ಜೈವಿಕ ವಿಘಟನೀಯ ಊಟದ ಬಟ್ಟಲು ತಯಾರಿಸುವ ಯಂತ್ರ ಆವಿಷ್ಕಾರ

ಶಿರ್ವ: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿನೂತನ ಮಾದರಿಯ ಜೈವಿಕ ವಿಘಟನೀಯ ಊಟದ ಬಟ್ಟಲುಗಳನ್ನು ತಯಾರಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಬಾಳೆಎಲೆ ಅಥವಾ ಅಡಿಕೆ ಹಾಳೆಯಿಂದ ಮಾಡಲ್ಪಟ್ಟ ಬಟ್ಟಲುಗಳು ಲ್ಯವಿದೆ. ಆದರೆ ಹರಿದ ಅಥವಾ ತುಂಡಾದ ಎಲೆ ಗಳನ್ನು ಈ ರೀತಿ ಬಟ್ಟಲುಗಳಾಗಿ ಉಪಯೋಗಿಸಲು ಬರುವುದಿಲ್ಲ. ಇದನ್ನು ಮನಗಂಡ ವಿದ್ಯಾರ್ಥಿಗಳು ಹರಿದ ಮತ್ತು ತುಂಡಾದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಖಾದ್ಯ ಅಂಟು ಪದಾರ್ಥಗಳನ್ನು ಸೇರಿಸಿ ಜೈವಿಕ ವಿಘಟನೀಯ ತಟ್ಟೆಗಳನ್ನು ಅಭಿವೃದ್ದಿ ಪಡಿಸಿದ್ದಾರೆ.
ಈಗಾಗಲೇ ಈ ಯಂತ್ರವನ್ನು ಉಪಯೋಗಿಸಿ ಒಣಗಿದ ಅನಾನಸ್ ಹಣ್ಣಿನ ಎಲೆ, ಮರದ ಧೂಳು, ಭತ್ತದ ಹೊಟ್ಟಿನಿಂದ ಉತ್ತಮ ಗುಣಮಟ್ಟದ ಊಟದ ಬಟ್ಟಲುಗಳನ್ನು ತಯಾರಿಸಿದ್ದಾರೆ. ಕಾಲೇಜಿನ ಡೀನ್ ಮತ್ತು ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ಸುದರ್ಶನ್ ರಾವ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶೇಷಗಿರಿ ಪೈ, ಪ್ರತೀಕ್ ಅಂಬಲಪಾಡಿ, ಚಂದನ್ ನೆಲ್ಲಿ ಎಂ.ಕೆ ಮತ್ತು ಪೃಥ್ವಿರಾಜ್ ಮಾಡಿರುವ ಈ ಪ್ರಾಜೆಕ್ಟ್‌ಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಇವರಿಂದ ಅನುದಾನ ದೊರೆತಿದೆ.







