Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕನ್ನಡಿಗರಿಗೆ ‘ಕ್ರೈಮ್ ಕ್ಯಾಪಿಟಲ್’ ಯುಪಿ...

ಕನ್ನಡಿಗರಿಗೆ ‘ಕ್ರೈಮ್ ಕ್ಯಾಪಿಟಲ್’ ಯುಪಿ ಮಾದರಿ ಬೇಡ: ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ಆಕ್ರೋಶ

26 April 2023 9:33 PM IST
share
ಕನ್ನಡಿಗರಿಗೆ ‘ಕ್ರೈಮ್ ಕ್ಯಾಪಿಟಲ್’ ಯುಪಿ ಮಾದರಿ ಬೇಡ: ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು, ಎ. 26: ‘ಯುಪಿ ಸಿಎಂ ಆದಿತ್ಯನಾಥ್ ಅವರೇ, ತಮ್ಮ ರಾಜ್ಯ, ತಮ್ಮ ಆಡಳಿತ ನಡೆಯುತ್ತಿರುವುದು ಕನ್ನಡಿಗರು ಕಟ್ಟುತ್ತಿರುವ ಬೆವರಿನ ತೆರಿಗೆಯಲ್ಲಿ ಎನ್ನುವುದು ನೆನಪಿರಲಿ. ಕರ್ನಾಟಕದ ತೆರಿಗೆ ಹಣವನ್ನಷ್ಟೇ ಅಲ್ಲ, ಕರ್ನಾಟಕದ ಏರ್ ಶೋವನ್ನೂ ಹೈಜಾಕ್ ಮಾಡಲು ಯತ್ನಿಸಿದ ತಮ್ಮ ಉಪದೇಶ ಕನ್ನಡಿಗರಿಗೆ ಬೇಕಿಲ್ಲ. ಪರಾವಲಂಬಿ ಯೋಗಿ ಮಾತಾಡೋದೆಲ್ಲ ಡೋಂಗಿ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದೇಶದ 100 ಅಪರಾಧ ಪ್ರಕರಣಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತವೆ. ಅಪರಾಧದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾದ ಯುಪಿಯ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧದ ಬಗ್ಗೆ ಉಪದೇಶ ಕೊಡುವುದು ಪರಮ ಹಾಸ್ಯ. ಮೊದಲು ತಮ್ಮ ರಾಜ್ಯದ ಮಕ್ಕಳನ್ನು ರಕ್ಷಿಸಿಕೊಳ್ಳಲಿ’ ಎಂದು ಲೇವಡಿ ಮಾಡಿದೆ.

‘ಕೋವಿಡ್‍ನಿಂದ ತನ್ನ ರಾಜ್ಯದ ಜನರನ್ನು ರಕ್ಷಿಸದೆ ಗಂಗೆಯಲ್ಲಿ ತೇಲಿಸಿದ ಯೋಗಿ ಆದಿತ್ಯ ನಾಥ್ ಅವರು ಆಕ್ಸಿಜನ್ ನೀಡದೆ ಕರ್ನಾಟಕದ ಜನರನ್ನು ಕೊಂದ ಬಿಜೆಪಿಗರಿಗೆ ಆದರ್ಶ ಎನಿಸಿರಬಹುದು. ಆದರೆ, ಕನ್ನಡಿಗರಿಗೆ ಇಂತಹ ದುರಂತದ ‘ಯುಪಿ ಮಾದರಿ ಬೇಡ’ ದೇಶಕ್ಕೆ ಕರ್ನಾಟಕವೇ ಮಾಡೆಲ್ ಎನ್ನುವಂತಹ ಆಡಳಿತವನ್ನು ಕಾಂಗ್ರೆಸ್ ನೀಡಿದೆ, ಮುಂದೆಯೂ ನೀಡಲಿದೆ’ ಎಂದು ಕಾಂಗ್ರೆಸ್ ಹೇಳಿದೆ.

‘ಮಹಿಳೆಯರ ಮೃಗಗಳಂತೆ ಮುಗಿಬೀಳುವ ಅತ್ಯಂತ ಕ್ರೂರ ಪರಿಸ್ಥಿತಿ ಇರುವ ಯುಪಿ ಸಿಎಂ ಕರ್ನಾಟಕದಲ್ಲಿ ಡೋಂಗಿ ಭಾಷಣ ಕುಟ್ಟುವ ಅಗತ್ಯವಿಲ್ಲ. ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಗುಡಿಸಲಿಗೆ ಬೆಂಕಿ ಹಚ್ಚಿ, ಎಳೆ ಮಕ್ಕಳನ್ನು ಬೇಯಿಸಿದ ಘಟನೆ ಕಣ್ಣ ಮುಂದಿರುವಾಗ ಯಾವ ನೈತಿಕತೆಯಲ್ಲಿ ಯುಪಿ ಮಾಡೆಲ್ ಜಪಿಸುತ್ತೀರಿ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಉತ್ತರ ಪ್ರದೇಶವೆಂದರೆ ‘ಕ್ರಿಮಿನಲ್‍ಗಳ ಸ್ವರ್ಗ’ ಎಂದೇ ಜನಜನಿತವಾಗಿದೆ. ಹಾಡಹಗಲೇ ಯಾವುದೇ ಭಯ ಇಲ್ಲದೆ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತವೆ. ಪೊಲೀಸರ ಎದುರಲ್ಲೇ ಹತ್ಯೆಗಳು ನಡೆಯುತ್ತವೆ. ಯೋಗಿ ಆದಿತ್ಯ ನಾಥ್ ಅವರೇ, ನಿಮ್ಮ ಪ್ರವಚನ ಕನ್ನಡಿಗರಿಗೆ ಬೇಕಿಲ್ಲ, ನಿಮ್ಮ ತಟ್ಟೆಯಲ್ಲಿನ ಹೆಗ್ಗಣವನ್ನು ನೋಡಿಕೊಳ್ಳಿ. ನಮಗೆ ನಿಮ್ಮ ಯುಪಿ ಮಾದರಿ ಬೇಡ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

‘ಕ್ರೈಮ್ ಕ್ಯಾಪಿಟಲ್’ ಎಂದೇ ಕುಖ್ಯಾತಿ ಪಡೆದಿರುವ ರಾಜ್ಯದ ಮುಖ್ಯಮಂತ್ರಿ ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕಕ್ಕೆ ಬಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕಿಂತ ಹಾಸ್ಯ ಬೇರೊಂದಿಲ್ಲ. 3 ವರ್ಷದಲ್ಲಿ 11 ಸಾವಿರ ಹತ್ಯೆಗಳು ನಡೆದಿದ್ದು ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದ್ದು ತಮ್ಮ ಅಸಾಮರ್ಥ್ಯದಿಂದ ಅಲ್ಲವೇ?’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

"ಕ್ರೈಮ್ ಕ್ಯಾಪಿಟಲ್" ಎಂದೇ ಕುಖ್ಯಾತಿ ಪಡೆದಿರುವ ರಾಜ್ಯದ ಮುಖ್ಯಮಂತ್ರಿ ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕಕ್ಕೆ ಬಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕಿಂತ ಹಾಸ್ಯ ಬೇರೊಂದಿಲ್ಲ.

3 ವರ್ಷದಲ್ಲಿ 11 ಸಾವಿರ ಹತ್ಯೆಗಳು ನಡೆದಿದ್ದು ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದ್ದು ತಮ್ಮ ಅಸಾಮರ್ಥ್ಯದಿಂದ ಅಲ್ಲವೇ?#UPModelBeda pic.twitter.com/nNAFHteOo2

— Karnataka Congress (@INCKarnataka) April 26, 2023

ಮಹಿಳೆಯರ ಮೃಗಗಳಂತೆ ಮುಗಿಬೀಳುವ ಅತ್ಯಂತ ಕ್ರೂರ ಪರಿಸ್ಥಿತಿ ಇರುವ ಯುಪಿ ಸಿಎಂ ಕರ್ನಾಟಕದಲ್ಲಿ ಡೋಂಗಿ ಭಾಷಣ ಕುಟ್ಟುವ ಅಗತ್ಯವಿಲ್ಲ.

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಗುಡಿಸಲಿಗೆ ಬೆಂಕಿ ಹಚ್ಚಿ, ಎಳೆ ಮಕ್ಕಳನ್ನು ಬೇಯಿಸಿದ ಘಟನೆ ಕಣ್ಣ ಮುಂದಿರುವಾಗ ಯಾವ ನೈತಿಕತೆಯಲ್ಲಿ ಯುಪಿ ಮಾಡೆಲ್ ಜಪಿಸುತ್ತೀರಿ?

ನಮಗೆ ಇಂತ ಕ್ರೂರ #UPmodelBeda. pic.twitter.com/61aiD4eIv8

— Karnataka Congress (@INCKarnataka) April 26, 2023
share
Next Story
X