ಶಿವಮೊಗ್ಗದ ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ: ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಶಿವಮೊಗ್ಗದಲ್ಲಿ ಬಿಜೆಪಿಯು ಆಯೋಜಿಸಿದ್ದ ತಮಿಳು ಸಮಾಜದ ಸಮಾವೇಶದಲ್ಲಿ ತಮಿಳು ನಾಡಗೀತೆ ಹಾಡು ಪ್ರಸಾರವಾಗಿರುವ ಘಟನೆ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಸಹ ಉಸ್ತುವಾರಿ ಹಾಗೂ ತಮಿಲು ನಾಡು ಬೆಜೆಪಿ ಘಟಕದ ಅಧ್ಯಕ್ಷರೂ ಆಗಿರುವ ಅಣ್ಣಾಮಲೈ ಅವರು ಪಾಲ್ಗೊಂಡಿದ್ದರು.
ಇನ್ನು ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರವಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ಕಾಂಗ್ರೆಸ್, 'ಅಣ್ಣಾಮಲೈ ಅವರನ್ನು ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ' ಎಂದು ಕಿಡಿಕಾರಿದೆ.
ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧದ ನಿಲುವು ಹೊಂದಿದ್ದ ಅಣ್ಣಾಮಲೈ ಅವರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಬಿಜೆಪಿ ಕನ್ನಡಿಗರ ಸ್ವಾಭಿಮಾನವನ್ನು ಅಣಕವಾಡಿದೆ. ಈಗ ಅಣ್ಣಾಮಲೈ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ. ಬಿಜೆಪಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದೇಕೆ?'' ಎಂದು ಪ್ರಶ್ನೆ ಮಾಡಿದೆ.
ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧದ ನಿಲುವು ಹೊಂದಿದ್ದ ಅಣ್ಣಾಮಲೈ ಅವರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಬಿಜೆಪಿ ಕನ್ನಡಿಗರ ಸ್ವಾಭಿಮಾನವನ್ನು ಅಣಕವಾಡಿದೆ.
— Karnataka Congress (@INCKarnataka) April 27, 2023
ಈಗ ಅಣ್ಣಾಮಲೈ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ.
ಬಿಜೆಪಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದೇಕೆ? pic.twitter.com/uvsT2IiJM1







