Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘SVEEP’ ಮತ್ತು ಅದರ ‘ಸ್ಟೇಕ್’ಗಳು

‘SVEEP’ ಮತ್ತು ಅದರ ‘ಸ್ಟೇಕ್’ಗಳು

ಗಾದಿ May

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು26 April 2023 12:04 PM IST
share
‘SVEEP’ ಮತ್ತು ಅದರ ‘ಸ್ಟೇಕ್’ಗಳು
ಗಾದಿ May

ಭಾರತ ಜನಸಂಖ್ಯೆಯಲ್ಲೇನೋ ಚೀನಾವನ್ನೂ ಹಿಂದಿಕ್ಕಿ ಮೊದಲ ಸ್ಥಾನ ಪಡೆದು ನಿಂತುಕೊಂಡಿದೆ. ಆದರೆ, ಒಂದು ಪ್ರಜಾಸತ್ತೆಯಾಗಿ ಈ 140 ಕೋಟಿ ಜನರಲ್ಲಿ ಮತದಾನದ ಪ್ರಾಯ ತಲುಪಿರುವ ಒಟ್ಟು ಜನಸಂಖ್ಯೆಗೂ, ಮತದಾನಕ್ಕೆ ನೋಂದಾಯಿಸಿಕೊಂಡಿರುವವರ ಸಂಖ್ಯೆಗೂ ಮತ್ತು ಕೊನೆಯಲ್ಲಿ, ಚುನಾವಣೆಗಳ ದಿನದಂದು ಮತದಾನ ಮಾಡುವವರ ಸಂಖ್ಯೆಗೂ ನಡುವೆ ದೊಡ್ಡ ಅಂತರವಿದೆ.

ಭಾರತದಲ್ಲಿ ಮತದಾನದ ಸರಾಸರಿ ಸತತವಾಗಿ ಶೇ. 50-60 ನಡುವೆ ಅಟಕಾಯಿಸಿಕೊಂಡಿದ್ದ ಹಿನ್ನೆಲೆಯಲ್ಲಿ, 2009ರಲ್ಲಿ ಭಾರತ ಚುನಾವಣಾ ಆಯೋಗವು SVEEP (ವ್ಯವಸ್ಥಿತವಾದ ಮತದಾರ ಶಿಕ್ಷಣ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ) ಕಾರ್ಯಕ್ರಮವನ್ನು ಜಾರ್ಖಂಡ್ ಚುನಾವಣೆಯ ವೇಳೆ ಪ್ರಾಯೋಗಿಕವಾಗಿ ಆರಂಭಿಸಿತ್ತು. ಅಲ್ಲಿಂದ ಮುಂದೆ ಅದನ್ನು ದೇಶವ್ಯಾಪಿ ಕಾರ್ಯಕ್ರಮವಾಗಿ ಕಾರ್ಯರೂಪಕ್ಕೆ ತರಲಾಯಿತು. ಇಲ್ಲಿಯ ತನಕ 2009-2013, 2013-2014, 2015-2021, 2021-2025 ಹೀಗೆ ನಾಲ್ಕು ಹಂತಗಳಲ್ಲಿ ನಡೆದಿರುವ ಈ ಮತದಾನ ಪ್ರೇರಕ ಕಾರ್ಯಕ್ರಮಕ್ಕೆ ಪ್ರತೀ ವರ್ಷ ಚುನಾವಣಾ ಆಯೋಗ ಸುಮಾರು 50-60 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ.

ಉದಾತ್ತ ಧ್ಯೇಯದೊಂದಿಗೆ ಆರಂಭಗೊಂಡಿದ್ದ ಈ SVEEP ಕಾರ್ಯಕ್ರಮ, ಇಂದು ಎರಡು ಕಾರಣಗಳಿಗಾಗಿ ಸ್ವಲ್ಪ ಮರುಪರಿಶೀಲಿಸಬೇಕಾದ ಖರ್ಚಿನ ದಾರಿ ಎಂದು ಅನ್ನಿಸುತ್ತಿದೆ. ಅವು ಏನೆಂದು ಸ್ವಲ್ಪವಿವರವಾಗಿ ನಡೋಣ.

ಮೊದಲನೆಯದಾಗಿ, SVEEP ಕಾರ್ಯಕ್ರಮದ ಕಾರಣದಿಂದಾಗಿಯೇ ಮತದಾನದಲ್ಲಿ ಹೆಚ್ಚಳ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮಗಳು ಈಗ ಬೂತ್ ಸಿಂಗಾರ, ಎಲ್ಲೋ ಕೆಲವು ಶಾಲೆ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ಗಳು, ಮೀಟಿಂಗುಗಳು-ಈಟಿಂಗುಗಳಿಗಿಂತ ಹೆಚ್ಚಿನ ಮುಂಗಾಣ್ಕೆಗಳನ್ನು ತೋರಿಸಿದಂತಿಲ್ಲ. ಅದು ತಳಮಟ್ಟದಲ್ಲಿ ತಲಪಿದ್ದಕ್ಕಿಂತ, ಮಾಮೂಲಿ ಸರಕಾರಿ ಕಾರ್ಯಕ್ರಮಗಳಂತೆ ಪತ್ರಿಕಾ ವರದಿಗಳಾಗಿ ರಾರಾಜಿಸಿದ್ದೇ ಹೆಚ್ಚು. ಅದಕ್ಕಾಗಿ ನಡೆಯುವ ಖರ್ಚುಗಳೂ ಪಾರದರ್ಶಕ, ಉತ್ತರದಾಯಿ ಆಗಿರುವಂತೆ ಕಾಣಿಸುತ್ತಿಲ್ಲ. ಈ ಕಾರ್ಯಕ್ರಮ ಒಟ್ಟಿನಲ್ಲಿ, ಹೆಚ್ಚೆಂದರೆ ಬಲವಂತದ ಮಾಘಸ್ನಾನವಾಗಿ ಕಾಣಿಸುತ್ತಿದೆ. ಕರ್ನಾಟಕದಲ್ಲಿಯೇ ವಿಧಾನಸಭಾ-ಲೋಕಸಭಾ ಚುನಾವಣೆಗಳ ಮತದಾನದ ಸರಾಸರಿ ಪ್ರಮಾಣಗಳು ಈ ಕೆಳಗಿನಂತಿವೆ. 2004 (ಶೇ. 65.17/65.14); 2008 (ಶೇ. 64.68); 2009 (ಶೇ. 58.8); 2013(ಶೇ. 71.45); 2014 (ಶೇ. 67.2); 2018 (ಶೇ. 72.13); 2019 (ಶೇ. 68.61). ಇಲ್ಲಿ ಮತದಾನದ ಪ್ರಮಾಣದಲ್ಲಿ ಏರಿಳಿತಗಳು ಬೇರೆ ರಾಜಕೀಯ, ಸಾಮಾಜಿಕ ಕಾರಣದಿಂದಾಗಿ ಆಗಿರಬಹುದೇ ಹೊರತು, SVEEP ಕಾರ್ಯಕ್ರಮದ ಕಾರಣದಿಂದಲ್ಲ ಎಂದು ಹೇಳುವುದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದು.

ಎರಡನೆಯದಾಗಿ, 2014ರ ಲೋಕಸಭಾ ಚುನಾವಣೆಗಳ ವೇಳೆಯಲ್ಲಿ, ಹೊಸದಾಗಿ ನೋಂದಾಯಿಸಿಕೊಳ್ಳಬೇಕಾದ ಯುವ ಮತದಾರರ ಕಡೆ SVEEP ಕಾರ್ಯಕ್ರಮದ ‘‘ವಿಶೇಷ’’ ದೃಷ್ಟಿ ಹರಿಯಿತು. 2009ಕ್ಕೆ ಹೋಲಿಸಿದರೆ, ಸುಮಾರು 11.70 ಕೋಟಿ ಯುವ ಮತದಾರರು (18-19 ಪ್ರಾಯ ವರ್ಗದವರು) ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಂಡರು. 2019ರ ಸಾರ್ವತ್ರಿಕ ಚುನಾವಣೆಗೆ 7.70 ಕೋಟಿ ಮಂದಿ ಹೊಸ ಮತದಾರರು ನೋಂದಾಯಿಸಿಕೊಳ್ಳುವುದಕ್ಕೆ ತಯಾರಾಗಿದ್ದರು. ಅಲ್ಲಿ ನೋಂದಣಿ ಸಾರ್ವತ್ರಿಕವಾಗಿ ಆಗಲಿಲ್ಲವಾದರೂ, ‘‘ನಿರ್ದಿಷ್ಟವಾಗಿ’’ ಆಗಿರುವ ಸಂಶಯಗಳಿವೆ. ಚುನಾವಣೆ ಹತ್ತಿರ ಬಂದಾಗಲೂ ನೋಂದಣಿ ಆಗಿದ್ದದ್ದು ಕೇವಲ ಶೇ. 30-40 ಹೊಸ ಮತದಾರರು! (ಅಂತಿಮ ಲೆಕ್ಕಾಚಾರ ನನಗೆ ಸಿಗಲಿಲ್ಲ). ಮುಂದೆ 2024ರ ಸಾರ್ವತ್ರಿಕ ಚುನಾವಣೆಯ ಹೊಸ ಮತದಾರರ ಅಂಕಿಸಂಖ್ಯೆಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಹೊಸ ಮತದಾರನಾ/ಳಾಗಿ ನೋಂದಣಿ ಸಾಂವಿಧಾನಿಕವಾಗಿ ಒಬ್ಬ ಪ್ರಜೆಯ ಹಕ್ಕಾಗಿದ್ದರೂ, ಅದಕ್ಕೆ ಈಗೀಗ ಬೇರೆ ಮಗ್ಗುಲುಗಳೂ ಇವೆ. ಇಂದು ಚುನಾವಣೆಗೆ ರಾಜಕೀಯ ಪಕ್ಷಗಳು ‘‘ಬ್ರ್ಯಾಂಡ್’’ಗಳಾಗಿ ಪ್ರಚಾರ ನಿರತವಾಗಿವೆ ಮತ್ತು ಚುನಾವಣೆಗೆ ‘‘ಡೇಟಾ ವಿಜ್ಞಾನ’’ ಕಾಲಿಟ್ಟಿದೆ. ಹಾಗಾಗಿ ಮತ ಲೆಕ್ಕಾಚಾರಗಳು ಸಾಂಪ್ರದಾಯಿಕ ಲೆಕ್ಕಾಚಾರಗಳಾಗಿ ಉಳಿದಿಲ್ಲ ಸರಕಾರಿ ಖರ್ಚಿನಲ್ಲಿ ಹೊಸ ಮತದಾರರ ‘‘ನಿರ್ದಿಷ್ಟ’’ ನೋಂದಣಿಗಳೇ, ನಿರ್ದಿಷ್ಟವಾದ ರಾಜಕೀಯ ಪಕ್ಷದ ಗೆಲುವಿನ ಹಾದಿ ಆಗಿದ್ದರೂ ಅಚ್ಚರಿ ಇಲ್ಲದ ದಿನಗಳಿವು.

2009ರಲ್ಲಿ ಮತದಾನದ ಪ್ರಮಾಣ ಏರಿಸುವುದಕ್ಕೆ, ಮತದಾರರನ್ನು ಪ್ರೇರೇಪಿಸುವುದಕ್ಕೆ ಆರಂಭಗೊಂಡ ಈ ಸರಕಾರಿ ಕಾರ್ಯಕ್ರಮವು ತನ್ನ ಅನುಷ್ಠಾನದ ನಾಲ್ಕು ಹಂತಗಳಲ್ಲಿ ಬದಲಾಗುತ್ತಾ ಬಂದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರ ಬದಲಾಗುತ್ತಾ ಬಂದ ಉದ್ದೇಶ-ಕಾರ್ಯಸ್ವರೂಪ- ಫಲಿತಾಂಶಗಳ ದಿಕ್ಕುಗಳನ್ನು ಗಮನವಿಟ್ಟು ನೋಡಿದರೆ, ನಾನು ಏನು ಹೇಳುತ್ತಿದ್ದೇನೆಂದು ಅರ್ಥವಾದೀತು.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X