ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಐಪಿಎಲ್ ನಿಂದ ಔಟ್

ಹೊಸದಿಲ್ಲಿ: ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಮಂಡಿರಜ್ಜು ಗಾಯದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಿಂದ ಹೊರಗುಳಿದಿದ್ದಾರೆ ಎಂದು ಅವರು ಪ್ರತಿನಿಧಿಸುತ್ತಿರುವ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಗುರುವಾರ ಖಚಿತಪಡಿಸಿದೆ.
ಹೈದರಾಬಾದ್‌ನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸುಂದರ್ ಈ ಋತುವಿನ ಮೊದಲ ವಿಕೆಟ್ ನ್ನು ಪಡೆದಿದ್ದರು. ಸುಂದರ್ ಒಂದೇ ಓವರ್‌ನಲ್ಲಿ 3 ವಿಕೆಟ್ ಗಳನ್ನು ಉರುಳಿಸಿದ್ದರು.
"ವಾಷಿಂಗ್ಟನ್ ಸುಂದರ್ ಅವರು ಮಂಡಿರಜ್ಜು ಗಾಯದಿಂದಾಗಿ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ಶೀಘ್ರ ಚೇತರಿಕಗಾಗಿ ಹಾರೈಸುತ್ತೇವೆ” ಎಂದು ಹೈದರಾಬಾದ್ ತಂಡ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ
ಇತ್ತೀಚಿನ ವರ್ಷಗಳಲ್ಲಿ ಆಲ್ ರೌಂಡರ್ ಸುಂದರ್ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯದ ಸಮಸ್ಯೆಗಳು ಹಾಗೂ COVID-19 ಸೋಂಕಿನಿಂದಾಗಿ ಸುಂದರ್ 2022 ರ ಬಹುಪಾಲು ಋತುವನ್ನು ಕಳೆದುಕೊಂಡಿದ್ದರು.
Next Story