ಸ್ವಂತ ಕೆಲಸಕ್ಕಾಗಿ ಸರಕಾರಿ ವಾಹನ ಬಳಕೆ: ಬಿಜೆಪಿ ಪ್ರಚಾರಕಿ ತಾರಾ ವಿರುದ್ಧ ಎಫ್‍ಐಆರ್

ಬೆಂಗಳೂರು, ಎ.26: ಸರಕಾರಿ ವಾಹನವನ್ನು ಸ್ವಂತ ಕೆಲಸಕ್ಕಾಗಿ ಬಳಕೆ ಮಾಡಿದ ಆರೋಪದಡಿ ನಟಿ, ಬಿಜೆಪಿ ಚುನವಣಾ ಪ್ರಚಾರಕಿ ತಾರಾ ಅನುರಾಧ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟಿ ತಾರಾ ಅವರು ಕೆಎ 04 ಎಂ ವಿ 1977 ಸಂಖ್ಯೆಯ ಸರಕಾರಿ ವಾಹನವನ್ನು ಬಳಕೆ ಮಾಡುತ್ತಿದ್ದರು. ಈ ಬಗ್ಗೆ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ವಿಡಿಯೊ ಚಿತ್ರಿಕರಣ ಮಾಡಿ, ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ದೂರು ಸ್ವೀಕರಿಸಿದ ಅಧಿಕಾರಿಗಳು, ಪರಿಶೀಲನೆ ನಡೆಸಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನಂತರ, ಮೊದಲು ಎನ್‍ಸಿಆರ್ ದಾಖಲಿಸಿ ನಂತರ ನ್ಯಾಯಾಲಯದ ಅನುಮತಿ ಪಡೆದು ಎಫ್‍ಐಆರ್ ದಾಖಲು ಮಾಡಲಾಗಿದೆ.
Next Story





