Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಿದ್ದಾಜಿದ್ದಿಯ ಕಣವಾಗುವುದೇ ಅಭಿವೃದ್ಧಿಯ...

ಜಿದ್ದಾಜಿದ್ದಿಯ ಕಣವಾಗುವುದೇ ಅಭಿವೃದ್ಧಿಯ ಮುಖವನ್ನೇ ನೋಡದ ಕ್ಷೇತ್ರ?

ಎ.ಪಿ.ಎಸ್.ಎ.ಪಿ.ಎಸ್.27 April 2023 12:29 PM IST
share
ಜಿದ್ದಾಜಿದ್ದಿಯ ಕಣವಾಗುವುದೇ ಅಭಿವೃದ್ಧಿಯ ಮುಖವನ್ನೇ ನೋಡದ ಕ್ಷೇತ್ರ?

ಹೇಗಿರಲಿದೆ, ಮತ್ತೊಮ್ಮೆ ಹೊರಗಿನವರಿಗೇ ಮಣೆಹಾಕಿದ ಕೈ-ಕಮಲ ಕಾದಾಟ? | ವೈಯಕ್ತಿಕ ಕಾರಣಗಳಿಂದ ಸೋಲುಂಡಿದ್ದ ಲಾಡ್ ಜಯ ತರುವರೇ ಕಾಂಗ್ರೆಸ್‌ಗೆ? | ಕೈ ಬಿಟ್ಟು ಕಮಲ ಹಿಡಿದ ಛಬ್ಬಿ ಗೆಲುವಿನ ಹಾದಿಯಲ್ಲಿ ಇರುವ ಸವಾಲುಗಳೇನು?  | ಜಿದ್ದಾಜಿದ್ದಿಯ ಕಣವಾಗುವುದೇ, ಅಭಿವೃದ್ಧಿಯ ಮುಖವನ್ನೇ ನೋಡದ ಕಲಘಟಗಿ?

ಸಂತೋಷ್ ಲಾಡ್. ಕಾಂಗ್ರೆಸ್ ನಾಯಕ. ಮಾಜಿ ಸಚಿವ. ಗಣಿ ಉದ್ಯಮಿ. ಮೂಲತಃ ಬಳ್ಳಾರಿಯ ಸಂಡೂರಿನವರು. ಈಚಿನ ವರ್ಷಗಳ ತಮ್ಮ ರಾಜಕೀಯ ಬದುಕಿನ ನೆಲೆಯಾಗಿ ಕಲಘಟಗಿಯನ್ನು ಆರಿಸಿಕೊಂಡವರು. ಸಂಡೂರು ಪಟ್ಟಣ ಪಂಚಾಯತ್‌ನಿಂದ ರಾಜಕೀಯ ಆರಂಭಿಸಿದ್ದ ಲಾಡ್, 2003ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸಂಡೂರು ಶಾಸಕರಾದರು. 2007ರಲ್ಲಿ ಕಾಂಗ್ರೆಸ್ ಸೇರ್ಪಡೆ ಬಳಿಕ ಕಲಘಟಗಿ ಅವರ ರಾಜಕೀಯ ಕಾರ್ಯಕ್ಷೇತ್ರವಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದವರು. 2008 ಹಾಗೂ 2013ರಲ್ಲಿ ಕಲಘಟಗಿಯಿಂದ ಗೆದ್ದವರು 2018ರಲ್ಲಿ ಸೋತರು. ಈಗ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಲಘಟಗಿ ಅಖಾಡಕ್ಕಿಳಿದಿದ್ದಾರೆ.

ಕುಗ್ರಾಮಗಳೇ ತುಂಬಿದಂತಿರುವ ಕ್ಷೇತ್ರದಲ್ಲಿ, ಉತ್ತರ ಕರ್ನಾಟಕದ ಜವಾರಿ ಕನ್ನಡ ಹಾಗೂ ಮರಾಠಿ ಭಾಷಾ ಸಂಸ್ಕೃತಿ ಎದ್ದುಕಾಣುತ್ತದೆ. ಲಿಂಗಾಯತ, ಮರಾಠ ಮತ್ತು ಮುಸ್ಲಿಮರ ಜೊತೆಗೇ, ಸಿದ್ದಿ, ಗೌಳಿಯಂಥ ವನವಾಸಿ ಬುಡಕಟ್ಟು ಜನರೂ ಇದ್ದಾರೆ. ಕನ್ನಡ, ಮರಾಠಿ, ಉರ್ದು, ಕೊಂಕಣಿ, ಗೌಳಿ ಹೀಗೆ ಬಹುನುಡಿಗಳು ಕೇಳಿಸುವ ಕ್ಷೇತ್ರ. ಕಲ್ಲು ಮತ್ತು ಕಟ್ಟಿಗೆ ನಾಡೆಂಬ ಕಾರಣದಿಂದ ಕಲಘಟಗಿ ಎಂಬ ಹೆಸರು ಬಂತೆಂಬ ಐತಿಹ್ಯವಿದೆ. ಪ್ರಾಚೀನ ಶಾಸನಗಳು, ತಂಬೂರು ಎಂಬಲ್ಲಿನ ಶಿಲ್ಪಿಜಕಣಾಚಾರಿ ನಿರ್ಮಿಸಿದ್ದೆನ್ನಲಾಗುವ ಶಿವದೇಗುಲ, ಮಿಶ್ರಕೋಟಿ ಮತ್ತು ಗಲಗಿಯಲ್ಲಿನ ಕೊಳಗಳು, ಕಲ್ಯಾಣಿ ಚಾಲುಕ್ಯರ ಕಾಲದ ಜೈನ ಬಸದಿಗಳು, 18ನೇ ಶತಮಾನದ ಮುಸ್ಲಿಮ್ ಸಂತ ಶಹೀದ್ ಗೋರಿ, ಅಲ್ಲಿ ವರ್ಷವೂ ನಡೆಯುವ ಉರೂಸ್, ಮೂರು ವರ್ಷಕ್ಕೊಮ್ಮೆ ನಡೆಯುವ ಕಲಘಟಗಿ ಜಾತ್ರೆ ಇವೆಲ್ಲವೂ ಇಲ್ಲಿನ ಸಾಂಸ್ಕೃತಿಕ ವಿಶೇಷಗಳು.

ವಿಭಿನ್ನ ಭೌಗೋಳಿಕ ಪರಿಸರದ ಕಲಘಟಗಿ ತನ್ನದೇ ವಿಲಕ್ಷಣ ಕಾರಣಗಳಿಗಾಗಿ ರಾಜಕೀಯವಾಗಿ ಗಮನ ಸೆಳೆಯುತ್ತದೆ. ಬಡತನ ಕಾಡುತ್ತಿರುವ, ಅಭಿವೃದ್ಧಿ ಮರೀಚಿಕೆಯಾಗಿರುವ ಸನ್ನಿವೇಶದಲ್ಲಿ ಬದುಕು ಕಟ್ಟಲು ಹೆಣಗಾಡುತ್ತಿರುವ ಇಲ್ಲಿನ ಜನರ ಮುಗ್ಧತೆ ರಾಜಕೀಯ ಶಕ್ತಿಗಳ ಪಾಲಿಗೆ ಲಾಭನಷ್ಟದ ಲೆಕ್ಕಾಚಾರಕ್ಕೆ ವಸ್ತು ಮಾತ್ರ. ತೀರಾ ಹಳೆಯ ತಾಲೂಕು ಕಲಘಟಗಿ ಮತ್ತು ಐದು ವರ್ಷದ ಹಿಂದೆ ಹೊಸದಾಗಿ ಸೇರ್ಪಡೆಯಾಗಿರುವ ಅಳ್ನಾವರ ತಾಲೂಕು ಇರುವ ವಿಧಾನಸಭಾ ಕ್ಷೇತ್ರ ಇದು. 2007ರ ಪುನರ್ವಿಂಗಡಣೆ ಬಳಿಕ ಈ ಬದಲಾವಣೆಯಾಯಿತು. ಮೊದಲು ಈ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಹುಬ್ಬಳ್ಳಿ ತಾಲೂಕಿನ ಹಳ್ಳಿಗಳನ್ನು ಕುಂದಗೋಳಕ್ಕೆ ಸೇರಿಸಿ, ಧಾರವಾಡ ಕ್ಷೇತ್ರದಲ್ಲಿದ್ದ ಅಳ್ನಾವರ ಸೀಮೆಯನ್ನು ಇದಕ್ಕೆ ಜೋಡಿಸಲಾಯಿತು. ಅಳ್ನಾವರ ಭಾಗದಲ್ಲಿ ಮರಾಠರು ಗಣನೀಯವಾಗಿ ಇರುವು ದರಿಂದ, ಲಿಂಗಾಯತೇತರರ ಪ್ರಾಬಲ್ಯವೂ ಈಗ ಕ್ಷೇತ್ರದಲ್ಲಿ ಕಾಣುತ್ತದೆ.

ಚುನಾವಣಾ ಅಖಾಡದ ಹಿನ್ನೋಟ

1957ರ ಮೊದಲ ಚುನಾವಣೆಯಲ್ಲಿ ಪ್ರಬಲ ಎದುರಾಳಿಗಳೇ ಇಲ್ಲದೆ ನಿರಾಯಾಸವಾಗಿ ಗೆದ್ದಿದ್ದ ಕಾಂಗ್ರೆಸ್, 1962ರ ಹೊತ್ತಿಗೆ ಲೋಕಸೇವಕ ಸಂಘದ ಪ್ರಬಲ ಪೈಪೋಟಿ ಯನ್ನೆದುರಿಸಿ ಕಷ್ಟಪಟ್ಟು ಗೆಲ್ಲಬೇಕಾಯಿತು. 1967ರಲ್ಲಿ ಪಕ್ಷೇತರ ಅಭ್ಯರ್ಥಿಯೆದುರು ಕಾಂಗ್ರೆಸ್ ಸೋತಿತ್ತು. ಕಲಘಟಗಿಯಲ್ಲಿ ಶಿಕ್ಷಣಕ್ಕೆ ಹೊಸ ಹಾದಿಯನ್ನೇ ತೆರೆದಿದ್ದ ತುಮರಿಕೊಪ್ಪ ಚರ್ಚ್‌ನ ಫಾದರ್ ಜೇಕಬ್ ಪಲ್ಲಿಪುರತು ಜನರ ಒತ್ತಾಸೆಯಿಂದ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಗೆದ್ದಿದ್ದು 1983ರ ಚುನಾವಣೆಯಲ್ಲಿ. ಲಿಂಗಾಯತ ಪ್ರಾಬಲ್ಯದ ಕ್ಷೇತ್ರದಲ್ಲಿ ಅದು ಅಚ್ಚರಿಯ ಗೆಲುವಾಗಿತ್ತು. ಮುಂದೆ ಅವರು ಜನತಾ ಪರಿವಾರದ ಸದಸ್ಯರಾದರೂ, ಟಿಕೆಟ್ ಸಿಗಲಿಲ್ಲ. ಲಿಂಗಾಯತ ಅಭ್ಯರ್ಥಿ ಜನತಾ ಪಕ್ಷದಿಂದ ಗೆದ್ದರು. ಆದರೆ 1994ರ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸತೊಡಗಿದ ಬಿಜೆಪಿ, 1999 ಮತ್ತು 2004ರ ಚುನಾವಣೆಗಳಲ್ಲಿ ಗೆದ್ದಿತ್ತು. ಆನಂತರದ ಎರಡು ಚುನಾವಣೆಗಳಲ್ಲಿ ಗೆದ್ದಿದ್ದು ಕಾಂಗ್ರೆಸ್. ಕಳೆದ ಚುನಾವಣೆಯಲ್ಲಿ ಮತ್ತೆ ಬಿಜೆಪಿಯೇ ಗೆದ್ದಿತ್ತು.

ಹೊರಗಿನವರಿಗೇ ಮಣೆ

ಹೀಗೆ ಕಲಘಟಗಿಯಲ್ಲಿ ಗೆದ್ದವರೆಲ್ಲ ಹೊರಗಿನಿಂದ ಬಂದು ಇಲ್ಲಿ ಕಣಕ್ಕಿಳಿದವರೇ. ಜೇಕಬ್ ಕೇರಳದವರಾದರೆ, ಮೂರು ಬಾರಿ ಗೆದ್ದಿದ್ದ ಪಿ.ಸಿ. ಸಿದ್ದನಗೌಡರ ಹಾಗೂ ಎರಡು ಬಾರಿ ಗೆದ್ದಿದ್ದ ಎಸ್.ಐ. ಚಿಕ್ಕನಗೌಡರ ಮೂಲತಃ ಹುಬ್ಬಳ್ಳಿಯವರಾಗಿದ್ದರು. ಆನಂತರ ಗೆದ್ದ ಸಂತೋಷ್ ಲಾಡ್ ಬಳ್ಳಾರಿಯ ಸಂಡೂರಿನವರು.

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಸಿ.ಎಂ. ಲಿಂಬಣ್ಣವರ ಮಾತ್ರ ಸ್ಥಳೀಯರಾಗಿದ್ದರು. ಸ್ಥಳೀಯರಿಗೇ ಟಿಕೆಟ್ ಕೊಡಬೇಕು ಎಂಬ ಒತ್ತಾಯ ಈ ಸಲ ಕ್ಷೇತ್ರದಲ್ಲಿ ಕೇಳಿಬಂದಿತ್ತಾದರೂ, ಈಗ ಎರಡೂ ಪ್ರಬಲ ಪಕ್ಷಗಳಿಂದ ಕಣದಲ್ಲಿರುವವರು ಹೊರಗಿನವರೇ.

ಕಾಂಗ್ರೆಸ್ ಬಲ

ಈಚಿನ ಚುನಾವಣೆಗಳನ್ನು ಗಮನಿಸಿದರೆ ಕಲಘಟಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹಣಾಹಣಿಯ ಅಖಾಡವಾಗಿ ಮಾರ್ಪಟ್ಟಿರುವುದು ಸ್ಪಷ್ಟ. ಈ ಪೈಪೋಟಿಯಲ್ಲಿ ಕಾಂಗ್ರೆಸ್ ಪಾಲಿಗೆ ಬಲ ಬಂದಿದ್ದು ಸಂತೋಷ್ ಲಾಡ್ ಅವರಿಂದ. ಸಂಡೂರು ಮೀಸಲು ಕ್ಷೇತ್ರವಾದ ಬಳಿಕ ಲಾಡ್ ತಮ್ಮ ಮರಾಠ ಸಮುದಾಯದ ಪ್ರಾಬಲ್ಯವಿರುವ ಕಲಘಟಗಿಯನ್ನು ಆರಿಸಿಕೊಂಡರು. ಅವರ ಲೆಕ್ಕಾಚಾರ ತಪ್ಪಿರಲಿಲ್ಲ. ಎರಡು ಸತತ ಗೆಲುವುಗಳನ್ನು ಕಂಡರು. ಬಳಿಕ ವೈಯಕ್ತಿಕ ಸಮಸ್ಯೆಗಳಲ್ಲಿ ಸಿಲುಕಿ ಕ್ಷೇತ್ರದ ಕಡೆಗೆ ಸುಳಿಯದೆ ಉಳಿದರು. ಕ್ಷೇತ್ರ ನಿರ್ಲಕ್ಷಿಸಿದ ಆಪಾದನೆಗೆ ಒಳಗಾದರು. ಅದರ ಪರಿಣಾಮವಾಗಿ 2018ರಲ್ಲಿ ಸೋತರು. ಆದರೆ, ಸಿದ್ದರಾಮಯ್ಯ ಬೆಂಬಲ ಹೊಂದಿರುವ ಲಾಡ್ ಈ ಬಾರಿಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಪೈಪೋಟಿ

ಕಲಘಟಗಿ ಕಾಂಗ್ರೆಸ್‌ನಲ್ಲಿ ಕಳೆದ ಚುನಾವಣೆ ನಂತರ ಲಾಡ್ ಅವರದ್ದೊಂದು ಬಣವಾದರೆ, ಅವರಿಗೆ ಎದುರಾಳಿಯಾಗಿ ಓಡಾಡಿಕೊಂಡಿದ್ದ ನಾಗರಾಜ ಛಬ್ಬಿಯದ್ದೊಂದು ಬಣವಾಗಿತ್ತು. ಕಳೆದ ಚುನಾವಣೆಯಲ್ಲಿಯೇ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಛಬ್ಬಿಗೆ, ಸಂತೋಷ್ ಲಾಡ್‌ಗೆ ಮತ್ತೆ ಟಿಕೆಟ್ ನೀಡುವ ಬಗ್ಗೆ ತೀವ್ರ ಅಸಮಾಧಾನವಿತ್ತು. ಈ ಬಾರಿ ತನಗೇ ಟಿಕೆಟ್ ಸಿಗಲಿದೆ ಎಂದು ಹೇಳಿಕೊಂಡಿದ್ದೂ ಆಗಿತ್ತು. ಡಿ.ಕೆ. ಶಿವಕುಮಾರ್ ಬೆಂಬಲ ಇದ್ದುದೂ ಅದಕ್ಕೊಂದು ಕಾರಣವಾಗಿದ್ದಿರಬಹುದು. ಆದರೆ, ಲಾಡ್‌ಗೆ ಟಿಕೆಟ್ ಸಿಗುತ್ತಿದ್ದಂತೆ ಕಾಂಗ್ರೆಸ್ ತೊರೆದ ಛಬ್ಬಿ, ಕಮಲ ಹಿಡಿದರು. ಕಡೆಗೆ ಅಲ್ಲಿಂದ ಟಿಕೆಟ್ ಕೂಡ ಸಿಕ್ಕಿಯೇ ಬಿಟ್ಟಿತು.

ಕಳೆದ ಬಾರಿ ಬಿಜೆಪಿಯಿಂದ ಗೆದ್ದಿದ್ದ ನಿಂಬಣ್ಣವರ ಅವರಿಗೆ ಇದರಿಂದ ಬೇಸರವಾಗಿದೆಯೆಂಬುದು ಸ್ಪಷ್ಟ. ಅದನ್ನವರು ಬಹಿರಂಗವಾಗಿ ಹೇಳಿಕೊಂಡದ್ದೂ ಆಗಿದೆ. ಆದರೆ ತಮ್ಮ ಕ್ಷೇತ್ರದವರೇ ಅಭ್ಯರ್ಥಿಯಾಗಬೇಕೆಂದು ಜನ ಪಟ್ಟುಹಿಡಿದು ಗೆಲ್ಲಿಸಿದ್ದರೂ ನಿಂಬಣ್ಣವರ ಅವರಿಂದ ಜನರಿಗೆ ಯಾವ ಉಪಯೋಗವೂ ಆಗಲಿಲ್ಲ ಎಂಬ ದೂರುಗಳಿದ್ದವು. ನಿಂಬಣ್ಣವರ ಬಗ್ಗೆ ಮತದಾರರಿಗಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರಿಗೂ ಅಸಮಾಧಾನವಿತ್ತು. ಕ್ಷೇತ್ರದವರೇ ಆಗಿರುವುದರಿಂದ ತಮ್ಮ ಆಶೋತ್ತರಗಳಿಗೆ ಸ್ಪಂದಿಸಬಹುದೆಂದು ಭಾವಿಸಿದ್ದು ಸುಳ್ಳಾಗಿತ್ತು. ಜನರ ಕೈಗೆ ಸಿಗದಂತಾ ಗಿದ್ದ ಅವರಿಗೆ ಟಿಕೆಟ್ ಕೊಡಕೂಡದೆಂಬ ಕೂಗು ಕೂಡ ಆಗಲೇ ಎದ್ದಿತ್ತು. ಹಾಗಿದ್ದೂ ಬೇರೆ ಸ್ಥಳೀಯ ಅಭ್ಯರ್ಥಿಯೊಬ್ಬ ಕಾಣದೆ ಇದ್ದ ಸ್ಥಿತಿಯಲ್ಲಿ ಕಾಂಗ್ರೆಸ್‌ನ ಛಬ್ಬಿ ಸೇರ್ಪಡೆ ಬಿಜೆಪಿಗೆ ಬಲವಾದಂತಾಯಿತು.

ಇನ್ನು ಜೆಡಿಎಸ್ ಆಟಕ್ಕೆ ಇಲ್ಲಿ ನೆಲೆಯೇ ಇಲ್ಲ ಎಂದೇ ಹೇಳಲಾಗುತ್ತದೆ. ಬೇರೆ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ನಿಜವಾದ ಆಟ ಇರುವುದು ಕೈ-ಕಮಲಗಳ ನಡುವೆಯೇ.

ಜನರ ಕಷ್ಟ ಕೇಳುವವರಿಲ್ಲ

ಸಮುದ್ರದಲ್ಲಿದ್ದೂ ಉಪ್ಪಿಗೆ ಬರ ಅನ್ನೋ ಸ್ಥಿತಿ ಕಲಘಟಗಿ ಕ್ಷೇತ್ರದ ಜನರದ್ದು. ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಕೇವಲ 25 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ಧಾರವಾಡದಿಂದ 32 ಕಿ.ಮೀ. ದೂರದಲ್ಲಿ ಕಲಘಟಗಿಯಿದೆ. ಇನ್ನು ಅಳ್ನಾವರ ಇರುವುದು ಧಾರವಾಡದಿಂದ ಬರೀ 29 ಕಿ.ಮೀ. ಅಂತರದಲ್ಲಿ. ಆದರೆ ಈ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಗ್ರಹಣ ಹಿಡಿದಿದೆ. ತೀರಾ ಹಿಂದುಳಿದ ಪ್ರದೇಶವೆಂದು ಪರಿಗಣಿಸಲ್ಪಟ್ಟಿರುವ ಈ ಎರಡೂ ತಾಲೂಕುಗಳಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಕುಡಿಯುವ ನೀರು, ಸಾರಿಗೆ, ಆರೋಗ್ಯ, ಶಿಕ್ಷಣ, ವಸತಿಯಂಥ ಅತ್ಯಗತ್ಯ ಸವಲತ್ತುಗಳನ್ನೂ ಕಾಣದೆ ಕೂತಿದೆ ಈ ಕ್ಷೇತ್ರ. ಅಳ್ನಾವರವಂತೂ ಪೂರ್ಣಪ್ರಮಾಣದ ತಾಲೂಕು ಕೇಂದ್ರವಾಗದೆ ಜನಸಾಮಾನ್ಯರು ಪರದಾಡುವಂತಾಗಿದೆ ಎಂಬುದು ಇಲ್ಲಿ ಕೇಳಿಬರುತ್ತಿರುವ ಅಳಲು. ಆದರೆ ಜನಪ್ರತಿನಿಧಿಗಳಿಗೆ ಮಾತ್ರ ಇದಾವುದೂ ಕೇಳಿಸುವುದೇ ಇಲ್ಲ.

ಇದೆಲ್ಲದರ ನಡುವೆಯೇ ಮತ್ತೆ ಚುನಾವಣೆ ಬಂದಿದೆ.  ಯಥಾಪ್ರಕಾರ ರಾಜಕೀಯ ಜಿದ್ದಾಜಿದ್ದಿಯೇ ಮುಖ್ಯವಾಗಿದೆ. ಯಾರು ಗೆದ್ದರೂ ತಮ್ಮ ಬವಣೆ ನೀಗದು ಎಂದುಕೊಂಡಿರುವ ಮತದಾರರ ತೀರ್ಮಾನ ಏನಿರಲಿದೆ ಎಂಬುದು ಕುತೂಹಲದ ವಿಚಾರವಾಗಿದೆ.

share
ಎ.ಪಿ.ಎಸ್.
ಎ.ಪಿ.ಎಸ್.
Next Story
X