ಚುನಾವಣೆ ಮುಗಿಯುವವರೆಗೂ ಗಣ್ಯರ ಬೆಂಗಾವಲು ವಾಹನಗಳಿಗೆ ಟಾಪ್ ಲೈಟ್ ಹಾಗೂ ಸೈರನ್ ಬಳಸದಂತೆ ಸುತ್ತೋಲೆ

ಬೆಂಗಳೂರು, ಎ.27: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಗಣ್ಯರ ಕಾರುಗಳ ಮುಂಗಾವಲು ಹಾಗೂ ಬೆಂಗಾವಲು ವಾಹನಗಳಿಗೆ ಟಾಪ್ ಲೈಟ್ ಹಾಗೂ ಸೈರನ್ ಬಳಸದಂತೆ ತಮ್ಮ ಸಿಬ್ಬಂದಿಗೆ ನಗರ ಸಿಎಆರ್ ಕೇಂದ್ರ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಸುತ್ತೋಲೆ ಹೊರಡಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ವಿವಿಧ ಗಣ್ಯರ ಮುಂಗಾವಲು ಹಾಗೂ ಬೆಂಗಾವಲು ವಾಹನಗಳಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುವವರು ಟಾಪ್ ಲೈಟ್ ಹಾಗೂ ಸೈರನ್ ಶಬ್ಧ ಬಳಸಬಾರದು. ಚುನಾವಣೆ ನಿಯಮದನ್ವಯ ಸೈರನ್ ಬಳಸದಂತೆ ಸೂಚಿಸಿದೆ.
ಚುನಾವಣೆ ಮುಗಿಯುವವರೆಗೂ ಚಾಲಕ ಅಥವಾ ಅಧಿಕಾರಿಗಳಾಗಲಿ ಸೈರನ್ ಬಳಸುವಂತಿಲ್ಲ. ಒಂದು ವೇಳೆ ಚುನಾವಣಾ ನಿಯಮ ಉಲ್ಲಂಘಿಸಿದರೆ ಅಂತಹ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಅವರು ಉಲ್ಲೇಖ ಮಾಡಿದ್ದಾರೆ.
Next Story