ತುಂಬೆ: ಹಾಜಿ ವಿ. ಅಬ್ದುಲ್ ರಹ್ಮಾನ್ ನಿಧನ

ಮಂಗಳೂರು : ತುಂಬೆ ವಳವೂರು ನಿವಾಸಿ, ಬಿ.ಸಿ.ರೋಡ್‌ನ ಕೆನರಾ ವುಡ್ ಇಂಡಸ್ಟ್ರೀಸ್ ಮಾಲಕ ಹಾಜಿ ವಿ. ಅಬ್ದುಲ್ ರಹ್ಮಾನ್ (88) ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
‘ಮೋನು ಹಾಜಿ’ ಎಂದೇ ಆತ್ಮೀಯ ವಲಯದಲ್ಲಿ ಚಿರಪರಿಚಿತರಾಗಿದ್ದ ಇವರು ವಳವೂರು ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರ ದಫನ ಕಾರ್ಯವು ಶುಕ್ರವಾರ ಪೂರ್ವಾಹ್ನ 11.30ರ ಸುಮಾರಿಗೆ ವಳವೂರು ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story