ವಾಮಂಜೂರು: ಸಂತ ಜೋಸೆಫ್ ದಿ ವರ್ಕರ್ ಚರ್ಚ್‌ನಲ್ಲಿ ಬಲಿಪೂಜೆ

ಮಂಗಳೂರು: ಫಾ. ಆಂಟೋನಿಯಸ್ ಮರಿಯಾ ಬೋಡೆಗ್‌ರಿಂದ ಸ್ಥಾಪನೆಗೊಂಡಿದ್ದ ಮಿಸನರಿ ಸಿಸ್ಟರ್ಸ್ ಆಫ್ ದಿ ಕ್ವೀನ್ ಆಫ್ ದಿ ಅಪೋಸ್ಟೋಲಿಸ್‌ನ ಶತಮಾನೋತ್ಸವದ ಪ್ರಯುಕ್ತ ವಾಮಂಜೂರಿನ ಸಂತ ಜೋಸೆಫ್ ದಿ ವರ್ಕರ್ ಚರ್ಚ್‌ನಲ್ಲಿ ಬುಧವಾರ ಬಲಿಪೂಜೆ ನಡೆಯಿತು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ. ಡಾ. ಪೀಟರ್ ಪೌಲ್ ಸಲ್ಡಾನ ನೇತೃತ್ವ ವಹಿಸಿದ್ದರು. ಶಿವಮೊಗ್ಗದ ಬಿಷಪ್ ಅ.ವಂ. ಡಾ. ಫ್ರಾನ್ಸಿಸ್ ಸೆರಾವೊ, ವಾಮಂಜೂರು ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಜೇಮ್ಸ್ ಡಿಸೋಜ, ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರು ವಂ.ಫಾ.ಮ್ಯಾಕ್ಸಿಮಾ ಎಲ್. ನೊರೋನ್ಹಾ, ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ವಂ. ಭಗಿನಿ ರೋಸಲಿನ್ ಬಿ.ಎಸ್., ಜೆಸ್ವಿಥ್ ಕರ್ನಾಟಕ ವಲಯದ ಪ್ರೊವೆನ್ಸಿಯಲ್ ಫಾ. ಡಯೋನೈಸಿಯಸ್ ವಾಜ್ ಎಸ್‌ಜೆ, ವಾಮಂಜೂರು ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಜೇಮ್ಸ್ ಡಿಸೋಜ ಎಪಿಸ್ಕೋಲ್ ಕಾರ್, ಮಂಗಳೂರು ಧರ್ಮಪ್ರಾಂತದ ಫಾ. ಡೆನಿಯಲ್ ವೇಗಾಸ್ ಒಪಿ, ಮಾಜಿ ಸುಪೀರಿಯರ್ ಜನರಲ್ ವಂ. ಭಗಿನಿ ಮಾರಿಯಾ ಗೊರೆಟ್ಟಿ ಕ್ವಾಡ್ರಸ್, ಮಾಜಿ ಪ್ರೊವೆನ್ಸಿಯಲ್ ಸುಪೀರಿಯರ್ ವಂ. ಜುಲಿಯೇಟ್ ಲೋಬೊ, ಚಾರ್ಲಸ್ ಪಾಯಸ್, ಕ್ವೀನ್ ಆಫ್ ದಿ ಅಪೋಸ್ಟೋಲಿಸ್ ಸಂಚಾಲಕಿ ಲೀನಾ. ಜೆ ಮತ್ತಿತರರು ಶುಭ ಹಾರೈಸಿದರು.