಮಿಸಿ ಮಸಾಲೆ ದೋಸೆ, ಇಡ್ಲಿ ಸವಿದು ಸಂತಸಪಟ್ಟರು.
ಇದರ ರುಚಿಯಿಂದ ಖುಷಿಪಟ್ಟ ಅವರು ಸ್ವತಃ ತಾವೆ ದೋಸೆ ಹಾಕಿ ಯಾವ ರೀತಿ ಬೇಯಿಸಬೇಕು ಎಂದು ಹೋಟೆಲ್ ಸಿಬ್ಬಂದಿಯಿಂದ ತಿಳಿದುಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, 'ದೋಸೆ ತುಂಬಾ ಚೆನ್ನಾಗಿದೆ, ಹೇಗೆ ಮಾಡಬೇಕು ಎಂದು ತಿಳಿದುಕೊಂಡಿದ್ದೇನೆ. ನಾನು ಮನೆಯಲ್ಲಿ ಟ್ರೈ ಮಾಡುತ್ತೇನೆ' ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿಯವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಹಾಗೂ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್, ಐಶ್ವರ್ಯ ಮಂಚನಳ್ಳಿ ಮಹದೇವು ಅವರು ಕೂಡ ದೋಸೆ ತಿಂದರು.
ಮೈಲಾರಿ ಹೋಟೆಲ್ ನಲ್ಲಿ ದೋಸೆ ತಿನ್ನಲು ಪ್ರಿಯಾಂಕಾ ಗಾಂಧಿ ಆಗಮಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಪ್ರಿಯಾಂಕಾ ಗಾಂಧಿ ಅವರನ್ನು ನೋಡಲು ಹೋಟೆಲ್ ನತ್ತ ಧಾವಿಸಿ ಬಂದರು. ಅವರು ಹೊರ ಬರುತ್ತಿದ್ದಂತೆ ಅವರನ್ನು ನೋಡಲು ಸಾರ್ವಜನಿಕರು ಮುಗಿ ಬಿದ್ದರು.
I remember @RahulGandhi saying his sister is the second best cook (mothers are by default the first )@priyankagandhi makes crispy masala dosa while on a campaign trail for #KarnatakaAssemblyElection2023 pic.twitter.com/JdBmfcrbnQ
— Dr Pooja Tripathi (@Pooja_Tripathii) April 26, 2023
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @priyankagandhi ಅವರು ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ನಲ್ಲಿ ದೋಸೆ ಸವಿದು ಮಕ್ಕಳ ಜೊತೆ ಒಡನಾಡಿದರು.
— Karnataka Congress (@INCKarnataka) April 26, 2023
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala, ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಜೊತೆಗಿದ್ದರು. pic.twitter.com/UzszTD6aku









