ದ.ಕ. ಜಿಲ್ಲೆಯ ಮತದಾರರ ಪಟ್ಟಿಗೆ 43,701 ಮಂದಿ ಸೇರ್ಪಡೆ

ಮಂಗಳೂರು, ಎ.27: ದ.ಕ ಜಿಲ್ಲೆಯಲ್ಲಿ 43,701 ಹೊಸ ಮತದಾರರ ಸೇರ್ಪಡೆಯಾಗಿರುವುದನ್ನು ಅಂಕಿ ಅಂಶಗಳಿಂದ ತಿಳಿಯಬಹುದಾಗಿದೆ.
ಚುನಾವಣಾ ಆಯೋಗದ ಪ್ರಕಾರ 2023ರ ಜನವರಿ 5ಕ್ಕೆ ದ.ಕ ಜಿಲ್ಲೆಯಲ್ಲಿ 17,37,688 (8,50,552 ಪುರುಷ ಮತ್ತು 8,87,060 ಮಹಿಳಾ ಮತದಾರರು) ಮತದಾನದ ಅವಕಾಶ ಪಡೆದಿದ್ದರು. ಬಳಿಕ ಚುನಾವಣಾ ಆಯೋಗವು ಎ.11ರವರೆಗೆ ಪಟ್ಟಿಯಲ್ಲಿ ಹೆಸರು ಸೇರಿಸಲು ಕಾಲಾವಕಾಶ ನೀಡಿತ್ತು. ಅದರಂತೆ 43,701 ಹೊಸ ಮತದಾರರ ಸೇರ್ಪಡೆಯಾಗಿದೆ. ಹಾಗಾಗಿ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ದ.ಕ ಜಿಲ್ಲೆಯಲ್ಲಿ 17,81,389 (8,70,991 ಪುರುಷ ಮತ್ತು 9,10,314 ಮಹಿಳೆಯರು) ಅವಕಾಶ ಪಡೆದಿದ್ದಾರೆ.
ಚುನಾವಣೆ ಘೋಷಣೆಗೂ ಮುನ್ನ ಬೆಳ್ತಂಗಡಿಯಲ್ಲಿ 2,22,144 ಮತದಾರರಿದ್ದರೆ ಈಗ 2,28,871ಕ್ಕೇರಿದೆ. ಮೂಡುಬಿದಿರೆಯಲ್ಲಿ 2,00,303 ಮತದಾರರಿದ್ದುದು ಪ್ರಸ್ತುತ 2,05,065ಕ್ಕೇರಿದೆ. ಮಂಗಳೂರು ಉತ್ತರದಲ್ಲಿ 2,42,186 ಇದ್ದುದು, ಪ್ರಸ್ತುತ 2,49,421 ಕ್ಕೇರಿದೆ. ಮಂಗಳೂರು ನಗರ ದಕ್ಷಿಣದಲ್ಲಿ 2,39,905 ಇದ್ದುದು ಈಗ 2,45,744ಕ್ಕೇರಿದೆ.
ಮಂಗಳೂರು ಕ್ಷೇತ್ರದಲ್ಲಿ 2,00,001 ಇದ್ದುದು ಈಗ 2,05,129ಕ್ಕೇರಿದೆ. ಬಂಟ್ವಾಳದಲ್ಲಿ 2,22,901 ಇದ್ದುದು ಈಗ 2,28,377 ಕ್ಕೇರಿದೆ. ಪುತ್ತೂರಿನಲ್ಲಿ 2,08,275 ಇದ್ದುದು ಈಗ 2,12,753ಕ್ಕೇರಿದೆ. ಸುಳ್ಯದಲ್ಲಿ 2,01,976 ಇದ್ದುದು ಪ್ರಸ್ತುತ 2,06,029 ಕ್ಕೇರಿದೆ.
ಹೊಸ ಮತದಾರರ ಸಂಖ್ಯೆ
ಬೆಳ್ತಂಗಡಿ - 6,727
ಮೂಡುಬಿದಿರೆ - 4,762
ಮಂಗಳೂರು ಉತ್ತರ - 7,235
ಮಂಗಳೂರು ದಕ್ಷಿಣ - 5,339
ಮಂಗಳೂರು - 5,128
ಬಂಟ್ವಾಳ - 5,476
ಪುತ್ತೂರು - 4,481
ಸುಳ್ಯ 4,053