ಎ.29: ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್‌ಶೋ
ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ
ಮಂಗಳೂರು, ಎ.28: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎ.29ರಂದು ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದು, ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ. ಗೃಹ ಸಚಿವರ ಭದ್ರತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎ.29ರಂದು ಅಪರಾಹ್ನ 3ರಿಂದ ಸಂಜೆ 7ರವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. *ಉಡುಪಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳು ಕೊಟ್ಟಾರ ಚೌಕಿ, ಕೆಪಿಟಿ, ನಂತೂರು, ಶಿವಭಾಗ್, ಬೆಂದೂರ್‌ವೆಲ್, ಕರಾವಳಿ ಸರ್ಕಲ್, ಕಂಕನಾಡಿ ಸರ್ಕಲ್, ವೆಲೆನ್ಸಿಯಾ, ಮಂಗಳಾದೇವಿವರೆಗೆ ಸಂಚರಿಸುವುದು ಮತ್ತು ಅದೇ ಮಾರ್ಗವಾಗಿ ವಾಪಸ್ ಹೋಗುವುದು. *ತಲಪಾಡಿ ಮತ್ತು ಪಡೀಲ್ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ಬಸ್‌ಗಳು ಪಂಪ್‌ವೆಲ್, ಕರಾವಳಿ ಸರ್ಕಲ್, ಕಂಕನಾಡಿ ಸರ್ಕಲ್, ವೆಲೆನ್ಸಿಯಾ, ಮಂಗಳಾದೇವಿವರೆಗೆ ಸಂಚರಿಸುವುದು ಮತ್ತು ಅದೇ ಮಾರ್ಗವಾಗಿ ವಾಪಸ್ ಹೋಗುವುದು. *ತಲಪಾಡಿ ಮತ್ತು ಪಡೀಲ್ ಕಡೆಯಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಸರಕಾರಿ ಬಸ್‌ಗಳು ಪಂಪ್‌ವೆಲ್, ನಂತೂರು, ಕೆಪಿಟಿ, ಬಟ್ಟಗುಡ್ಡ, ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವುದು. *ಉಡುಪಿ ಕಡೆಯಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳು ಕೊಟ್ಟಾರ ಚೌಕಿ, ಕೆಪಿಟಿ, ಬಟ್ಟಗುಡ್ಡ, ಬಿಜೈ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವುದು. *ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಬಸ್‌ಗಳು ಬಿಜೈ-ಕುಂಟಿಕಾನ ಮೂಲಕ ಕೆಪಿಟಿ ಅಥವಾ ಕೊಟ್ಟಾರ ಚೌಕಿ ಕಡೆಗೆ ಸಂಚರಿಸವುದು. *ಕೊಟ್ಟಾರ ಚೌಕಿಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ಲಘು ವಾಹನಗಳು ಲೇಡಿಹಿಲ್-ಮಣ್ಣಗುಡ್ಡ-ಬಾಲಾಜಿ ಜಂಕ್ಷನ್ - ಬಂದರ್ ಮೂಲಕ ಮುಂದಕ್ಕೆ ಚಲಿಸುವುದು. *ಲಾಲ್‌ಬಾಗ್ ಕಡೆಯಿಂದ ಬಲ್ಮಠ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಬಿಜಿ ಸ್ಕೂಲ್-ಬೆಸೆಂಟ್ ಜಂಕ್ಷನ್-ಜೈಲ್ ರೋಡ್-ಕರಂಗಲ್ಪಾಡಿ-ಬಂಟ್ಸ್ ಹಾಸ್ಟೆಲ್ ಮಲ್ಲಿಕಟ್ಟೆ ಅಥವಾ ಪಿವಿಎಸ್- ಬಂಟ್ಸ್ ಹಾಸ್ಟೆಲ್-ಮಲ್ಲಿಕಟ್ಟೆಯಾಗಿ ಸಂಚರಿಸುವುದು. ವಾಹನ ಸಂಚಾರ ನಿಷೇಧಿತ ಮಾರ್ಗಗಳು ಮಂಗಳೂರು ಪುರಭವನ-ಕ್ಲಾಕ್‌ಟವರ್-ಕೆಬಿ ಕಟ್ಟೆ-ಹಂಪನಕಟ್ಟೆ-ಕೆಎಸ್ ರಾವ್ ರಸ್ತೆ-ನವಭಾರತ ವೃತ್ತ-ಪಿವಿಎಸ್‌ವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ಅಪರಾಹ್ನ 3ರಿಂದ ಸಂಜೆ 7ರವರೆಗೆ ಸಭಾ ಕಾರ್ಯಕ್ರಮಗಳಿಗೆ ಬರುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. (ತುರ್ತುಸೇವೆಯ ವಾಹನಗಳು ಈ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ) ರಾವ್ ಆ್ಯಂಡ್ ರಾವ್ ಸರ್ಕಲ್‌ನಿಂದ ಲೇಡಿಗೋಷನ್ ಆಸ್ಪತ್ರೆ ರಸ್ತೆ, ಸೆಂಟ್ರಲ್ ಮಾರ್ಕೆಟ್‌ನಿಂದ ಲೇಡಿಗೋಷನ್ ಆಸ್ಪತ್ರೆ ರಸ್ತೆ, ಸೆಂಟ್ರಲ್ ಮಾರ್ಕೆಟ್‌ನೀಂದ ಕ್ಲಾಕ್ ಟವರ್ ರಸ್ತೆ, ಜಿಎಚ್‌ಎಸ್ ರಸ್ತೆಯಿಂದ ಕೆಬಿ ಕಟ್ಟೆ ರಸ್ತೆ, ಪಿಎಂ ರಾವ್ ರಸ್ತೆಯಿಂದ ಕೆಎಸ್‌ರಾವ್ ರಸ್ತೆ, ಶರವು ದೇವಸ್ಥಾನ ರಸ್ತೆಯಿಂದ ಕೆಎಸ್ ರಾವ್ ರಸ್ತೆ, ಬಾವುಟಗುಡ್ಡದಿಂದ (ಸಿಟಿ ಸೆಂಟರ್ ಬಳಿ) ಕೆಎಸ್ ರಾವ್ ರಸ್ತೆ, ವಿಟಿ ರಸ್ತೆಯಿಂದ ಬಿಷಪ್ ಹೌಸ್ ಕಡೆಯ ರಸ್ತೆ, ಗದ್ದೆಗೇರಿ ರಸ್ತೆಯಿಂದ ಎಂ.ಗೋವಿಂದ ಪೈ ಸರ್ಕಲ್, ಡೊಂಗರಕೇರಿ ರಸ್ತೆಯಿಂದ ಎಂ. ಗೋವಿಂದ ಪೈ ಸರ್ಕಲ್, ಶಾರದಾ ಶಾಲೆಯಿಂದ ಗೋವಿಂದ ಪೈ ಸರ್ಕಲ್, ಮಿಲಾಗ್ರಿಸ್ ರಸ್ತೆಯಿಂದ ಹಂಪನಕಟ್ಟೆ ಜಂಕ್ಷನ್, ಫೋರಂ ಮಾಲ್‌ನಿಂದ ಎಬಿ ಶೆಟ್ಟಿ ಸರ್ಕಲ್‌ವರೆಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು *ಕೇಂದ್ರ ಗೃಹ ಸಚಿವರು ಸಂಚರಿಸುವ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಕೆಪಿಟಿ ಜಂಕ್ಷನ್- ಬಟ್ಟಗುಡ್ಡ- ಕದ್ರಿ ಕಂಬ್ಲ-ಬಂಟ್ಸ್ ಹಾಸ್ಟೆಲ್- ಅಂಬೇಡ್ಕರ್ ವೃತ್ತ- ಹಂಪನಕಟ್ಟೆ ಜಂಕ್ಷನ್, ಎಬಿ ಶೆಟ್ಟಿವರೆಗೆ ಹಾಗೂ ಹಂಪನಕಟ್ಟೆ-ರೈಲ್ವೆ ನಿಲ್ದಾಣ ರಸ್ತೆ, ಟೌನ್‌ಹಾಲ್ ರಸ್ತೆಯ ಎರಡೂ ಬದಿಯಲ್ಲಿ ಬೆಳಗ್ಗೆ 7ರಿಂದ ಸಂಜೆ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. *ಕೇಂದ್ರ ಗೃಹ ಸಚಿವರು ರೋಡ್‌ಶೋ ನಡೆಸುವ ಮಾರ್ಗವಾದ ಟೌನ್‌ಹಾಲ್, ಕ್ಲಾಕ್‌ಟವರ್, ಕೆಬಿ ಕಟ್ಟೆ, ಹಂಪನಕಟ್ಟೆ, ಕೆಎಸ್ ರಾವ್ ರಸ್ತೆ, ನವಭಾರತ ಸರ್ಕಲ್, ಪಿವಿಎಸ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬೆಳಗ್ಗೆ 7ರಿಂದ ಸಂಜೆ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ಅವಕಾಶ *ಕೆನರಾ ಹೈಸ್ಕೂಲ್ ಮೈದಾನ ಡೊಂಗರಕೇರಿ *ಸಂತ ಅಲೋಶಿಯಸ್ ಶಾಲಾ ಮೈದಾನ-ಬಾವುಟ್ಟಗುಡ್ಡ *ರೊಝಾರಿಯೊ ಶಾಲಾ ಮೈದಾನ-ಪಾಂಡೇಶ್ವರ *ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಎ.29ರಂದು ಸಂಜೆ 4:30ಕ್ಕೆ ನಗರದ ಪುರಭವನ ಸಮೀಪದ ಕ್ಲಾಕ್ ಟವರ್‌ನಿಂದ ಕೊಡಿಯಾಲ್‌ಬೈಲ್‌ನ ಮಂಜೇಶ್ವರ ಗೋವಿಂದ ಪೈ ಸರ್ಕಲ್ ವರೆಗೆ ರೋಡ್ ಶೋ ನಡೆಸಲಿದ್ದಾರೆ ಎಂದು ಪಕ್ಷದ ಕಚೇರಿ ಮೂಲಗಳು ತಿಳಿಸಿವೆ. ಮಧ್ಯಾಹ್ನ 2:30ಕ್ಕೆ ಉಡುಪಿಗೆ ಆಗಮಿಸಲಿರುವ ಅಮಿತ್ ಶಾ ಬಳಿಕ ಬೈಂದೂರಿನಲ್ಲಿ ರೋಡ್ ಶೋ ನಡೆಸಿ ಸಂಜೆಯ ವೇಳೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ.
Next Story