ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಬಿಜೆಪಿ ಸರಕಾರ ವಿಫಲ: ಪ್ರಸಾದ್‌ರಾಜ್ ಕಾಂಚನ್

ಉಡುಪಿ : ಉಡುಪಿಗೆ ಬಿಜೆಪಿ ಸರಕಾರ ಸರಿಯಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಒಳಚರಂಡಿ ನೀರು ಬಾವಿಗೆ ಸೇರಿ ಬಾವಿ ಕೆಟ್ಟು ಹೋಗುತ್ತಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಆರೋಪಿಸಿದ್ದಾರೆ.
ಉಡುಪಿ ನಗರ ಭಾಗದ ಕರಂಬಳ್ಳಿ, ಕಡಿಯಾಳಿ, ಕುಂಜಿಬೆಟ್ಟು, ಬನ್ನಂಜೆ, ಶಿರಿಬೀಡು ಇತ್ಯಾದಿ ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತಾಡಿ, ಕಾಂಗ್ರೆಸ್ ಸರಕಾರ ಬಂದರೆ ಖಂಡಿತವಾಗಿಯೂ ಮಹಿಳೆಯರಿಗೆ ಮಾಸಿಕ 2000 ರೂ., ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಇತರ ಗ್ಯಾರಂಟಿಗಳನ್ನು ನೀಡಲಿದೆ ಎಂದು ತಿಳಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ಮಾತಾಡಿ, ಬಿಜೆಪಿ ಸರಕಾರ ಮಾಡಿದ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನವು ನರಕ ಸದೃಶವಾಗಿದೆ. ಮಾಡಾಳ್ ವಿರೂಪಾಕ್ಷನಂತಹ ಬಿಜೆಪಿ ಶಾಸಕರು ಕೋಟಿ ಕೋಟಿ ಲೂಟಿ ಮಾಡುವುದರಲ್ಲೇ ನಿರತರಾಗಿದ್ದಾರೆ. ಈ ಬಿಜೆಪಿ ಸರಕಾರ ಸಂವೇದನೆಯನ್ನೇ ಕಳೆದುಕೊಂಡಿದೆ ಎಂದರು
ಈ ಸಂದರ್ಭದಲ್ಲಿ ಮುಖಡರಾದ ಪ್ರಖ್ಯಾತ್ ಶೆಟ್ಟಿ, ಕುಶಲ ಶೆಟ್ಟಿ, ಮಹಾಬಲ ಕುಂದರ್, ದಿವಾಕರ್ ಕುಂದರ್, ಕೀರ್ತಿ ಶೆಟ್ಟಿ, ದಿನೇಶ್ ಪುತ್ರನ್, ಗಣೇಶ ನೇರ್ಗಿ, ಹಮ್ಮದ್, ಪ್ರಶಾಂತ್ ಪೂಜಾರಿ, ಸುರೇಶ್ ಶೆಟ್ಟಿ ಬನ್ನಂಜೆ, ರವಿರಾಜ್, ಮಮತಾ ಶೆಟ್ಟಿ, ಸರ್ವಜಿತ್, ನಾಸಿರ್, ಸುರೇಂದ್ರ ಆಚಾರ್ಯ, ಸುಕೇಶ್ ಕುಂದರ್, ಹರೀಶ್ ಕಿಣಿ, ಮಿಥುನ್ ಅಮೀನ್, ಯತೀಶ್ ಕರ್ಕೇರಾ, ಶರತ್ ಶೆಟ್ಟಿ, ಚಂದ್ರಮೋಹನ್, ಸದಾಶಿವ ಅಮೀನ್ ಕಟ್ಟೆಗುಡ್ಡೆ, ನಾಗೇಶ್ ಉದ್ಯಾವರ್, ಆನಂದ ಪೂಜಾರಿ, ಶ್ರೀನಿವಾಸ ಹೆಬ್ಬಾರ, ಸುಕೇಶ್ ಕುಂದರ್, ಸಂಜಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.