ಪ್ರಚಾರದ ವೇಳೆ ಪರಮೇಶ್ವರ್ ಗೆ ಕಲ್ಲೇಟು ಪ್ರಕರಣ: ಕಳಂಕಿತ ಅಧಿಕಾರಿಗಳ ವರ್ಗಾವಣೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು, ಎ.28: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಿ ಗಾಯ ಮಾಡಿರುವುದು ಹತಾಷೆ ಷಡ್ಯಂತ್ರ ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆರೊಪಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾಮಪತ್ರ ಸಲ್ಲಿಕೆ ವೇಳೆ ಕಲ್ಲು ತೂರಿದ್ದು ಮಹಿಳಾ ಪೇದೆ ಗಾಯಗೊಂಡರು. ಇಂದು ಪರಮೇಶ್ ಅವರೆ ಹಲ್ಲೆಗೆ ಒಳಗಾಗಿದ್ದಾರೆ. ಜಿಲ್ಲಾ ಆಡಳಿತದ ವೈಫಲ್ಯ ಷಡ್ಯಂತ್ರಕ್ಕೆ ಅವಕಾಶ ನೀಡಿದೆ. ಚುನಾವಣಾ ಆಯೋಗ ರಕ್ಷಣೆ ನೀಡಲಿ, ಕಳಂಕಿತ ಅಧಿಕಾರಿಗಳನ್ನು ವರ್ಗಾಯಿಸಲಿ' ಎಂದು ಒತ್ತಾಯಿಸಿದ್ದಾರೆ.
ತನಿಖೆಗೆ ಒತ್ತಾಯ: ವಿರೋಧ ಪಕ್ಷಗಳ ಕುಮ್ಮಕ್ಕಿನಿಂದಲೇ ಡಾ.ಜಿ.ಪರಮೇ ಶ್ವರ್ ಮೇಲೆ ಕಲ್ಲೆಸೆಯಲಾಗಿದೆ ಎಂದು ತುಮಕೂರು ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ ಆರೋಪಿಸಿದ್ದಾರೆ.
ಕೊರಟಗೆರೆಯ ಬೈರೇನಹಳ್ಳಿ ಬಳಿ ಪ್ರಚಾರದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೂವನ್ನು ಜೆಸಿಬಿ ಮೇಲಿಂದ ಎಸೆಯುವ ಸಂದರ್ಭ ದಲ್ಲಿಯೇ ಕಲ್ಲೇಟು ಬಿದ್ದಿರುವುದು ಅನುಮಾನಗಳಿಗೆ ಕಾರಣ ವಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಡಾ.ಜಿ.ಪರಮೇಶ್ವರ್ ಮೇಲೆ ಷಡ್ಯಂತ್ರ ನಡೆಸಿ ಕಲ್ಲೆಸೆಯಲಾಗಿದೆ, ಈ ಹಿಂದೆಯೂ ಈ ರೀತಿ ಆಗಿತ್ತು, ವಿರೋಧಿಗಳ ಕುಮ್ಮಕ್ಕಿನ ಬಗ್ಗೆ ತನಿಖೆ ಯಾಗಬೇಕಿದೆ, ಕಲ್ಲೇಟು ಬಿದ್ದಿದ್ದರಿಂದ ಪರಮೇಶ್ವರ್ ಅವರಿಗೆ ಬಲವಾದ ಏಟು ಬಿದ್ದಿದೆ ಎಂದರು.
ಡಾ.ಜಿ.ಪರಮೇಶ್ವರ್ ಅವರ ಜನಪ್ರಿಯತೆಯನ್ನು ಸಹಿಸಲಾಗದೇ ಈ ರೀತಿ ಷಡ್ಯಂತ್ರ ಮಾಡಲಾಗಿದೆ, ಇದು ಎರಡನೇ ಬಾರಿಗೆ ಈ ರೀತಿಯ ಕೃತ್ಯ ನಡೆದಿದ್ದು, ಇಂತಹ ಕೃತ್ಯವನ್ನು ಕಾಂಗ್ರೆಸ್ ಖಂಡಿಸಲಿದೆ ಎಂದರು.
ಮೊದಲ ಬಾರಿ ಕಲ್ಲೇಸೆತ ಮಾಡಿದ್ದ ಬೇರೆ ಪಕ್ಷದ ಕಾರ್ಯಕರ್ತನೆ ಹೊರತು ನಮ್ಮವರಲ್ಲ, ಹೀಗಲೂ ಹಾಗೆಯೇ ಆಗಿದೆ, ಘಟನೆಯ ಬಗ್ಗೆ ಕೂಲಂಕಷವಾಗಿ ವಿಚಾರಣೆ ಮಾಡಬೇಕು ಎಂದರು.
ಡಾ.ಜಿ.ಪರಮೇಶ್ವರ್ ಗೆ ಎಸೆದ ಕಲ್ಲು ನನಗೆ ಸಿಕ್ಕಿದ್ದು ಅದನ್ನು ಪೊಲೀಸರಿಗೂ ತೋರಿಸಿದ್ದೇನೆ, ಟಾರು ರಸ್ತೆಯಲ್ಲಿ ಇದ್ದಿದ್ದು ಒಂದೇ ಕಲ್ಲು, ಬೇಕಂತಲೇ ಇಂತಹ ಕೃತ್ಯವನ್ನು ವಿರೋಧಿಗಳು ಮಾಡಿದ್ದಾರೆ ಎಂದು ದೂರಿದರು.







