ಉಡುಪಿ: ಪೂರ್ಣಪ್ರಜ್ಞ ಪಿಯು ಕಾಲೇಜಿಗೆ ಒಟ್ಟು 17 ರ‍್ಯಾಂಕ್

ಉಡುಪಿ, ಎ.26: ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟು 17 ರ‍್ಯಾಂಕ್ ಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಜೆಸ್ವಿಟಾ ಡಯಾಸ್ (595) ದ್ವಿತೀಯ ರ್ಯಾಂಕ್ ಹಾಗೂ ಪ್ರಜ್ಞಾ (590) ಏಳನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶ್ರದ್ಧಾ ಎನ್. ಹೆಗ್ಡೆ (593) ಐದನೇ ರ‍್ಯಾಂಕ್, ಕೆ. ವರ್ಷಾ ಉಪಾಧ್ಯ (592) ಆರನೇ ರ‍್ಯಾಂಕ್, ಸಾಜನ್ ಎಸ್. ಶೆಟ್ಟಿ (591), ಸಪ್ನಾ ಶೆಣೈ (591) ಏಳನೇ ರ‍್ಯಾಂಕ್, ಯು.ಅವನಿ ಆಚಾರ್ಯ (590), ತುಷಾಂಕ್ ಸಿ. ಪೂಜಾರಿ (590), ಭುವನ್ ಎಸ್. ಪುತ್ರನ್ (590) ಎಂಟನೇ ರ‍್ಯಾಂಕ್, ಜೆಸ್ಸಿಕಾ ಕೊಲಾಕೋ (589), ಅಕ್ಷತಾ ಎ. ಬಂಗೇರ (589) 9ನೇ ರ‍್ಯಾಂಕ್, ಸ್ನೇಹಾ (588), ಸಿಯಾ ಕೋಟ್ಯಾನ್ (588), ಬಿ.ನಾಗೇಂದ್ರ ಶೆಣೈ (588), ತೋನ್ಸೆ ಶಶಾಂಕ್ ಕಿಣಿ (588), ಪ್ರೀತಿ ಶೆಟ್ಟಿ (588) ಹಾಗೂ ಗಗನ್ ಜೆ. ಸುವರ್ಣ (588) 10ನೇ ರ‍್ಯಾಂಕ್ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 348 ವಿದ್ಯಾರ್ಥಿಗಳಲ್ಲಿ 229 ಮಂದಿ ಹಾಗೂ ವಾಣಿಜ್ಯ ವಿಭಾಗದಲ್ಲಿ 276 ಮಂದಿ ವಿದ್ಯಾರ್ಥಿಗಳಲ್ಲಿ 175 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥರು, ಗೌರವ ಕಾರ್ಯದರ್ಶಿ ಡಾ.ಶಶಿಕಿರಣ್ ಉಮಾಕಾಂತ್, ಪ್ರಾಂಶುಪಾಲರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





