ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತರೇ ಮುಖ್ಯಮಂತ್ರಿಯಾಗುತ್ತಾರೆ ಎಂದ ಶಾಸಕ ಯತ್ನಾಳ್

ಬೆಳಗಾವಿ: 'ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತರೇ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬುಧವಾರ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, 'ವೀರೇಂದ್ರ ಪಾಟೀಲ್ ಅವರನ್ನು ಅವಮಾನಿಸಿದ ಅಂದಿನಿಂದ ಲಿಂಗಾಯತರು ಕಾಂಗ್ರೆಸ್ ನಿಂದ ದೂರವಾಗಿದ್ದಾರೆ. ಬಳಿಕ ರಾಮಕೃಷ್ಣ ಹೆಗಡೆ ಅವರ ನಾಯಕತ್ವವನ್ನು ಒಪ್ಪಿಕೊಂಡರು. ಬಳಿಕ ಜಿ.ಎಚ್ ಪಟೇಲ್, ಬಿಎಸ್ ವೈ ಮುಖ್ಯಮಂತ್ರಿಯಾದರು, ಈಗ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಮುಂದೆ ಕೂಡ ಲಿಂಗಾಯತರೇ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ. ಇದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ' ಎಂದು ಹೇಳಿದರು.
'ಈ ಬಾರಿ ಚುನಾವಣೆ ನಮಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಯಾರು ಕೂಡ ಲಿಂಗಾಯತರು ಅಪ್ಪಿ ತಪ್ಪಿ ಕೂಡ ಕಾಂಗ್ರೆಸ್ ಗೆ ವೋಟ್ ಹಾಕಬಾರದು' ಎಂದು ಇದೇ ವೇಳೆ ಯತ್ನಾಳ್ ಕರೆ ನೀಡಿದರು.
ಇದನ್ನೂ ಓದಿ: ಸ್ವಂತ ಕೆಲಸಕ್ಕಾಗಿ ಸರಕಾರಿ ವಾಹನ ಬಳಕೆ: ಬಿಜೆಪಿ ಪ್ರಚಾರಕಿ ತಾರಾ ವಿರುದ್ಧ ಎಫ್‍ಐಆರ್
Next Story







