ಪದವಿನಂಗಡಿ: ಕಾರು ಢಿಕ್ಕಿ ಪಾದಚಾರಿ ಮೃತ್ಯು

ಮಂಗಳೂರು: ನಗರದ ಪದವಿನಂಗಡಿ ಸಮೀಪದ ಪೆರ್ಲಗುರಿ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಅಡಾಲ್ಫ್ ರೋಡ್ರಿಗಸ್ (69) ಎಂಬವರು ಕಾರು ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವುದಾಗಿ ವರದಿಯಾಗಿದೆ.
ನಗರದ ಕೆಪಿಟಿ-ಪದವಿನಂಗಡಿ ಮುಖ್ಯ ರಸ್ತೆಯಿಂದ ಪೆರ್ಲಗುರಿಯತ್ತ ತೆರಳುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಡಾಲ್ಫ್ ರೋಡ್ರಿಗಸ್‌ಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಅವರ ಕಾಲಿನ ಮೇಲೆಯೇ ಕಾರಿನ ಎಡಬದಿಯ ಚಕ್ರವು ಹರಿದಿದೆ. ತಕ್ಷಣ ಅದೇ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಕಾರು ಚಾಲಕ ಸುಮಂತ್ ವಿರುದ್ಧ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story