ಉಳ್ಳಾಲ: ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ ಕಾರ್ಯಕ್ರಮ ತೊಕ್ಕೊಟ್ಟು ಎಂಬಲ್ಲಿ ನಡೆಯಿತು.
ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಅವರು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮವಹಿಸಿ ದುಡಿಯಬೇಕಾಗಿದೆ. ಪಕ್ಷ ಮಂಗಳೂರು ನಲ್ಲಿ ಬಹಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ನನಗೆ ಇದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಿದರೆ ಅದು ಸಾಧ್ಯವಾಗುತ್ತದೆ. ನಮಗಿಂತ ಜಾಸ್ತಿ ಆಸ್ತಿ ಮತದಾರರಿಗಿದೆ ಎನ್ನುವುದನ್ನು ಮರೆಯಬಾರದು. ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ದಿನಗಳಲ್ಲಿ ಪೂರ್ಣ ಕೆಲಸ ಆಗಬೇಕು ಎಂದು ಹೇಳಿದರು.
ಗುರುವಾರ ರಾಹುಲ್ ಗಾಂಧಿ ಕಾರ್ಯಕ್ರಮ ಅಡ್ಯಾರ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಹರೇಕಳದಲ್ಲಿ ವಾಹನ ನಿಲ್ಲಿಸಿ ಅಲ್ಲಿಂದ ಪಾದಯಾತ್ರೆ ಮೂಲಕ ಕಾರ್ಯಕ್ರಮ ಕ್ಕೆ ತೆರೆಳಲಾಗುವುದು. ರಾಹುಲ್ ಗಾಂಧಿ ಕಾರ್ಯಕ್ರಮ ಯಶಸ್ವಿಯಾಗಬೇಕು. ಸತ್ಯದ ಹಾದಿಯಲ್ಲಿ ನಡೆದ ಕಾರಣಕ್ಕೆ ಅವರು ಎಂಪಿ ಸ್ಥಾನ ಕಳೆದು ಕೊಳ್ಳಬೇಕಾಯಿತು. ಈ ಹಿನ್ನೆಲೆಯಲ್ಲಿ ಅವರಿಗೆ ಪೂರ್ಣ ಬೆಂಬಲ ನಾವು ನೀಡಬೇಕು ಎಂದು ಕರೆ ನೀಡಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಕಾರ್ಯಕ್ರಮ ದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಪಕ್ಷದ ಮುಖಂಡರಾದ ದೀಪಕ್ ಪಿಲಾರ್, ಮುಹಮ್ಮದ್ ಮೋನು ಮಲಾರ್, ಮುಸ್ತಫಾ ಹರೇಕಳ, ವಿಲ್ಫ್ರೆಡಿ ಸೋಜ, ಯೂಸುಫ್ ಬಾವಾ, ಈಶ್ವರ್ ಉಳ್ಳಾಲ, ನಾಸೀರ್ ಟಿ.ಎಸ್. ಸಾಮಣಿಗೆ, ಸುರೇಶ್ ಭಟ್ನಗರ್, ಮುಸ್ತಫಾ ಉಳ್ಳಾಲ, ಬಾಜಿಲ್ ಡಿ ಸೋಜ, ಮುಹಮ್ಮದ್ ಮುಕಚೇರಿ, ಎನ್ ಎಸ್ ಕರೀಂ, ದಿನೇಶ್ ಕುಂಪಲ, ಅಶ್ರಫ್ ಕೆಸಿರೋಡ್ , ರಹ್ಮಾನ್ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.








