ಮಂಗಳೂರು: ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ವಂಚನೆ; ಪ್ರಕರಣ ದಾಖಲು

ಮಂಗಳೂರು, ಎ.26:ಪಾರ್ಟ್ ಟೈಂ ಜಾಬ್ ನೆಪದಲ್ಲಿ ಲಿಂಕ್ ಕಳುಹಿಸಿ 1.08 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಮೊಬೈಲ್‌ಗೆ ಫೆ.9ರಂದು +9929883933 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಪಾರ್ಟ್ ಟೈಂ ಜಾಬ್ ಸಂದೇಶ ಹೊಂದಿದ ಗೂಗಲ್ ಲಿಂಕ್‌ನ್ನು ಕಳುಹಿಸಿ ಟೆಲಿಗ್ರಾಂ ಆ್ಯಪ್ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದ ಎನ್ನಲಾಗಿದೆ.
ಅದನ್ನು ದೂರುದಾರರು ಟೆಲಿಗ್ರಾಂ ಆ್ಯಪ್ ಡೌನ್‌ಲೋಡ್ ಮಾಡಿದ್ದು, ಬಳಿಕ ಆನ್‌ಲೈನ್ ಮೂಲಕ ಹಣ ದ್ವಿಗುಣ ಮಾಡಿಕೊಳ್ಳಲು 10 ಟಾಸ್ಕ್ ಮಾಡುವಂತೆ ಸೂಚಿಸಿದ. ಮೊದಲು ದೂರುದಾರರ ಖಾತೆಗೆ ಅಪರಿಚಿದ ವ್ಯಕ್ತಿ 150 ರೂ.ಗಳನ್ನು ಹಾಕಿದ. ಅನಂತರ 1,500 ರೂ. ಕಳುಹಿಸುವಂತೆ ದೂರುದಾರರಿಗೆ ತಿಳಿಸಿದ. ಬಳಿಕ ಮತ್ತೊಂದು ಲಿಂಕ್ ಕಳುಹಿಸಿಕೊಟ್ಟು ಅದರಲ್ಲಿ ಖಾತೆ ರಚಿಸಲು ವಿವರ ನಮೂದಿಸುವಂತೆ ತಿಳಿಸಿದ. ದೂರುದಾರ ವ್ಯಕ್ತಿ ಅದರಂತೆ ಮಾಡಿ ಒಟಿಪಿ ಲಿಂಕ್ ನಮೂದಿಸಿ 1,000 ರೂ. ಕಳುಹಿಸಿದರು. ಹೀಗೆ ಹಂತ ಹಂತವಾಗಿ ಅಪರಿಚಿತ ವ್ಯಕ್ತಿ ಪೋನ್‌ಪೇ ಮೂಲಕ ಒಟ್ಟು 1,08,500 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.