Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಮನ್ ಕಿ ಬಾತ್'ನ 100ನೇ ಸಂಚಿಕೆಯ...

'ಮನ್ ಕಿ ಬಾತ್'ನ 100ನೇ ಸಂಚಿಕೆಯ ಪ್ರಸಾರದ ಮುನ್ನ ಅಬ್ಬರದ ಪ್ರಚಾರ, ಆದರೆ ಶೇ.60ರಷ್ಟು ಜನರು ಎಂದೂ ಅದನ್ನು ಆಲಿಸಿಲ್ಲ!

ಮೀತು ಜೈನ್- thewire.inಮೀತು ಜೈನ್- thewire.in27 April 2023 10:58 PM IST
share
ಮನ್ ಕಿ ಬಾತ್ನ 100ನೇ ಸಂಚಿಕೆಯ ಪ್ರಸಾರದ ಮುನ್ನ ಅಬ್ಬರದ ಪ್ರಚಾರ, ಆದರೆ ಶೇ.60ರಷ್ಟು ಜನರು ಎಂದೂ ಅದನ್ನು ಆಲಿಸಿಲ್ಲ!

ಹೊಸದಿಲ್ಲಿ: ರವಿವಾರ, ಎ.30ರಂದು ಪ್ರಸಾರವಾಗಲಿರುವ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್ ’ಗೆ ಶ್ರೋತೃಗಳನ್ನು ಸೆಳೆಯಲು ಸರಕಾರವು ಅಬ್ಬರದ ಪ್ರಚಾರ ನಡೆಸುತ್ತಿದೆ, ಇದಕ್ಕಾಗಿ ಅದರ ಸಮಯ ಮತ್ತು ಸಾರ್ವಜನಿಕರ ಹಣ ಬಳಕೆಯಾಗುತ್ತಿದೆ. ಆದರೆ ಈ ದೇಶದ ಶೇ.60ರಷ್ಟು ಜನರು 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಒಮ್ಮೆಯೂ ಆಲಿಸಿಲ್ಲ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸ್ಟಡೀಸ್ (ಸಿಎಸ್ಡಿಎಸ್ ) ನಡೆಸಿರುವ ಅಧ್ಯಯನವು ಈ ಕಟುಸತ್ಯವನ್ನು ಬಹಿರಂಗಗೊಳಿಸಿದೆ ಎಂದು thewire.in ವರದಿ ಮಾಡಿದೆ.

ಪ್ರಚಾರದ ಅಂಗವಾಗಿ ಇತ್ತೀಚಿಗೆ ದಿಲ್ಲಿಯ ವಿಜ್ಞಾನ ಭವನದಲ್ಲಿ ಸಮಾವೇಶವೊಂದನ್ನು ಆಯೋಜಿಸಲಾಗಿದ್ದು,ವಿವಿಧ ಕ್ಷೇತ್ರಗಳ ಆಹ್ವಾನಿತ 100ಕ್ಕೂ ಅಧಿಕ ಗಣ್ಯರು ಸೇರಿದಂತೆ ಮನ್ ಕಿ ಬಾತ್ ನಿಂದ ‘ಪ್ರೇರಣೆ’ ಪಡೆದಿದ್ದ ಹಲವರು ಅಲ್ಲಿ ಸೇರಿದ್ದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ತಾನೆಂದೂ ಮನ್ ಕಿ ಬಾತ್ ನ ಒಂದೇ ಒಂದು ಸಂಚಿಕೆಯನ್ನು ತಪ್ಪಿಸಿಕೊಂಡಿಲ್ಲ ಎಂದು ಹೇಳಿಕೊಂಡರು. ಧನಕರ್ ಖಂಡಿತವಾಗಿಯೂ ಪ್ರತಿ ತಿಂಗಳೂ ಮೋದಿಯವರ ರೇಡಿಯೋ ಕಾರ್ಯಕ್ರಮವನ್ನು ಆಲಿಸುತ್ತಿರುವ ಶೇ.5ರಷ್ಟು ಭಾರತೀಯರಲ್ಲಿ ಸೇರಿರಬೇಕು.

ಗೌರವಾನ್ವಿತ ಸಮಾಜ ವಿಜ್ಞಾನಿಗಳಾದ ಸಂಜಯ್ ಕುಮಾರ, ಸುಹಾಸ‍ ಪಾಲ್ಶಿಕರ್ ಮತ್ತು ಸಂದೀಪ ಶಾಸ್ತ್ರಿ ಅವರನ್ನು ಸಲಹೆಗಾರರನ್ನಾಗಿ ಹೊಂದಿರುವ ಸಿಎಸ್ಡಿಎಸ್ ಕಳೆದ ನವಂಬರ್ ನಲ್ಲಿ ಬಿಡುಗಡೆಗೊಳಿಸಿದ ಅಧ್ಯಯನ ವರದಿಯು, ದೇಶದ ಶೇ. 60ರಷ್ಟು ಜನರು ಪ್ರಧಾನಿಯವರ ರೇಡಿಯೊ ಭಾಷಣವನ್ನು ಎಂದಿಗೂ ಆಲಿಸಿಲ್ಲ. ಅದನ್ನು ಅತ್ಯಂತ ಕಡಿಮೆ ಸಂಖ್ಯೆಯ ಶ್ರೋತೃಗಳು ಆಲಿಸುತ್ತಿದ್ದಾರೆ. ದಕ್ಷಿಣ ಭಾರತೀಯರಂತೂ ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿ ಮನ್ ಕಿ ಬಾತ್ ಅನ್ನು ಆಲಿಸಿರುವ ಸಾಧ್ಯತೆಯಿದೆ, ಬಹುಶಃ ಮೋದಿಯವರ ಭಾಷಣವು ಹಿಂದಿ ಭಾಷೆಯಲ್ಲಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅದನ್ನು ಬಿಡಿ, ಹಿಂದು ಭಾಷಿಕ ರಾಜ್ಯಗಳಲ್ಲಿಯೂ ಮನ್ ಕಿ ಬಾತ್ ನ ಜನಪ್ರಿಯತೆ /ಆಲಿಸುವಿಕೆಯು ಕಡಿಮೆಯೇ ಇದೆ. ಟಿವಿ, ಇಂಟರ್ನೆಟ್, ಸ್ಟೀರಿಯೊ ಇತ್ಯಾದಿಗಳಿರುವ ಕುಟುಂಬಗಳೂ ಪ್ರಧಾನಿ ಭಾಷಣವನ್ನು ಕೇಳುವ ಆಸಕ್ತಿಯನ್ನು ಹೊಂದಿಲ್ಲ. ಕಳೆದೊಂದು ವರ್ಷದಲ್ಲಿ ಇಂತಹ ಶೇ.40ರಷ್ಟು ಕುಟುಂಬಗಳು ಮನ್ ಕಿ ಬಾತ್ ಅನ್ನು ಆಲಿಸುವ ಗೋಜಿಗೆ ಹೋಗಿಲ್ಲ ಮತ್ತು ಪ್ರತಿ 10 ಕುಟುಂಬಗಳ ಪೈಕಿ ಮೂರು ಒಂದೋ ಅಥವಾ ಎರಡು ಬಾರಿ ಅದನ್ನು ಆಲಿಸಿವೆ ಎನ್ನುವುದನ್ನು ಬಹಿರಂಗಗೊಳಿಸಿದೆ.

ಇಷ್ಟೇ ಅಲ್ಲ, ಬಿಜೆಪಿಯ ಬಗ್ಗೆ ಒಲವು ಹೊಂದಿರುವವರಲ್ಲಿ ಅರ್ಧಕ್ಕೂ ಹೆಚ್ಚಿನ ಜನರು ಪ್ರಧಾನಿಯವರ ಮನ ಕಿ ಬಾತ್ ಅನ್ನು ಆಲಿಸುತ್ತಿದ್ದಾರೆ ಎನ್ನುವುದು ಕಂಡುಬಂದಿಲ್ಲ ಎಂದೂ ವರದಿಯು ಹೇಳಿದೆ. 

ಸಿಎಸ್ಡಿಎಸ್ ವರದಿಯಂತೆ ವಾಯುವ್ಯ ಭಾರತ ಮತ್ತು ಪೂರ್ವ ಭಾರತದಲ್ಲಿ ಶೇ.63ರಷ್ಟು ಜನರು ಎಂದಿಗೂ ಮನ್ ಕಿ ಬಾತ್ ಅನ್ನು ಆಲಿಸಿಲ್ಲ. ದಕ್ಷಿಣ ಭಾರತದಲ್ಲಿ ಇಂತಹವರ ಸಂಖ್ಯೆ ಶೇ.75ರಷ್ಟಿದ್ದರೆ ಹಿಂದಿಯೇತರ ರಾಜ್ಯಗಳಲ್ಲಿ ಶೇ.62ರಷ್ಟಿದೆ. ಬಿಜೆಪಿಯ ಭದ್ರವಾದ ಹಿಡಿತವಿರುವ ಹಿಂದಿ ಭಾಷಿಕ ರಾಜ್ಯಗಳ ಕನಿಷ್ಠ ಶೇ.50ರಷ್ಟು ಮತ್ತು ಉತ್ತರ ಭಾರತದ ಶೇ.54ರಷ್ಟು ಜನರು 'ಮನ್ ಕಿ ಬಾತ್' ಅನ್ನು ಆಲಿಸಿಲ್ಲ.

ಪ್ರಧಾನಿಯವರ ರೇಡಿಯೊ ಕಾರ್ಯಕ್ರಮಕ್ಕೆ ಅಬ್ಬರದ ಪ್ರಚಾರವನ್ನು ನೀಡಲಾಗುತ್ತಿದೆ. ಮನ್ ಕಿ ಬಾತ್ ನ 100ನೇ ಸಂಚಿಕೆಯ ಸ್ಮರಣಾರ್ಥ 100 ರೂ. ನಾಣ್ಯಗಳನ್ನು ಟಂಕಿಸಲಾಗುತ್ತಿದೆ. ನಿರಂತರವಾಗಿ ಅದರ ಬಗ್ಗೆ ಮಾತನಾಡಲಾಗುತ್ತಿದೆ,ಒಟಿಟಿಗಳಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರ ಹೇಳಿಕೆಗಳು,ಜೊತೆಗೆ ಸಂಪುಟದ ಸಚಿವರು ಗಮನವಿಟ್ಟು ಮನ್ ಕಿ ಬಾತ್ ಅನ್ನು ಆಲಿಸುತ್ತಿರುವ ಚಿತ್ರಗಳೂ ಹರಿದಾಡುತ್ತಿವೆ. ಮನ್ ಕಿ ಬಾತ್ ಗೆ ಹೆಚ್ಚಿನ ಸ್ವೀಕೃತಿ ಇಲ್ಲದಿರುವುದು ಇವುಗಳನ್ನು ಅಗತ್ಯವಾಗಿಸಿರಬಹುದು.

ಈ ನಡುವೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮನ್ ಕಿ ಬಾತ್ ನ 100ನೇ ಸಂಚಿಕೆಯನ್ನು ಪ್ರಸಾರ ಮಾಡುವಂತೆ ದೇಶದಲ್ಲಿಯ ಎಲ್ಲ ಸಮುದಾಯ ರೇಡಿಯೊ ಕೇಂದ್ರಗಳಿಗೆ ತಾಕೀತು ಮಾಡಿದೆ. ಅಷ್ಟೇ ಅಲ್ಲ,ಪ್ರಸಾರ ಮಾಡಿರುವ ಬಗ್ಗೆ ಪುರಾವೆಗಳನ್ನು ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.

ಟಿವಿ, ಇಂಟರ್ನೆಟ್ ಇತ್ಯಾದಿಗಳಿರುವ ಕುಟುಂಬಗಳಲ್ಲಿ ಪ್ರಧಾನಿಯವರ ಕಾರ್ಯಕ್ರಮಕ್ಕೆ ತುಲನಾತ್ಮಕವಾಗಿ ಉತ್ತಮ ಸ್ಪಂದನವಿದೆ. ಈ ವರ್ಗದ ಕನಿಷ್ಠ ಶೇ.9ರಷ್ಟು ಜನರು ಹೆಚ್ಚುಕಡಿಮೆ ಪ್ರತಿ ತಿಂಗಳು ಮನ್ ಕಿ ಬಾತ್ ಆಲಿಸಿದ್ದಾರೆ ಎನ್ನುವುದು ಸರಕಾರಕ್ಕೆ ಸಮಾಧಾನವನ್ನುಂಟು ಮಾಡಬಹುದು. ಶೇ.30ರಷ್ಟು ಜನರು ಈವರೆಗೆ ಪ್ರಸಾರಗೊಂಡಿರುವ 99 ಸಂಚಿಕೆಗಳ ಪೈಕಿ ಕನಿಷ್ಠ ಒಂದು ಅಥವಾ ಎರಡನ್ನು ಆಲಿಸಿದ್ದಾರೆ.

ಸಿಎಸ್ಡಿಎಸ್ ವರದಿಯು ಕಂಡುಕೊಂಡಿರುವ ಅಂಶಗಳಿಗೂ ಪ್ರಸಾರ ಭಾರತಿಯ ಸಿಇಒ ಗೌರವ ದ್ವಿವೇದಿಯವರು ಮಂಗಳವಾರ ಬಿಡುಗಡೆಗೊಳಿಸಿದ ಐಐಎಂ-ರೋಹ್ಟಕ್ನ ವರದಿಗೂ ವ್ಯತ್ಯಾಸಗಳಿವೆ. ಈ ಸರಕಾರಿ ವರದಿಯಂತೆ ಮನ್ ಕಿ ಬಾತ್ ಆರಂಭಗೊಂಡಾಗಿನಿಂದಲೂ 100 ಕೋ.ಗೂ.ಹೆಚ್ಚು ಜನರು ಅದನ್ನು ಆಲಿಸಿದ್ದಾರೆ. 23 ಕೋ.ಜನರು ನಿಯಮಿತವಾಗಿ ಆಲಿಸುತ್ತಿದ್ದಾರೆ. ಆದರೆ ಇಂತಹವರ ಶೇಕಡಾವಾರು ಪ್ರಮಾಣವನ್ನು ಅದು ತಿಳಿಸಿಲ್ಲ. ಮನ್ ಕಿ ಬಾತ್ ಜನರ ಮೇಲೆ ಪ್ರಭಾವ ಬೀರಿದೆ ಎಂದೂ ಅದು ಹೇಳಿಕೊಂಡಿದೆ.

ಕೃಪೆ: thewire.in

share
ಮೀತು ಜೈನ್- thewire.in
ಮೀತು ಜೈನ್- thewire.in
Next Story
X