Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘‘ಮುಸ್ಲಿಮ್ ರಾಜರ ನೆನಪನ್ನು ಅಳಿಸುವುದು...

‘‘ಮುಸ್ಲಿಮ್ ರಾಜರ ನೆನಪನ್ನು ಅಳಿಸುವುದು ಇತಿಹಾಸವಾಗಲಾರದು’’ -ಜಿ.ಎನ್. ದೇವಿ

26 April 2023 12:23 PM IST
share
‘‘ಮುಸ್ಲಿಮ್ ರಾಜರ ನೆನಪನ್ನು ಅಳಿಸುವುದು ಇತಿಹಾಸವಾಗಲಾರದು’’ -ಜಿ.ಎನ್. ದೇವಿ

ಗಣೇಶ್ ನಾರಾಯಣ ದೇವಿ, ಸಾಹಿತ್ಯ ವಿಮರ್ಶಕ ಮತ್ತು ಸಾಂಸ್ಕೃತಿಕ ಹೋರಾಟಗಾರ. ಭಾಷಾಶಾಸ್ತ್ರ, ಮಾನವಶಾಸ್ತ್ರ ಮತ್ತು ಸಾಹಿತ್ಯ ವಿಮರ್ಶೆಯ ಅಂತರ್ಶಿಸ್ತೀಯ ನೆಲೆಯನ್ನು ಅವರ ಕೃತಿಗಳಲ್ಲಿ ಕಾಣಬಹುದು. ಜ್ಞಾನ ಮತ್ತು ಶಕ್ತಿಯ ನಡುವಿನ ಸಂಬಂಧವನ್ನು ನಿರೂಪಿಸುವ, ಮಾನವೇತಿಹಾಸದ ಉದ್ದಕ್ಕೂ ಪ್ರತಿಷ್ಠಿತರು ಜ್ಞಾನವನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ ಮತ್ತು ಏಕಸ್ವಾಮ್ಯ ಹೊಂದಿದ್ದಾರೆ ಎಂದು ಹೇಳುವ ಹಲವಾರು ಕೃತಿಗಳು ಮತ್ತು ಪ್ರಬಂಧಗಳನ್ನು ಬರೆದಿದ್ದಾರೆ. ಗುಜರಾತ್ನ ವಡೋದರಾದಲ್ಲಿ ಭಾಷಾ ಸಂಶೋಧನೆ ಮತ್ತು ಪ್ರಕಾಶನ ಕೇಂದ್ರ ಹಾಗೂ ತೇಜ್ಘಡದಲ್ಲಿ ಬುಡಕಟ್ಟು ಶಿಕ್ಷಣಕ್ಕಾಗಿ ಕೆಲಸ ಮಾಡುವ ಆದಿವಾಸಿ ಅಕಾಡಮಿಯ ಸಂಸ್ಥಾಪಕರು. 2010ರಲ್ಲಿ ಅವರು ನಡೆಸಿದ ಭಾರತೀಯ ಜನಭಾಷಾ ಸಮೀಕ್ಷೆ 780 ಭಾರತೀಯ ಭಾಷೆಗಳನ್ನು ಸಂಶೋಧಿಸಿ ದಾಖಲಿಸಿದೆ. ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಾರ್ಕ್ ಸಾಹಿತ್ಯ ಪ್ರಶಸ್ತಿ, ಪ್ರಿನ್ಸ್ ಕ್ಲಾಸ್ ಪ್ರಶಸ್ತಿ, ಅಂತರ್ರಾಷ್ಟ್ರೀಯ ಲಿಂಗ್ವಾಪಾಕ್ಸ್ ಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.

ಕಲಬುರ್ಗಿ ಹತ್ಯೆ ವಿರುದ್ಧ ಅಕಾಡಮಿಯ ಮೌನವನ್ನು ಪ್ರತಿಭಟಿಸಿ 2015ರಲ್ಲಿ ದೇವಿ ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಿಂದಿರುಗಿಸಿದ್ದರು. ಅಕ್ಟೋಬರ್ 2022ರಲ್ಲಿ ದೇವಿ ಸೇರಿದಂತೆ ಸುಮಾರು ಎಂಬತ್ತು ವಿದ್ವಾಂಸರ ಜಾಗತಿಕ ಸಮೂಹ ಸಿದ್ಧಪಡಿಸಿದ್ದ 600 ಪುಟಗಳ ವರದಿ, 12,000 ವರ್ಷಗಳ ಭಾರತೀಯ ಇತಿಹಾಸವನ್ನು ದಾಖಲಿಸುತ್ತದೆ.

ದೇವಿ ಅವರೊಂದಿಗೆ ‘ದಿ ಕಾರವಾನ್’ ವರದಿಗಾರ ಶಾಹಿದ್ ತಂತ್ರೇ ನಡೆಸಿರುವ ಸಂದರ್ಶನದಲ್ಲಿ, ಇತಿಹಾಸ ತಿದ್ದಿ ಬರೆಯುವ ಆರೆಸ್ಸೆಸ್ ಮತ್ತು ಬಿಜೆಪಿ ಪ್ರಯತ್ನ, ಪರ್ಯಾಯ ಜ್ಞಾನ ವ್ಯವಸ್ಥೆಗಳು, ಬಿ.ಆರ್. ಅಂಬೇಡ್ಕರ್ ಅವರನ್ನು ಬಲಪಂಥೀಯರು ಹೈಜಾಕ್ ಮಾಡಿಕೊಳ್ಳುತ್ತಿರುವುದು, ಭಾರತೀಯ ಭಾಷೆಗಳು ಮತ್ತು ಹಿಂದಿಗೆ ಇರುವ ಮಾನ್ಯತೆ ಮೊದಲಾದ ವಿಚಾರಗಳಿವೆ.

► ಭಾರತದ ಪರಿಕಲ್ಪನೆ ಹೊಸದಾಗಿರುವಾಗ 12,000 ವರ್ಷಗಳ ಇತಿಹಾಸ ಏಕೆ ಮುಖ್ಯ?

ದೇವಿ: ಇತಿಹಾಸದ ಅಧ್ಯಯನ ಪ್ರಾರಂಭವಾದಾಗ, ಹತ್ತೊಂಭತ್ತನೇ ಶತಮಾನದಲ್ಲಿ ಯುರೋಪಿನಲ್ಲಿ ಭಾರತೀಯ ಇತಿಹಾಸವನ್ನು ಆಧುನಿಕ, ಮಧ್ಯಕಾಲೀನ ಮತ್ತು ಪ್ರಾಚೀನ ಎಂದು ವಿಂಗಡಿಸುವ ಪ್ರವೃತ್ತಿ ಕಂಡಿತು. ಮ್ಯಾಕ್ಸ್ ಮುಲ್ಲರ್ ಅವರಂಥ ವಿದ್ವಾಂಸರು ವೇದಗಳು ನಮಗೆ ಲಭ್ಯವಿರುವ ಮೊದಲ ಮೌಖಿಕ ಪುರಾವೆ ಎನ್ನುತ್ತಾರೆ. ಅದೇ ಸಮಯದಲ್ಲಿ, ಪುರಾತತ್ವ ಶಾಸ್ತ್ರ 1830ರ ದಶಕದಲ್ಲಿ ಮುನ್ನೆಲೆಗೆ ಬಂತು. ಪುರಾತತ್ವ ಶಾಸ್ತ್ರಜ್ಞರು ವೇದಗಳ ಹಿಂದಿನದನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ನಮ್ಮ ಇತಿಹಾಸ ಅಧ್ಯಯನ ಉಪಖಂಡದಲ್ಲಿನ ಮಾನವಜೀವನಕ್ಕೆ ಅನುಗುಣವಾಗಿಲ್ಲ, ಆದರೆ ಕಾಲಘಟ್ಟದ ವಿಭಜಿಸಿಕೊಳ್ಳುವಿಕೆಯೊಂದಿಗಿದೆ.

ಅದು ಸಂಪೂರ್ಣವಾಗಿ ಸರಿ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ, ಪ್ರಾಚೀನ ತಳಿಶಾಸ್ತ್ರದ ಅಧ್ಯಯನಗಳು ಬಹಳ ಮುಂದುವರಿದಿದ್ದು, ಈ ಕಾರಣದಿಂದಾಗಿ ಬಲಪಂಥೀಯ ಇತಿಹಾಸಕಾರರು ವೈದಿಕ ನಾಗರಿಕತೆ ಮತ್ತು ಸಿಂಧೂ ನಾಗರಿಕತೆಯ ವಿಚಾರವನ್ನು ಒಟ್ಟೊಟ್ಟಿಗೆ ತರತೊಡಗಿದರು. ಆದರೆ ಭಾಷಾಶಾಸ್ತ್ರ ಇದನ್ನು ಒಪ್ಪುವುದಿಲ್ಲ. ಅವೆರಡರ ನಡುವೆ 500 ವರ್ಷಗಳ ಅಂತರ ಕಾಣಿಸಿದೆ.

ಸಿಂಧೂ ನಾಗರಿಕತೆ ಭಾರತೀಯ ಇತಿಹಾಸಪೂರ್ವ ಅಥವಾ ಭಾರತೀಯ ಗತಕಾಲದ ಆರಂಭವಲ್ಲ. ಏಕೆಂದರೆ ಅದು ನಗರ ನಾಗರಿಕತೆ. ಇರಾನ್ನಿಂದ ಭಾರತಕ್ಕೆ ಕೃಷಿ ಬಂತು. ಆದರೆ ಬೇಟೆಗಾರರಾಗಿದ್ದ ಜನರು ಇದ್ದಕ್ಕಿದ್ದಂತೆ ಕೃಷಿಯತ್ತ ಮುಖಮಾಡಿದ್ದು ಹೇಗೆ? ಅದಕ್ಕಾಗಿ ಅಲೆಮಾರಿ ಬೇಟೆಗಾರ ಸಮುದಾಯದ ಕಾಲಘಟ್ಟವನ್ನು ಹುಡುಕಿದಾಗ ಅದು ಒಂದು ದೊಡ್ಡ ಐತಿಹಾಸಿಕ ವಿದ್ಯಮಾನದ ಹತ್ತಿರಕ್ಕೆ ಕೊಂಡೊಯ್ಯುತ್ತದೆ.

ಅದು ಅತ್ಯಂತ ಮಹತ್ವದ ಹವಾಮಾನ ಬದಲಾವಣೆಯ ಕಾಲವಾಗಿತ್ತು. ಶೀತ ಹವಾಮಾನ ಬದಲಾಗಿ, ತಾಪಮಾನ ಏರತೊಡಗಿತ್ತು. ಭಾರತದ ಸುಮಾರು ಮೂರನೇ ಎರಡರಷ್ಟು ಭೂಪ್ರದೇಶದಲ್ಲಿ ಮಂಜುಗಡ್ಡೆ ಕರಗತೊಡಗಿತು. ಅದನ್ನು ಹೋಲೋಸೀನ್ ಎಂದು ಕರೆಯಲಾಗುತ್ತದೆ. ಸುಮಾರು 12,000 ವರ್ಷಗಳ ಹಿಂದಿನ ಅವಧಿ ಅದು. ಅದು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಮಯಗಳಲ್ಲಿ ನಿರಂತರ ವಲಸೆ, ಬದಲಾವಣೆ, ಸ್ಥಗಿತತೆ ಮತ್ತು ನಿರಂತರತೆಯ ಕಥೆ.

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಕಳೆದ 12,000 ವರ್ಷಗಳ ಭಾರತೀಯ ಇತಿಹಾಸವನ್ನು ಪರಿಶೀಲಿಸಲು ಸಮಿತಿಯನ್ನು ಸ್ಥಾಪಿಸಿತು ಮತ್ತು ಆ ಸಮಿತಿ ಉತ್ತರ ಭಾರತೀಯರನ್ನು ಮಾತ್ರ ಒಳಗೊಂಡಿತ್ತು. ದಕ್ಷಿಣದಿಂದ, ಈಶಾನ್ಯದಿಂದ ಯಾರೂ ಇರಲಿಲ್ಲ. ಮಹಿಳೆಯರು, ಕ್ರಿಶ್ಚಿಯನ್ನರು, ಮುಸ್ಲಿಮರು, ದಲಿತರು ಅಥವಾ ಆದಿವಾಸಿಗಳು ಇರಲಿಲ್ಲ. ಇಂತಹ ಸಮಿತಿಯ ಉದ್ದೇಶ, ಎನ್ಸಿಇಆರ್ಟಿ ಪುಸ್ತಕಗಳ ಮೂಲಕ ಮಕ್ಕಳ ಮೇಲೆ ಏನನ್ನು ಹೇರಬಹುದು ಮತ್ತು ಭಾರತದ ಮುಂದಿನ ಪೀಳಿಗೆಗೆ ಅದು ಹೇಗೆ ವಿನಾಶಕಾರಿಯಾಗಬಹುದು ಎಂಬ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಭಾರತದ 12,000 ವರ್ಷಗಳ ಇತಿಹಾಸ ಅನೇಕ ಯುದ್ಧಗಳು, ಘರ್ಷಣೆಗಳು, ದುರಂತಗಳು ಮತ್ತು ಹಿಂಸಾತ್ಮಕ ಉದ್ವಿಗ್ನತೆಗಳಿಂದ ಕೂಡಿದೆ. ಆದರೂ ಅದು ಸಹಿಷ್ಣುತೆ, ಸಹಾನುಭೂತಿ, ಮಾನವೀಯತೆ, ಸ್ವಯಂ ಸಂಯಮವನ್ನು ನಮಗೆ ಕಲಿಸುತ್ತದೆ. ಈ ಶಿಕ್ಷಣೇತರ ಕಾರಣಕ್ಕಾಗಿಯೂ ಕಳೆದ 12,000 ವರ್ಷಗಳ ಮತ್ತು ಅದಕ್ಕೂ ಮುಂಚಿನ ಭಾರತೀಯ ಇತಿಹಾಸವನ್ನು ನೋಡುವುದು ಅಗತ್ಯವಾಗಿತ್ತು.

► ಹೊಲೊಸೀನ್ ವರದಿ ಬಿಡುಗಡೆಯ ಸಂದರ್ಭದಲ್ಲಿನ ನಿಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಭಾರತೀಯ ಇತಿಹಾಸದ ನಿರ್ದಿಷ್ಟ ಅಂಶಗಳನ್ನು ಪರಿಷ್ಕರಿಸುವ ದೊಡ್ಡ ಯೋಜನೆಯಾಗಿ ಇತಿಹಾಸವನ್ನು ತಿದ್ದಿ ಬರೆಯಲು ಸಮಿತಿ ನೇಮಿಸಿದ್ದಾರೆ ಎಂದು ಹೇಳಿದ್ದೀರಿ. ಆ ದೊಡ್ಡ ಯೋಜನೆ ಮತ್ತು ಆ ನಿರ್ದಿಷ್ಟ ಅಂಶಗಳು ಎಂದರೆ ಏನು?

ದೇವಿ: ವೀರರ ಆಡಳಿತವನ್ನು ಬಿಂಬಿಸುವುದು ದೊಡ್ಡ ಯೋಜನೆ. ಒಬ್ಬ ನಾಯಕ ಅನ್ಯಾಯ ಮತ್ತು ತಪ್ಪುಗಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ. ನಾವು ಸುವರ್ಣ ಯುಗದಲ್ಲಿ ಬದುಕಿದ್ದೆವು ಮತ್ತು ನಂತರ ನಮ್ಮ ಸಂತೋಷವನ್ನು ಹಾಳುಮಾಡಿ, ನಮ್ಮ ವೈಜ್ಞಾನಿಕ ಶ್ರೇಷ್ಠತೆ, ಚಿಂತನೆಯ ಶ್ರೇಷ್ಠತೆಗಳನ್ನು ಕಸಿದುಕೊಂಡು, ವಿದೇಶಿ ವಿಚಾರಗಳನ್ನು ಮಾತ್ರ ನಮ್ಮಲ್ಲಿ ತುಂಬಿ, ನಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವವರು ಬಂದರು ಎಂದು ಒಬ್ಬರು ಇತಿಹಾಸವನ್ನು ಸೃಷ್ಟಿಸಿದರೆ, ನಮ್ಮ ಸಮಾಜವನ್ನು ಕಲುಷಿತಗೊಳಿಸಿದ ವಿದೇಶಿ ವಿಚಾರಗಳನ್ನು ಮತ್ತು ವಿದೇಶಿಯರನ್ನು ತೊಡೆದುಹಾಕಲು ನಾನು ಬಂದಿದ್ದೇನೆ ಎಂದು ಒಬ್ಬರು ಹೇಳಿಕೊಳ್ಳುತ್ತಾರೆ. ಅದಕ್ಕಾಗಿ ಒಬ್ಬ ವ್ಯಕ್ತಿಗೆ ತಪ್ಪಾಗಿ ಬರೆದ ಇತಿಹಾಸ ಬೇಕು.

ಸಮಿತಿಯು ಇತಿಹಾಸದ ಸತ್ಯದಿಂದ ದೂರವಿರುವ ಆ ರೀತಿಯ ಸತ್ಯವನ್ನು ಪ್ರತಿಪಾದಿಸುವ ಇತಿಹಾಸ ಪಠ್ಯಗಳನ್ನು ತಯಾರಿಸಬಹುದು. ಸತ್ಯವೆಂದರೆ ಒಬ್ಬ ದೊರೆ ಮುಸ್ಲಿಮನಾಗಿರಬಹುದು, ಆದರೆ ಅವನ ಸೇನಾಪತಿ ಹಿಂದೂ ಆಗಿದ್ದಿರಬಹುದು ಅಥವಾ ಆಡಳಿತಗಾರ ಹಿಂದೂ ಆಗಿದ್ದು, ಅವನ ಸೇನಾಪತಿ ಮುಸಲ್ಮಾನನಾಗಿದ್ದಿರಬಹುದು. ಒಂದು ಧಾರ್ಮಿಕ ಕ್ಷೇತ್ರದಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಪೂಜೆ ಸಲ್ಲಿಸುತ್ತಿದ್ದಿರಬಹುದು. ಒಂದೇ ಕಾವ್ಯದಲ್ಲಿ ಪರ್ಷಿಯನ್ ಮತ್ತು ಸಂಸ್ಕೃತ ಭಾಷೆಗಳು ಜೊತೆಯಾಗಿರಬಹುದು. ಪ್ರಪಂಚದ ಎಲ್ಲಾ ಭಾಗಗಳಿಂದ ಜನರು ಬಂದರು ಮತ್ತು ದಕ್ಷಿಣ ಏಶ್ಯ ಅವರನ್ನು ಬರಮಾಡಿಕೊಂಡಿತು. ಏಕೆಂದರೆ ಈ ನೆಲ ಎಲ್ಲರನ್ನೂ ಒಳಗೊಳ್ಳುತ್ತದೆ. ಆದರೆ ಒಂದು ಹೊಸ ಇತಿಹಾಸ ಜನರು ಈ ಸ್ಥಳವನ್ನು ಪ್ರತ್ಯೇಕವಾಗಿ ನೋಡುವಂತೆ ಮಾಡಿದರೆ, ಆಗ ಸಂವಿಧಾನದ ಮನೋಭಾವ ಮತ್ತು ಭಾರತೀಯ ನಾಗರಿಕತೆಯ ಮನೋಭಾವವನ್ನು ಉಲ್ಲಂಘಿಸಿದಂತಾಗುತ್ತದೆ.

► ಭಾರತದಲ್ಲಿ ಹೀಗಾಗುತ್ತದೆ ಎಂದು ನೀವು ಭಯಪಡುತ್ತೀರಾ?

ದೇವಿ: ಇದನ್ನು ತಡೆಯದೆ ಹೋದರೆ, ಯಾರೂ ಪ್ರಶ್ನಿಸದಿದ್ದರೆ, ಇದನ್ನು ಬೌದ್ಧಿಕ ರೀತಿಯಲ್ಲಿ ಎದುರಿಸದಿದ್ದರೆ, ಭಯ ಉಳಿಯುತ್ತದೆ. ಅದನ್ನು ಪ್ರಶ್ನಿಸಬೇಕು. ಆದರೆ ಪ್ರಶ್ನಿಸುವುದು ವಾಕ್ಚಾತುರ್ಯ ಮಾತ್ರವಾಗಬಹುದು. ಆದ್ದರಿಂದ, ವಿವಾದಕ್ಕೆ ಸಿಲುಕುವ ಬದಲು, ಇತಿಹಾಸದ ವಿಜ್ಞಾನದ ಆಧಾರದ ಮೇಲೆ, ತರ್ಕ ಮತ್ತು ಉತ್ತಮ ಪಾಂಡಿತ್ಯದ ಆಧಾರದ ಮೇಲೆ 12,000 ವರ್ಷಗಳ ಹಿಂದಿನದನ್ನು ವಿವರಿಸುವ ಪಠ್ಯಗಳ ಗುಂಪನ್ನು ರಚಿಸುವುದು ಉತ್ತಮ ಮಾರ್ಗ. ಇತಿಹಾಸದ ಬಗ್ಗೆ ನನ್ನ ದೃಷ್ಟಿಕೋನ ಮಾತ್ರ ಸರಿ ಎಂದು ನಾನು ಹೇಳುತ್ತಿಲ್ಲ. ಸಂಸ್ಕೃತಿ ಸಚಿವಾಲಯವನ್ನು ಪ್ರಶ್ನಿಸಲು ನನಗೆ ಆಸಕ್ತಿಯಿಲ್ಲ. ಅದು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ತನ್ನ ಕೆಲಸವನ್ನು ಮಾಡುತ್ತಿದೆ. ನಾನು, ಹೆಚ್ಚು ವೈಜ್ಞಾನಿಕ ಮತ್ತು ಹೆಚ್ಚು ತರ್ಕಬದ್ಧವಾದ ಇತಿಹಾಸವನ್ನು ಆಯ್ಕೆ ಮಾಡಲು ಬಯಸುವ ಜನರಿಗೆ ಸಿಗಬಲ್ಲ ಪರ್ಯಾಯವನ್ನು ಕೊಡುವುದರ ಕಡೆ ಆಸಕ್ತಿ ಹೊಂದಿದ್ದೇನೆ.

► ಈ ಸಮಿತಿ ನಿಮ್ಮನ್ನು ಸಂಪರ್ಕಿಸಿದೆಯೇ?

ದೇವಿ: ಇಲ್ಲ. ನಾನು ತರಬೇತಿ ಪಡೆದ ಇತಿಹಾಸಕಾರನಲ್ಲ. ಆದರೆ ಅವರು ತರಬೇತಿ ಪಡೆದ ಇತಿಹಾಸಕಾರರನ್ನು ಸಹ ಸಂಪರ್ಕಿಸುತ್ತಿಲ್ಲ. ಅವರಲ್ಲಿ ವಿವಿಧ ಸರಕಾರಿ ಸಂಸ್ಥೆಗಳ ಮಾಜಿ ಅಧಿಕಾರಿಗಳು ಅಥವಾ ನಾಗಪುರಕ್ಕೆ ಹತ್ತಿರವಿರುವ ಒಂದಿಬ್ಬರಿದ್ದಾರೆ.

► ಇತಿಹಾಸಶಾಸ್ತ್ರ ಅಥವಾ ಇತಿಹಾಸವನ್ನು ಹೇಗೆ ಬರೆಯಲಾಗುತ್ತದೆ ಎಂಬ ಪ್ರಕ್ರಿಯೆಯ ಸುತ್ತ ಚರ್ಚೆ ನಡೆದಿದೆ. ಅದು ಭಾರತದ ಇತಿಹಾಸವೋ, ಜನರ ಇತಿಹಾಸವೋ ಅಥವಾ ದೇಶದ ಸಿದ್ಧಾಂತವೋ?

ದೇವಿ: 9 ಅಥವಾ 10ನೇ ಶತಮಾನದಲ್ಲಿ, ರಾಜಶೇಖರ ಎಂಬ ವಿದ್ವಾಂಸನಿದ್ದ. ಹಲವಾರು ನಾಟಕಗಳನ್ನು ಮತ್ತು ಕಾವ್ಯ ಸಿದ್ಧಾಂತದ ಕೃತಿಯನ್ನು ಬರೆದಿರುವ ಆತನ ಪ್ರಕಾರ, ಒಂದು ರೀತಿಯ ಇತಿಹಾಸ ಏಕ ವೀರರದ್ದು ಮತ್ತು ಇನ್ನೊಂದು ಅನೇಕ ವೀರರದ್ದು. ರಾಮಾಯಣ ಒಬ್ಬ ನಾಯಕನದ್ದಾದರೆ, ಮಹಾಭಾರತ ಅನೇಕ ವೀರರದ್ದು. ಅನೇಕ ವೀರರ ಮತ್ತು ವೈವಿಧ್ಯಗಳ ಇತಿಹಾಸವಾಗಿಸುವುದು ಇತಿಹಾಸವನ್ನು ರಚಿಸುವ ಅತ್ಯುತ್ತಮ ಮಾರ್ಗ. ಇತಿಹಾಸದ ಹರಿವು ನೇರವಾಗಿಲ್ಲ. ಅದು ಸಟ್ಲೆಜ್ನ ಹರಿವಿನಂತೆ. ಸಟ್ಲೆಜ್ ಶತದ್ರು ಎಂಬ ಪದದಿಂದ ಬಂದಿದೆ. ಅಂದರೆ 100 ಕುದುರೆಗಳು. ಇತಿಹಾಸ ವಿವಿಧ ದಿಕ್ಕುಗಳಲ್ಲಿ 100 ಕುದುರೆಗಳ ಶಕ್ತಿಯೊಂದಿಗೆ ಮುನ್ನಡೆಯುತ್ತದೆ. ಈ ಹರಿವಿನ ವಿವಿಧತೆ ಕಳೆದುಹೋಗದಂತೆ ಅವೆಲ್ಲವನ್ನೂ ಒಟ್ಟಿಗೆ ಜೋಡಿಸುವುದು ಇತಿಹಾಸಕಾರರ ಕೆಲಸವಾಗಿದೆ.

► ಭಾರತೀಯ ಇತಿಹಾಸವನ್ನು ಪುನಃ ಬರೆಯಲಾಗುತ್ತಿದೆ ಎಂದು ನೀವು ಭಾವಿಸುತ್ತೀರಾ? ಹೌದಾದರೆ, ಏಕೆ?

ದೇವಿ: ಎಲ್ಲಾ ಇತಿಹಾಸಗಳು ಸಾರ್ವಕಾಲಿಕವಾಗಿ ಪುನಃ ಬರೆಯಲ್ಪಡುತ್ತವೆ ಎಂಬುದು ಸತ್ಯ. ಏಕೆಂದರೆ ಇತಿಹಾಸದ ಸೂತ್ರೀಕರಣವು ವರ್ತಮಾನದಲ್ಲಿ ನಡೆಯುತ್ತದೆ ಮತ್ತು ಅದು ವರ್ತಮಾನದ ಮನಃಸ್ಥಿತಿಯಿಂದ ನಿಯಂತ್ರಿಸಲ್ಪಡುತ್ತದೆ. ಎಲ್ಲಾ ಲಿಖಿತ ಇತಿಹಾಸವು ಅದರ ಕಾಲದ ಉತ್ಪತ್ತಿ. ಆದರೆ ಇತಿಹಾಸವನ್ನು ಪುನಃ ಬರೆಯಲು ಹಲವಾರು ಮಾರ್ಗಗಳಿವೆ. ಹಿಂದಿನ ಸೂಕ್ಷ್ಮಗಳನ್ನು ಹೊರತರುವ ಮೂಲಕ ತಿಳುವಳಿಕೆಯನ್ನು ಆಳವಾಗಿಸುವುದು ಮತ್ತು ವಿಸ್ತರಿಸುವುದು ಒಂದು ಮಾರ್ಗ. ವರ್ತಮಾನದಲ್ಲಿ ಜನರನ್ನು ಸಂಮೋಹನಗೊಳಿಸುವುದಕ್ಕಾಗಿ ಮತ್ತು ಪ್ರಶ್ನೆಗಳನ್ನು ಕೇಳಲು ಅವರನ್ನು ಅಸಮರ್ಥರನ್ನಾಗಿಸಲು ಹಿಂದಿನದನ್ನು ಮರುರೂಪಿಸುವುದು ಇನ್ನೊಂದು ಮಾರ್ಗ. ಸಾಮಾನ್ಯವಾಗಿ, ಶೈಕ್ಷಣಿಕ ಇತಿಹಾಸಕಾರರು ಐತಿಹಾಸಿಕ ದೃಷ್ಟಿಕೋನಗಳ ತಿಳುವಳಿಕೆಯನ್ನು ವಿಸ್ತರಿಸಿದ್ದಾರೆ. ಆದರೆ ನಿರಂಕುಶ ಪ್ರಭುತ್ವದ ಕಾಲದಲ್ಲಿ ಇತಿಹಾಸದ ತಿಳುವಳಿಕೆಯನ್ನು ನಿರ್ಬಂಧಿಸಲಾಗುತ್ತದೆ, ಸಂಕುಚಿತಗೊಳಿಸಲಾಗುತ್ತದೆ ಮತ್ತು ಆಡಳಿತಕ್ಕೆ ವಿಧೇಯವಾಗಿರುವಂತೆ ಮಾಡಲಾಗುತ್ತದೆ. ನಿಷ್ಠೆ, ಅತಿಯಾದ ರಾಷ್ಟ್ರೀಯತೆ ಇತ್ಯಾದಿಗಳನ್ನು ಹುಟ್ಟುಹಾಕಲಾಗುತ್ತದೆ.

► ಶಾಲಾ-ಕಾಲೇಜುಗಳಲ್ಲಿನ ಪಠ್ಯಕ್ರಮ ಬದಲಾಯಿಸಲಾಗುತ್ತಿದೆ. ಮೊಗಲ್ ಇತಿಹಾಸ, ಗುಜರಾತ್ ದಂಗೆಯ ಉಲ್ಲೇಖ ಮತ್ತು ಗಾಂಧಿ ಹತ್ಯೆಯ ನಂತರ ಆರೆಸ್ಸೆಸ್ ಮೇಲಿನ ನಿಷೇಧ ಇಂಥ ಭಾಗಗಳನ್ನು ತೆಗೆದುಹಾಕಲಾಗುತ್ತಿದೆ. ಇದು ಏಕೆ ಮತ್ತು ಇದರ ಹಿಂದೆ ಯಾರಿದ್ದಾರೆ ಮತ್ತು ಅವರು ಏನನ್ನು ಸಾಧಿಸಲು ಆಶಿಸುತ್ತಿದ್ದಾರೆ?

ದೇವಿ: ಇಂದು, ಈ ಶಕ್ತಿಗಳು ಭಾರತೀಯ ಇತಿಹಾಸದ ಆರು ಸುವರ್ಣ ಯುಗಗಳನ್ನು ಚಿತ್ರಿಸಲು ಆಸಕ್ತವಾಗಿವೆ. ಸಾವರ್ಕರ್ ಪುಸ್ತಕ, ಭಾರತ ಇತಿಹಾಸದಲ್ಲಿ ಆರು ಸುವರ್ಣ ಪುಟಗಳು, ಇಸ್ಲಾಮಿಕ್ ಪ್ರಾಬಲ್ಯವಿದ್ದ ಮಧ್ಯಕಾಲೀನ ಅವಧಿಯನ್ನು ಕರಾಳ ಯುಗವೆಂದು ಚಿತ್ರಿಸಲು ನೋಡುತ್ತದೆ. ಆದರೆ ಮೊಗಲರ ಕಾಲವಷ್ಟೇ ಅಲ್ಲ, ಕ್ರಿ.ಶ. 1100ರಿಂದ ಇಡೀ 1,000 ವರ್ಷಗಳು ಭಾರತದಲ್ಲಿ ಮಹತ್ತರವಾದ ಪ್ರಗತಿ ಮತ್ತು ಅಭಿವೃದ್ಧಿಯ ಯುಗ. ಅದು ಮುಸ್ಲಿಮರು, ಹಿಂದೂಗಳು, ಜೈನರು, ಬೌದ್ಧರು ಅಥವಾ ಸಿಖ್ಖರು ಯಾರದೇ ಕಾಲವಾಗಿದ್ದರೂ, ಅದು ಭಾರತವೇ ಆಗಿತ್ತು. ಶೇರ್ ಶಾ ಸೂರಿ ದೇಶದ ಮೊದಲ ಭೂ ಸಮೀಕ್ಷೆಯ ಮೂಲಕ ಭೂಮಿಯ ಮಾಲಕತ್ವವನ್ನು ತರ್ಕಬದ್ಧವಾಗಿ ಗುರುತಿಸುವಂತೆ ಮಾಡಿದ್ದ. ಇಡೀ ಅವಧಿಯನ್ನು ಕರಾಳ ಯುಗ ಎಂದು ಚಿತ್ರಿಸುವುದು ಮೂರ್ಖತನ ಮತ್ತು ತಪ್ಪು.

ಉದಾಹರಣೆಗೆ, ತಮಿಳು ಮತ್ತು ಕನ್ನಡ ಹೊರತುಪಡಿಸಿ ಬಾಂಗ್ಲಾ, ಒಡಿಯಾ, ಪಂಜಾಬಿ, ಗುಜರಾತಿ, ಮರಾಠಿ, ತೆಲುಗು, ಮಲಯಾಳಂ ಮತ್ತು ಕಾಶ್ಮೀರಿ ಇಂಥ ಎಲ್ಲಾ ಆಧುನಿಕ ಭಾರತೀಯ ಭಾಷೆಗಳು ಬಹುಶಃ ಈ ಅವಧಿಯಲ್ಲಿ ಅಭಿವೃದ್ಧಿ ಹೊಂದಿದವು. ಆಧುನಿಕ ಭಾರತೀಯ ಭಾಷೆಗಳು ಅಭಿವೃದ್ಧಿಗೊಂಡರೆ ಮಹಾನ್ ಸಂತರು ಹೊರಹೊಮ್ಮುತ್ತಾರೆ ಮತ್ತು ಅದ್ಭುತ ಸಾಹಿತ್ಯ ಸಂಪ್ರದಾಯವನ್ನು ನಿರ್ಮಿಸುತ್ತಾರೆ. ಸೂಫಿಸಂ ಮತ್ತು ಭಕ್ತಿ ಜನರಿಗೆ ಶ್ರೇಷ್ಠ ಮಾನವತಾವಾದವನ್ನು ಕಲಿಸಿದವು. ಭೂ ಸುಧಾರಣೆಗಳು ಆದವು. ಅಂಥ ಅವಧಿಯನ್ನು ಕರಾಳ ಯುಗ ಎಂದು ಹೇಗೆ ಕರೆಯಲು ಸಾಧ್ಯ? ಮುಸ್ಲಿಮ್ ಆಡಳಿತಗಾರರ ನೆನಪನ್ನು ದೇಶದಿಂದ ಅಳಿಸಿಹಾಕುವುದೆಂದರೆ ಅದು ದಿಕ್ಕುತಪ್ಪಿಸುವಿಕೆ. ಅದು ಇತಿಹಾಸವಲ್ಲ. ಹಾಗೆಯೇ ಬೌದ್ಧ ಧರ್ಮ ಮತ್ತು ಸನಾತನ ಧರ್ಮದ ನಡುವಿನ ಘರ್ಷಣೆ ನಮ್ಮ ಇತಿಹಾಸದ ಭಾಗ. ಆದರೆ ಬೌದ್ಧ ಧರ್ಮವನ್ನು ಬದಿಗಿಟ್ಟು ಕೇವಲ ಸನಾತನವನ್ನು ಎತ್ತಿ ತೋರಿಸಿದರೆ ಅದು ಇತಿಹಾಸದ ಸುಳ್ಳು ಮಾತ್ರವಾಗುತ್ತದೆ.

ಅದೇ ರೀತಿ, ಇತಿಹಾಸದ ವಿವಿಧ ವೈಜ್ಞಾನಿಕ ವಿಧಾನಗಳು ಸಿಂಧೂ ನಾಗರಿಕತೆಯ ಅವನತಿ ಮತ್ತು ವೈದಿಕ ನಾಗರಿಕತೆಯ ಉದಯದ ನಡುವಿನ ಅಂತರವನ್ನು ತೋರಿಸುತ್ತವೆ. ಆ 500 ವರ್ಷಗಳಲ್ಲಿ ನಿಖರವಾಗಿ ಏನಾಯಿತು ಎಂದು ನಮಗೆ ತಿಳಿದಿಲ್ಲ. ಸಿಂಧೂ ನಾಗರಿಕತೆಯ ಬಗ್ಗೆ ನಮಗೆ ತಿಳಿದಿದೆ, ವಿಭಿನ್ನ ರೂಪದಲ್ಲಿ, ಇದನ್ನು ಗಾಂಧಾರ ಅವಧಿ ಎಂದು ಕರೆಯಲಾಗುತ್ತದೆ. ಆದರೆ ಕ್ರಿ.ಪೂ. 1400ಕ್ಕಿಂತ ಮೊದಲು ಭಾರತಕ್ಕೆ ಬಂದಿರದ ಸಂಸ್ಕೃತ ಭಾಷೆ ಹಿಂದೆ ಅಸ್ತಿತ್ವದಲ್ಲಿತ್ತು ಎಂದು ಯಾರಾದರೂ ಹೇಳಲು ಪ್ರಾರಂಭಿಸಿದರೆ, ಅದು ಸಿಂಧೂ ನಾಗರಿಕತೆಯ ಭಾಷೆ, ನಾಗರಿಕತೆಯ ಬಗ್ಗೆ ವೈಜ್ಞಾನಿಕವಾಗಿ ನಿರೂಪಿಸಲಾದ ಎಲ್ಲ ಸತ್ಯಗಳ ತಲೆಯ ಮೇಲೆ ಹೊಡೆದಂತಿರುತ್ತದೆ.

ಯಾರೂ ಮನಸೋ ಇಚ್ಛೆ ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲ. ಒಂದು ಸಿದ್ಧಾಂತ ತೀವ್ರ ರಾಷ್ಟ್ರೀಯತೆಯನ್ನು ಉತ್ತೇಜಿಸಲು ಯತ್ನಿಸಿದಾಗ, ಅದು ನಮ್ಮ ಹಿಂದಿನವರ ವೈಫಲ್ಯಗಳನ್ನು ನೋಡದೆ ವೈಭವಯುತ ಗತವನ್ನು ಮಾತ್ರ ಚಿತ್ರಿಸಲು ಬಯಸುತ್ತದೆ. ಆದರೆ ಪ್ರತೀ ಪೀಳಿಗೆಯೂ ಹಿಂದಿನ ಸಾಧನೆ, ವೈಫಲ್ಯಗಳೆರಡರಿಂದಲೂ ಕಲಿಯಬೇಕಾಗಿದೆ. ಹುಸಿ ಹೇಳಿಕೆಗಳನ್ನು ಬಲವಂತವಾಗಿ ವಿದ್ಯಾರ್ಥಿಗಳಲ್ಲಿ ತುಂಬಿದರೆ ಇಡೀ ಯುವ ಪೀಳಿಗೆಗೆ ಸುಳ್ಳು ಚಿತ್ರಣ ಸಿಗುತ್ತದೆ. ಅದು ಇತಿಹಾಸವನ್ನು ವಿಮರ್ಶಾತ್ಮಕವಾಗಿ ನೋಡಲಾರದೆ ಬೆಳೆಯುತ್ತದೆ ಮತ್ತು ತನ್ನನ್ನು ವಿಮರ್ಶಾತ್ಮಕವಾಗಿ ಹೇಗೆ ನೋಡಬೇಕೆಂದು ತಿಳಿದಿಲ್ಲದ ನಾಗರಿಕತೆ ಅಥವಾ ರಾಷ್ಟ್ರ ಅಭಿವೃದ್ಧಿ ಕಾಣಲಾರದು. ಜನರು ಕೇವಲ ಕಲ್ಪಿತ ವೈಭವಗಳ ಮೇಲೆ ಸಂತೋಷಪಡುತ್ತಾರೆ. ಇದು ಅಂತಿಮವಾಗಿ ಜಡತ್ವಕ್ಕೆ ಕಾರಣವಾಗುತ್ತದೆ.

ಇಷ್ಟವಿರಲಿ ಇಲ್ಲದಿರಲಿ ಮಹಾತ್ಮಾ ಗಾಂಧೀಜಿಯವರ ಹೆಸರೇ ಶಾಶ್ವತವಾಗಿ ಉಳಿಯುತ್ತದೆ. ಅವರನ್ನು ಕೊಂದಿದ್ದು ಸತ್ಯ. ಕೊಂದ ವ್ಯಕ್ತಿ, ಅವನ ಹೆಸರು, ಅವನ ಉದ್ದೇಶಗಳು ಮತ್ತು ಯಾರ ತತ್ವ ಆ ವ್ಯಕ್ತಿ ಗಾಂಧಿಯನ್ನು ಕೊಲ್ಲುವಂತೆ ಮಾಡಿತೆಂಬುದು ಈಗಾಗಲೇ ಪ್ರಪಂಚಕ್ಕೆ ತಿಳಿದಿದೆ. ಭವಿಷ್ಯದ ಮಕ್ಕಳಿಂದ ಅದನ್ನು ಮರೆಮಾಚುವುದು ತೀರಾ ಬಾಲಿಶವಾಗಿದೆ. ಇದಕ್ಕೆ ಯಾವುದೇ ಕಲಿಕಾ ಅಥವಾ ಶೈಕ್ಷಣಿಕ ಸಮರ್ಥನೆ ಇಲ್ಲ.

ಐತಿಹಾಸಿಕ ಸಂಗತಿಗಳು ಬೇರೆ ಬಗೆಯಲ್ಲಿ ಸಮಾಜದ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಮೌಖಿಕ ಸಂಪ್ರದಾಯಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪರ್ಯಾಯ ರೂಪಗಳು ಉಳಿದುಕೊಂಡಿವೆ. ಗುಜರಾತ್ ಗಲಭೆಯಲ್ಲಿ ಸಾವಿರಾರು ಕುಟುಂಬಗಳು ಸಂತ್ರಸ್ತವಾದವು ಮತ್ತು ಆ ಕುಟುಂಬದ ಹೆಚ್ಚಿನ ಸದಸ್ಯರು ಇನ್ನೂ ಇದ್ದಾರೆ. ಇತಿಹಾಸದಲ್ಲಿ ಅದನ್ನು ನಿಗ್ರಹಿಸುವುದು, ಮುಂದಿನ ದಿನಗಳಲ್ಲಿ ನಗೆಪಾಟಲಿಗೀಡಾಗುತ್ತದೆ. ಈ ಸರಕಾರ ಹೋಗಿ ಬೇರೆ ಸರಕಾರ ಬಂದಾಗ ಅದು ಎಲ್ಲವನ್ನೂ ಪುನರುಜ್ಜೀವನಗೊಳಿಸುತ್ತದೆ. ಅದನ್ನು ನೆನಪಿನಿಂದ ಅಳಿಸಲಾಗದು. ಸರಕಾರ ನಂಬಬಯಸುವ ಮಟ್ಟಿಗೆ ಜನರ ನೆನಪಿನ ಶಕ್ತಿ ದುರ್ಬಲವಾಗಿಲ್ಲ. ಅವರು ಸ್ಪಷ್ಟವಾಗಿಲ್ಲದಿದ್ದರೂ ಬಹಳ ಸಮಯದವರೆಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಬಲ್ಲರು.

► ನರೇಂದ್ರ ಮೋದಿ ಸರಕಾರ ಭಾರತೀಯ ಇತಿಹಾಸದ ಓದಿನ ಮೂಲಕ ಪರಿಚಯಿಸಿದ ಅತ್ಯಂತ ಹಾನಿಕಾರಕ ತಪ್ಪುಕಲ್ಪನೆಗಳು ಯಾವುವು?

ದೇವಿ: ಅತ್ಯಂತ ಹಾನಿಕಾರಕ ಊಹೆ, ಈ ಸರಕಾರ ಭಾರತವನ್ನು ಚೆನ್ನಾಗಿ ತಿಳಿದಿದೆ ಎಂಬುದು. ನನ್ನ ಅಭಿಪ್ರಾಯದಲ್ಲಿ ಅದು ತಿಳಿದಿಲ್ಲ. ಅದು ಬುಡಕಟ್ಟು ಜನಾಂಗದ ಚಿಂತನೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಮಹಿಳೆಯರು ಯೋಚಿಸುವ ಮತ್ತು ಅನುಭವಿಸುವ ರೀತಿಯನ್ನು ಅರ್ಥ ಮಾಡಿಕೊಳ್ಳಲಾರದು. ಏಕೆಂದರೆ ಅದು ಪುರುಷ ಧೋರಣೆಯದ್ದಾಗಿದೆ. ಈ ದೇಶದಲ್ಲಿ ಪರಿಶಿಷ್ಟ ಜಾತಿಗಳು ಹೇಗೆ ವಾಸಿಸುತ್ತಿವೆ ಮತ್ತು ಭಗವದ್ಗೀತೆಯಂತಹ ಪಠ್ಯಗಳಿಂದ ರಕ್ಷಿಸಲ್ಪಟ್ಟ ಪುನರ್ಜನ್ಮದ, ಕರ್ಮದ ಕಲ್ಪನೆಯಿಂದಾಗಿ ಅವರು ಏನು ಅನುಭವಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಭವಿಷ್ಯದ ಕಡೆಗೆ ನೋಡುತ್ತಿರುವ ಜನರು ಈ ಮಾರ್ಗದಲ್ಲಿ ಯೋಚಿಸುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ.

ಈ ಸರಕಾರ ಜನರ ದುರಾಸೆಯನ್ನು ಅರ್ಥಮಾಡಿಕೊಳ್ಳುತ್ತದೆ, ಆದರೆ ಅವರ ಆಕಾಂಕ್ಷೆಗಳನ್ನಲ್ಲ. ಈ ಸರಕಾರ ಪ್ರಚಾರದ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅದು ಪ್ರಚಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತದೆ. ನಮ್ಮ ಅಂತರ್ರಾಷ್ಟ್ರೀಯ ನಿಲುವಿನ ಬಗ್ಗೆ ಕೆಟ್ಟ ಹೇಳಿಕೆಗಳನ್ನು ನೀಡುವ ಮೂಲಕ ಅದು ತನ್ನ ಬೆನ್ನು ತಟ್ಟಿಕೊಳ್ಳುತ್ತದೆ. ಎಲ್ಲವೂ ನಿನ್ನೆಯಿಂದ ಪ್ರಾರಂಭವಾಯಿತು ಮತ್ತು 2014ಕ್ಕಿಂತ ಮೊದಲು ಏನೂ ಇರಲಿಲ್ಲ ಎನ್ನುತ್�

share
Next Story
X