ಹಿರಿಯ ರಾಜಕೀಯ ಮುಖಂಡ ಚಂದ್ರಶೇಖರ ಮೇಲ್ನಾಡು ನಿಧನ
ಸುಬ್ರಹ್ಮಣ್ಯ, ಎ.26: ಸುಳ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಹಿರಿಯ ರಾಜಕೀಯ ಧುರೀಣ ಚಂದ್ರಶೇಖರ ಮೇಲ್ನಾಡು(74) ಎ.26ರಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬುಧವಾರ ಬೆಳಿಗ್ಗೆ ತೀವ್ರ ಹೃದಯಘಾತದಿಂದ ಕುಸಿದ ಅವರನ್ನು ಅವರ ಪುತ್ರ ಗುರುಪ್ರಸಾದ್ ಮೇಲ್ನಾಡು ಅವರು ಕಡಬ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಚಂದ್ರಶೇಖರ ಮೇಲ್ನಾಡು ಅವರು ಗುತ್ತಿಗಾರು ಕ್ಷೇತ್ರದಿಂದ ಸುಳ್ಯ ತಾಲೂಕು ಪಂಚಾಯತ್ ಸದಸ್ಯರಾಗಿ, ಏನೆಕಲ್ಲು ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಚಂದ್ರಶೇಖರ ಮೇಲ್ನಾಡು ಅವರು ಕೆಲ ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು.
Next Story